17ರ ಬಾಲಕಿಗೆ ಲೈಂಗಿಕ ಕಿರುಕುಳ : ಗರ್ಭಿಣಿಯಾದಾಗ ಆರೋಪಿ ಗೋವಾಕ್ಕೆ ಪರಾರಿ

ಕುಂಬಳೆ: ಹದಿನೇಳರ ಹರೆ ಯದ ಬಾಲಕಿಯೊಂದಿಗೆ ಪ್ರೀತಿ ನಟಿಸಿದ ಬಳಿಕ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಆರೋಪ ದಂತೆ ಕುಂಬಳೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಇದೇ ವೇಳೆ ಆರೋಪಿ ಗೋವಾಕ್ಕೆ ಪರಾರಿ ಯಾಗಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ಅತ್ತ ತೆರಳಿದ್ದಾರೆ.

ಕುಂಬಳ ಪೊಲೀಸ್ ಠಾಣೆ ವ್ಯಾಪ್ತಿಯ 17ರ ಹರೆಯದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಹೊಟ್ಟೆ ನೋವು ಅನುಭವಗೊಂಡ ಬಾಲಕಿಯನ್ನು ವೈದ್ಯರಲ್ಲಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಾಳೆಂದು ತಿಳಿದುಬಂದಿದೆ.  ಅನಂತರಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು. ಬಾಲಕಿಯಿಂದ ಹೇಳಿಕೆ ದಾಖಲಿಸಿದಾಗ  25ರ ಹರೆಯದ ಯುವಕ ಪ್ರೀತಿ ನಟಿಸಿ ಕಿರುಕುಳ ನೀಡಿರುವುದಾಗಿ ತಿಳಿದಬಂದಿದೆ. ಬಾಲಕಿ ಗರ್ಭಿಣಿ ಯೆಂದು ತಿಳಿದ ಹಿನ್ನೆಲೆಯಲ್ಲಿ ಆರೋಪಿ ಗೋವಾಕ್ಕೆ ಪರಾರಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page