1624 ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಸೂಪರ್ ಮಾರ್ಕೆಟ್ ಮಾಲಕ  ಸೆರೆ

ಕಾಸರಗೋಡು: ಭಾರೀ ಪ್ರಮಾಣದ  ತಂಬಾಕು ಉತ್ಪನ್ನಗಳ ಸಹಿತ ಸೂಪರ್ ಮಾರ್ಕೆಟ್ ಮಾಲಕನನ್ನು ಬಂಧಿಸಲಾಗಿದೆ.

ಕಾಞಂಗಾಡ್ ಮಡಿಯಾನ್‌ನ ಸೂಪರ್ ಮಾರ್ಕೆಟ್ ಮಾಲಕನಾದ ಕಾಸರಗೋಡು ತಳಂಗರೆ ಕೊರಕೋಡು ರೈಹಾನ ಮಂಜಿಲ್‌ನ ಕೆ.ಎಂ. ಜಾಬಿರ್ (4೦) ಎಂಬಾತನನ್ನು ಹೊಸದುರ್ಗ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ತಂಬಾಕು  ಉತ್ಪನ್ನ ಮಾರಾಟ ಗೈಯ್ಯಲಾಗುತ್ತಿದೆಯೆಂಬ ಸೂಚನೆ ಮೇರೆಗೆ ಸೂಪರ್ ಮಾರ್ಕೆಟ್ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ನಿನ್ನೆ ಸಂಜೆ ೭ ಗಂಟೆಗೆ ಇನ್‌ಸ್ಪೆಕ್ಟರ್ ಹಾಗೂ ತಂಡ ಸೂಪರ್ ಮಾರ್ಕೆಟ್‌ಗೆ ತಲುಪಿದ್ದರು.  ಈ ವೇಳೆ

ಅಂಗಡಿ ಮಾಲಕ ಫೋನ್‌ನಲ್ಲಿ ಮಾತನಾಡುತ್ತಿದ್ದನೆನ್ನಲಾಗಿದೆ. ಪೊಲೀಸರನ್ನು ಕಂಡೊಡನೆ ಆತ ‘ಈಗ ತರುವುದು ಬೇಡ’ ಎಂದು ಹೇಳಿ ಫೋನ್ ಇರಿಸಿದನೆಂದು  ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

ಅಲ್ಪ ಹೊತ್ತಿನಲ್ಲೇ ಅಂಗಡಿಗೆ ತಲುಪಿದ ನೌಕರನನ್ನು ತನಿಖೆ ಗೊಳಪಡಿಸಿದಾಗಲೇ ಈಗ ತರುವುದು ಬೇಡ ಎಂದು ಹೇಳಿರುವುದು ತಂಬಾಕು ಉತ್ಪನ್ನಗಳನ್ನಾಗಿದೆಯೆಂದು ತಿಳಿದುಬಂತು. ಅನಂತರ ಜಾಬಿರ್‌ನನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಿದ್ದು, ಮಡಿಯನ್ ಕುಲೋಂ ಬಳಿ ಕ್ವಾರ್ಟ ರ್ಸ್‌ನ ಮಂಚದಡಿ ಬಚ್ಚಿಟ್ಟ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page