18 ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಸಫಿಯಾಳ ಅಸ್ತಿಪಂಜರ ಹೆತ್ತವರಿಗೆ ಇಂದು ಹಸ್ತಾಂತರ
ಕಾಸರಗೋಡು: 18 ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಮೂಲತಃ ಮಡಿಕೇರಿ ಅಯ್ಯಂಗೇರಿಯ ಮೊಯ್ದು-ಆಯಿಷಾ ದಂಪತಿ ಪುತ್ರಿ, ಗೋವಾದಲ್ಲಿ ಕಟ್ಟಡ ಗುತ್ತಿಗೆದಾರನಾಗಿದ್ದ ಮುಳಿಯಾರು ಮಾಸ್ತಿಕುಂಡು ನಿವಾಸಿ ಕೆ.ಸಿ. ಹಂಸ ಎಂಬವರ ಮನೆ ಕೆಲಸದಾಳಾಗಿದ್ದ ಸಫಿಯಾ (13)ಳ ಅಸ್ತಿಪಂಜರವನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇಂದು ಆಕೆಯ ಹೆತ್ತವರಿಗೆ ಹಸ್ತಾಂತರಿಸಲಿದೆ. ಇದಕ್ಕಾಗಿ ಸಫಿಯಾಳ ಮನೆಯವರು ಮತ್ತು ಸಂಬಂಧಿಕರು ಇಂದು ಕಾಸರಗೋಡಿಗೆ ಆಗಮಿಸಿದ್ದಾರೆ.
ಸಫಿಯಾಳ ತಲೆಬುರುಡೆ ಸೇರಿ ದಂತೆ ಅಸ್ತಿಪಂಜರವನ್ನು ಮತಾಚಾರ ಪ್ರಕಾರ ದಫನಗೈಯ್ಯಲು ತಮಗೆ ಬಿಟ್ಟುಕೊಡುವಂತೆ ಆಕೆಯ ಹೆತ್ತವರು ಜಿಲ್ಲಾ ಪ್ರಿನ್ಸಿಪಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಅವರಿಗೆ ಬಿಟ್ಟು ಕೊಡಲು ನ್ಯಾಯಾಲಯ ತಿಳಿಸಿತ್ತು. ೨೦೦೮ ಜನವರಿ ೫ರಂದು ಸಫಿಯಾಳ ಅಸ್ತಿಪಂಜರ ತಲೆಬುರುಡೆ ಸೇರಿದಂತೆ ಅಸ್ತಿಪಂಜರವನ್ನು ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟಿನ ಬಳಿಯಿಂದ ಪೊಲೀಸರು ಪತ್ತೆಹಚ್ಚಿದ್ದಾರೆ.
ಸಫಿಯಾಳನ್ನು ಗೋವಾದಲ್ಲಿರುವ ತಮ್ಮ ಮನೆ ಕೆಲಸಕ್ಕಾಗಿ ಗುತ್ತಿಗೆದಾರ ಕೆ.ಸಿ. ಹಂಸ ಮತ್ತು ಅವರ ಮನೆಗೆ ಕರೆದೊಯ್ದಿದ್ದನು. ಅಲ್ಲಿ ಆಕೆಯನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತೆಂದು ಆರೋಪಿಸಲಾಗಿತ್ತು. ಮಾತ್ರವಲ್ಲ ಆಕೆಯ ದೇಹಕ್ಕೆ ಬಿಸಿನೀರು ಸುರಿಯಲಾಗಿತ್ತೆಂದೂ ಅದರಿಂದ ಆಕೆ ಗಂಭೀರ ಸುಟ್ಟು ಗಾಯಗೊಂಡಿದ್ದಳೆಂದು ಹೇಳಲಾಗಿತ್ತು. ನಂತರ ಆಕೆಯನ್ನು 2006ರಲ್ಲಿ ಅಲ್ಲೇ ಕೊಲೆಗೈದ ಬಳಿಕ ಮೃತದೇಹವನ್ನು ಗೋವಾದಲ್ಲಿ ನಿರ್ಮಾಣ ಹಂತದಲ್ಲಿರುವ ಅಣೆಕಟ್ಟಿನ ಬಳಿ ಹೂತು ಹಾಕಲಾಗಿತ್ತೆಂದು ಈ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿತ್ತು. ಅದಾದ ಬಳಿಕ 2008 ಜೂನ್ 5ರಂದು ಮೃತದೇಹದ ಅಸ್ತಿಪಂಜರ ಪತ್ತೆಹಚ್ಚಲಾಗಿತ್ತು. ಈ ಪ್ರಕರಣದ ಆರೋಪಿ ಗುತ್ತಿಗೆದಾರ ಕೆ.ಪಿ. ಹಂಸನಿಗೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಈ ಹಿಂದೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಮೇಲ್ಮನವಿಯಲ್ಲಿ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಇಳಿಸಿತ್ತು.
ಆದರೆ ಸಫಿಯಾಳ ಮೃತದೇಹವನ್ನು ಪುರಾವೆಯಂಗವಾಗಿ ಸಂಗ್ರಹಿಸಿಡಲಾಗಿತ್ತು. ನಂತರ ಆಕೆಯ ಹೆತ್ತವರು ಮಾಡಿಕೊಂಡ ಮನವಿಯಂತೆ ಅದನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ಇಂದು ಅವರಿಗೆ ಬಿಟ್ಟುಕೊ ಡಲಾ ಗುವುದು. ತಲೆಬುರುಡೆ ಸೇರಿದಂತೆ ಸಫಿಯಾಳ ಅಸ್ತಿಪಂಜರವನ್ನು ದಫನಗೈ ಯ್ಯುವ ಮೊದಲು ಇಂದು ತಳಂಗರೆಯ ಮಸೀದಿಯಲ್ಲಿ ಶುದ್ಧೀಕರಣ ನಡೆಸಿದ ಬಳಿಕ ಅದನ್ನು ಮಡಿಕೇರಿ ಅಯ್ಯಂಗೇರಿ ಹಳೆಯ ಜುಮಾ ಮಸೀದಿ ಅಂಗಣದಲ್ಲಿ ದಫನಗೈಯ್ಯಲು ಮನೆಯವರು ತೀರ್ಮಾ ನಿಸಿದ್ದಾರೆ. ಮೊಯ್ದು-ಆಯಿಷಾ ದಂಪತಿ ಯ ಆರು ಮಂದಿ ಮಕ್ಕಳಲ್ಲಿ ಸಫಿಯಾ ಹಿರಿಯವಳಾ ಗಿದ್ದಳು. ಅಬ್ದುಲ್ ಅಸೀಬ್, ಮೊಹಮ್ಮದ್ ಅಲ್ತಾಫ್, ನಿಫಾಹ್ ಅಬು, ಅಫ್‌ಸಾಫ್ ಮತ್ತು ಅರ್ಶಾನ ಈಕೆಯ ಸಹೋದರ-ಸಹೋದರಿಯರು.