17ರ ಬಾಲಕಿಗೆ ಕಿರುಕುಳ: ಆರೋಪಿ ಬಂಧನ
ಕುಂಬಳೆ: ದೈವ ಮಹೋತ್ಸವ ಕಾಣಲು ತಲುಪಿದ ಬಾಲಕಿಯೊಂ ದಿಗೆ ಪರಿಚಯಗೊಂಡು ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಲ್ಲಿ ಆರೋಪಿ ಸೆರೆಗೀಡಾಗಿದ್ದಾನೆ. ಕರೋಪ್ಪಾಡಿ ಶಂಕರಮೂಲೆಯ ನಿಖಿಲ್ ಕುಮಾರ್ (20) ಎಂಬಾತ ನನ್ನು ಕುಂಬಳೆ ಪೊಲೀಸರು ಬಂಧಿಸಿ ದ್ದಾರೆ. ಕೆಲವು ವಾರಗಳ ಹಿಂದೆ ಕಿರುಕುಳ ಘಟನೆ ನಡೆದಿದೆ. ಅನಂ ತರ ಬಾಲಕಿ ಶಾಲೆಗೆ ನಿರಂತರ ಗೈರು ಹಾಜರಾಗಿದ್ದು, ಇದನ್ನು ಅಧ್ಯಾಪಿಕೆ ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು. ಬಾಲಕಿಯಿಂ ದ ಹೇಳಿಕೆ ದಾಖಲಿಸಿಕೊಂಡಾಗ ಘಟನೆ ನಡೆದಿರುವುದು ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.