ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 16ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನಿನ್ನೆ ಸಂಜೆಯಿಂದ ಬಾಲಕಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾಯಿ ತಿಳಿಸಿದ್ದಾರೆ. ಇದೇ ವೇಳೆ ಆಟೋ ರಿಕ್ಷಾ ಚಾಲಕನಾದ ಓರ್ವ ಯುವಕನೊಂದಿಗೆ ಬಾಲಕಿ ತೆರಳಿದ ಬಗ್ಗೆ ಸಂಶಯವನ್ನು ಕೂಡಾ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.