ಕಾಸರಗೋಡು: 16ರ ಹರೆಯದ ಬಾಲಕಿಯ ಮನೆಗೆ ಸಂಶಯಾಸ್ಪದವಾದ ರೀತಿಯಲ್ಲಿ ತಲುಪಿದ ಯುವಕನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಯುವಕನ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಪರಪ್ಪ ನಿವಾಸಿಯಾದ ಕರುಣಾಕರನ್ರ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ನಿನ್ನೆ ಸಂಜೆ ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಘಟನೆ ನಡೆದಿದೆ. 16ರ ಬಾಲಕಿ ವಾಸಿಸುವ ಮನೆಗೆ ಕರುಣಾಕರನ್ ನಿರಂತರ ಬರುತ್ತಿದ್ದನೆನ್ನಲಾಗಿದೆ. ಇದರಲ್ಲಿ ಶಂಕೆ ತೋರಿದ ಸ್ಥಳೀಯರು ಯುವಕನ ಮೇಲೆ ನಿಗಾ ಇರಿಸಿದ್ದರು. ನಿನ್ನೆ ಸಂಜೆಯೂ ಯುವಕ ಬಾಲಕಿಯ ಮನೆಗೆ ತಲುಪಿದ್ದಾನೆ. ಈ ಸಮಯದಲ್ಲಿ ಮನೆಯಲ್ಲಿ ಬೇರೆ ಯಾರೂ ಇಲ್ಲವೆಂದು ತಿಳಿದುಕೊಂಡ ಸ್ಥಳೀಯರು ಕರುಣಾಕರನ್ನನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆದರೆ ಬಾಲಕಿ ದೂರು ನೀಡಲು ಸಿದ್ಧಳಾಗಿಲ್ಲ. ಇವರಿಬ್ಬರೂ ಪ್ರೀತಿಸುತ್ತಿದ್ದರೆನ್ನಲಾಗಿದೆ.
