17ರ ಬಾಲಕಿಗೆ ಕಾರಿನೊಳಗೆ, ಗೋವಾದ ಹೋಟೆಲ್, ಆಸ್ಪತ್ರೆಯಲ್ಲಿ ಕಿರುಕುಳ: ಇಬ್ಬರ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಬಾಲಕಿಯನ್ನು ವಿವಿಧೆಡೆಗಳಿಗೆ ಕರೆದೊಯ್ದು ಕಿರುಕುಳ ನೀಡಲಾಯಿತೆಂಬ ಆರೋಪದಂತೆ ಬದಿಯಡ್ಕ ಹಾಗೂ ವಿದ್ಯಾನಗರ  ಪೊಲೀಸ್ ಠಾಣೆಗಳಲ್ಲಾಗಿ ಮೂರು ಪೋಕ್ಸೋ ಕೇಸುಗಳನ್ನು ದಾಖಲಿಸಲಾಗಿದೆ.

ಕಿರುಕುಳಕ್ಕೊಳಗಾದ ಬಾಲಕಿ ಈ ಹಿಂದೆ 13 ಪೋಕ್ಸೋ  ಪ್ರಕರಣಗಳಲ್ಲಿ ದೂರುಗಾರ್ತಿಯಾಗಿ ದ್ದಳು.  ಕಿರುಕುಳ ನಡೆದ ಸಂದರ್ಭದಲ್ಲಿ ಬಾಲಕಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಳು. ಈಗ 19 ವರ್ಷ ಪ್ರಾಯದ ದೂರುಗಾರ್ತಿಗೆ ಅಂದು 17 ವರ್ಷವಾಗಿತ್ತು.  2022 ಎಪ್ರಿಲ್ 28ರಂದು ನಡೆದ ಮೊದಲ ಘಟನೆಗೆ ಸಂಬಂಧಿಸಿ ಕೇಸು ದಾಖಲಿಸಲಾಗಿದೆ. ಕ್ವಾರ್ಟರ್ಸ್‌ವೊಂದರ ಮಾಲಕನಾದ ಮುಸ್ತಫ ಎಂಬಾತ ಬಾಲಕಿಯನ್ನು  ಕಾರಿನಲ್ಲಿ   ಆದೂರಿನ ಓರ್ವ ತಂಙಳ್‌ನ ಮನೆಗೆ ಕರೆದೊಯ್ದಿದ್ದು, ಅಲ್ಲಿ ತಂಙಳ್ ಕಿರುಕುಳ ನೀಡಲೆತ್ನಿಸಿದ್ದಾನೆನ್ನ ಲಾಗಿದೆ. ಕಿರುಕುಳ ಯತ್ನವನ್ನು ತಡೆದಾಗ ಆಕೆಯ ಮುಖಕ್ಕೆ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅದೇ ದಿನ ಕಾರಿನಲ್ಲಿ ಬಾಲಕಿಯನ್ನು ಮಂಗಳೂರಿನ ಲಾಡ್ಜ್‌ವೊಂದಕ್ಕೆ ತಲುಪಿಸಿ ಕಿರುಕುಳ ನೀಡಿರುವುದಾಗಿಯೂ ದೂರಲಾಗಿದೆ. ಎಪ್ರಿಲ್ 29ರಂದು ಪ್ರಕರಣದ  ಒಂದನೇ ಆರೋಪಿಯಾದ ಮುಸ್ತಫ ಬಾಲಕಿಯನ್ನು ಕಾರಿನಲ್ಲಿ ಗೋವಾಕ್ಕೆ ಕರೆದೊಯ್ದಿದ್ದನು. ಪ್ರಯಾಣ ವೇಳೆಯೂ ಕಾರಿನಲ್ಲಿ ಬಾಲಕಿಗೆ ಕಿರುಕುಳ ನೀಡಲಾಗಿದೆ. ಅನಂತರ ಗೋವಾಕ್ಕೆ ತಲುಪಿಸಿ ಹೋಟೆಲ್ ಕೊಠಡಿಯಲ್ಲಿ ಕಿರುಕುಳ ನೀಡಲಾಯಿತು. ಅನಂತರ ಬಾಲಕಿಯನ್ನು ಮರಳಿ ಕಾಸರಗೋಡಿಗೆ ತಲುಪಿಸಲಾಯಿತು.  ಈ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಯಿತು. ಅಲ್ಲಿಯೂ ಬಾಲಕಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಘಟನೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page