17ರ ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣ : ಆರೋಪಿ ಸೆರೆ
ಅಡೂರು: ಹದಿನೇಳರ ಹರೆಯದ ಬಾಲಕಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.
ಅಡೂರು ಪಾಂಡಿಯ ಸುರೇಶ್ (20) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.
ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಬಾಲಕಿಗೆ ಆರೋಪಿ ಕಿರುಕುಳ ನೀಡಿದ್ದಾನೆನ್ನ ಲಾಗಿದೆ. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದಾಗ ಐದು ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ತಿಳಿದುಬಂದಿದೆ. ಈ ವಿಷಯವನ್ನು ವೈದ್ಯರು ಆದೂರು ಪೊಲೀಸರಿಗೆ ತಿಳಿಸಿದರು. ಬಾಲಕಿಗೆ 18 ವರ್ಷ ತುಂಬಲು ಹತ್ತು ದಿನಗಳು ಮಾತ್ರ ಬಾಕಿಯಿರುವಾಗ ಕಿರುಕುಳ ಘಟನೆ ತಿಳಿದುಬಂದಿದೆ.