20ರ ಯುವತಿ ಬಾವಿಗೆ ಬಿದ್ದು ಮೃತ್ಯು
ತಾಣೂರು: 20ರ ಹರೆಯದ ಯುವತಿ ಬಾವಿಗೆ ಬಿದ್ದು ಮೃತಪಟ್ಟಿ ದ್ದಾರೆ. ಮುಕ್ಕೋಲ ನಿವಾಸಿ ಋಷಿಕ ಮೃತಪಟ್ಟವರು. ನಿನ್ನೆ ಸಂಜೆ ೬ ಗಂಟೆಗೆ ಮನೆ ಪರಿಸರದಲ್ಲಿರುವ ಬಾವಿಯಲ್ಲಿ ಯುವತಿಯನ್ನು ಪತ್ತೆಹಚ್ಚಲಾಗಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಸಂಜೆಯಿಂದ ಯುವತಿ ನಾಪತ್ತೆಯಾಗಿದ್ದು, ಹುಡುಕಾಟದ ಮಧ್ಯೆ ಬಾವಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ತಾಣೂರಿನ ಅಗ್ನಿಶಾಮಕ ದಳ ತಲುಪಿ ಆಕೆಯನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಸಾವು ಸಂಭವಿಸಿತ್ತು. ಮೃತರು ತಂದೆ ಸನಲ್, ತಾಯಿ ರೋಷ್ನಿ, ಸಹೋದರ ಸಾರಂಗ್, ಸಹೋದರಿ ಋತಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.