16ರ ಬಾಲಕಿಯೊಂದಿಗೆ ಮದುವೆಗೆ ಒತ್ತಾಯ: ಯುವಕ ಸೆರೆ
ಮಂಜೇಶ್ವರ: 16ರ ಹರೆಯದ ಬಾಲಕಿಯನ್ನು ಮದುವೆ ಮಾಡಿಕೊ ಡಬೇಕೆಂದು ಒತ್ತಾಯಿಸಿದ ಆರೋಪ ದಂತೆ ಯುವಕನ ವಿರುದ್ಧ ಮಂಜೇಶ್ವರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
ಕರ್ನಾಟಕ ಬಂಟ್ವಾಳ ನಿವಾಸಿ ವಿಕ್ರಮ (22) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯ ನಿವಾಸಿಯಾದ 16ರ ಬಾಲಕಿಯನ್ನು ವಿಕ್ರಮ ಪ್ರೀತಿಸಿದ್ದನೆನ್ನಲಾಗಿದೆ. ಇತ್ತೀಚೆಗೆ ಬಾಲಕಿಯ ಮನೆಗೆ ತಲುಪಿದ ವಿಕ್ರಮ ಬಾಲಕಿಯನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಆಕೆಯ ಹೆತ್ತವರನ್ನು ಒತ್ತಾಯಿಸಿದ್ದಾನೆನ್ನ ಲಾಗಿದೆ. ಈ ಬಗ್ಗೆ ಬಾಲಕಿಯ ಹೆತ್ತವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ಯುವಕನನ್ನು ಬಂಧಿಸಿದ್ದಾರೆ.