17295 ಪ್ಯಾಕೆಟ್ ತಂಬಾಕು ಉತ್ಪನ್ನ ವಶ ಮೂವರ ವಿರುದ್ಧ ಕೇಸು

ಕಾಸರಗೋಡು: ಮಧೂರು ಸಮೀಪದ ಚೆಟ್ಟುಂಗುಳಿಯಲ್ಲಿ ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ಪೊಲೀಸರು ಇಂದು ಬೆಳಿಗ್ಗೆ ನಡೆಸಿದ ದಾಳಿಯಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿದ್ದ 17,295 ಪ್ಯಾಕೆಟ್ ತಂಬಾಕು ಉತ್ಪನ್ನವನ್ನು ವಶಪಡಿಸಲಾಗಿದೆ. 18 ಗೋಣಿ ಚೀಲಗಳಲ್ಲಾಗಿ ಇದನ್ನು ತುಂಬಿಸಿಡಲಾಗಿತ್ತು. ಇದಕ್ಕೆ ಸಂಬಂಧಿಸಿ ಅಂದ್ರಾಯಿ, ಖಲೀಲ್, ಅಬೂಬಕರ್ ಸಿದ್ದಿಕ್ ಎಂಬಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

RELATED NEWS

You cannot copy contents of this page