ಕುಂಬಳೆ: 18.240 ಗ್ರಾಂ ಎಂಡಿಎಂಎ ಸಹಿತ ಸೆ. 2ರಂದು ಕುಂಬಳೆ ಪೊಲೀಸರು ಬಂಧಿಸಿದ ಕೊಡ್ಯಮ್ಮೆ ಪೂಕಟ್ಟೆಯ ಅಬ್ದುಲ್ ಅಸೀಸ್ ಎಂಬಾತನಿಗೆ ಮಾದಕವಸ್ತು ತಲುಪಿಸಿದ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಲಪ್ಪುರಂ ಮಾರಾಂಜೇರಿ ನಿವಾಸಿ ವಿಷ್ಣು ಹಾಗೂ ತೃಶೂರು ನಿವಾಸಿಯೂ ಕರ್ನಾಟಕದ ಸುರತ್ಕಲ್‌ನ ಕೂಲ್ ಬಾರ್‌ನಲ್ಲಿ ಕೆಲಸ ನಿರ್ವಹಿಸುವ ಹಬಿ (24)ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಸೆ. ೨ರಂದು ಸೆರೆಗೀಡಾದ ಅಬ್ದುಲ್ ಅಸೀಸ್‌ನ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ಪರಿಶೀಲಿಸಿದಾಗ ದ್ವಿತೀಯ ಆರೋಪಿಯಾದ ವಿಷ್ಣುವಿನ ಕುರಿತು ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಪೆಶಲ್ ಸ್ಕ್ವಾಡ್ ಸದಸ್ಯರ ಸಹಾಯದೊಂದಿಗೆ ಕುಂಬಳೆ ಎಸ್‌ಎಚ್‌ಒ ಇನ್‌ಚಾರ್ಜ್ ಪ್ರದೀಪ್ ಕುಮಾರ್ ವಿಷ್ಣುವನ್ನು ಬಂಧಿಸಿದ್ದರು. ಈತನನ್ನು ತನಿಖೆಗೊಳಪಡಿಸಿದಾಗ ಅಬ್ದುಲ್ ಅಸೀಸ್‌ಗೆ ಮಾದಕ ವಸ್ತು ಹಸ್ತಾಂತರಿಸಲು ಈತನನ್ನು ನೇಮಿಸಿ ರುವುದು ಹಬಿ ಆಗಿದ್ದಾನೆಂದು ತಿಳಿದು ಬಂದಿದೆ. ಇದರಂತೆ ಹಬಿಯನ್ನು ಕುಂಬಳೆ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಾದ ದ್ವಿತೀಯ ಆರೋಪಿ ವಿಷ್ಣುವಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಬಂಧಿತ ಮೂರನೇ ಆರೋಪಿಯಾದ ಹಬಿಯನ್ನು ತನಿಖೆ ನಡೆಸಿದ ಬಳಿಕ ನ್ಯಾಯಾಲ ಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.