2.8 ಕಿಲೋ ಎಂಡಿಎಂಎ ವಶ: ಯುವತಿ ಸಹಿತ ಇಬ್ಬರ ಬಂಧನ

ಕಾಸರಗೋಡು: ಕಾಸರಗೋಡು ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿಯಾ ಗಿದ್ದ ಟಿ. ಉತ್ತಮ್ ದಾಸ್‌ರ ನೇತೃತ್ವದಲ್ಲಿ  ನಡೆದ ಕಾರ್ಯಾ ಚರಣೆಯಲ್ಲಿ ಭಾರೀ  ಪ್ರಮಾಣದ ಮಾದಕವಸ್ತು ವಶಪಡಿಸಲಾಗಿದೆ.  ಈ ಸಂಬಂಧ ಯುವತಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಮುಕ್ಕಂ ಪುಳಪೊ ಯಿಲ್ ಪುಲ್ಲಂಬಾಡಿ ಪರಂಬಿಲ್ ಪಿ. ಮುಹಮ್ಮದ್ ಹನೀಫ (36), ಕಲ್ಲಿಕೋಟೆ ಬೇಪೂರಿನ ರೈಹಾನತ್ (45) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಕೈಯಿಂದ 2.8 ಕಿಲೋ ಎಂಡಿಎಂಎ ವಶಪಡಿಸಲಾಗಿದೆ. ಕಲ್ಲಿಕೋಟೆ ರೂರಲ್ ಎಸ್ಪಿಗೆ ಲಭಿಸಿದ ಮಾಹಿತಿ ಯ ಆಧಾರದಲ್ಲಿ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಟಿ. ಉತ್ತಮ್‌ದಾಸ್, ತಾಮರಶ್ಶೇರಿ ಡಿವೈಎಸ್ಪಿ ಪಿ. ವಿನೋದ್ ಕುಮಾರ್ ಎಂಬಿವರ ಮೇಲ್ನೋಟದಲ್ಲಿ  ಕಾರ್ಯಾಚರಣೆ ನಡೆಸಲಾಗಿದೆ. 517 ಗ್ರಾಂ ಎಂಡಿಎಂಎ ಸಹಿತ ಮುಹಮ್ಮದ್ ಹನೀಫನನ್ನು ಮೊದಲು ಬಂಧಿಸಲಾ ಗಿತ್ತು. ಆತನನ್ನು ಪೊಲೀಸ್ ಠಾಣೆಗೆ ತಲುಪಿಸಿ ತನಿಖೆಗೊಳಪಡಿಸಿದಾಗ  ಇನ್ನಷ್ಟು ಮಾದಕವಸ್ತು  ಕೈವಶ ವಿರುವುದು ಪತ್ತೆಯಾಗಿದೆ.

You cannot copy contents of this page