2025-26ನೇ ಆರ್ಥಿಕ ವರ್ಷದ ರಾಜ್ಯ ಬಜೆಟ್: ಕೃಷಿ ವಲಯಕ್ಕೆ, ಲೈಫ್ ಯೋಜನೆಗೆ ಆದ್ಯತೆ


ತಿರುವನಂತಪುರ: 2025-26ನೇ ವಿತ್ತೀಯ ವರ್ಷದ ಬಜೆಟ್ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ವಿಧಾನಸಭೆಯ ಲ್ಲಿ ಇಂದು ಬೆಳಿಗ್ಗೆ ಮಂಡಿಸಿದರು.
ಬಜೆಟ್ನಲ್ಲಿ ಕೃಷಿ ವಲಯಕ್ಕೆ 227.40 ಕೋಟಿ ರೂ., ಭತ್ತ ಕೃಷಿ ಅಭಿವೃದ್ಧಿಗೆ 150 ಕೋಟಿ ರೂ. ಮೀಸಲಿರಿಸಲಾಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸಲು 100 ಕೋಟಿ ರೂ., ವನಸಂರಕ್ಷಣೆ ಕಾರ್ಯಚಟು ವಟಿಕೆಗಳನ್ನು ಇನ್ನಷ್ಟು ಸಮರ್ಪP ಗೊಳಿಸಲು 50.3 ಕೋಟಿ ರೂ., ಮಣ್ಣು ಸಂರಕ್ಷ ಣೆಗೆ 77.9 ಕೋಟಿ ರೂ., ಮೀನು ಕಾರ್ಮಿಕರಿಗೆ ಗ್ರೂಪ್ ಇನ್ಶೂರೆನ್ಸ್ಗೆ 10 ಕೋಟಿ ರೂ.ವನ್ನು ಬಜೆಟ್ನಲ್ಲಿ ಮೀಸಲಿರಿಸಲಾಗಿದೆ.
ಮೀನುಗಾರಿಕಾ ವಲಯಕ್ಕೆ 205 ಕೋಟಿ ರೂ., ತೆಂಗಿನ ಕೃಷಿ ಅಭಿವೃದ್ಧಿ ಯೋಜನೆಗೆ 100 ಕೋಟಿ ರೂ., ಬೆಳೆ ವಿಮೆ ಯೋಜನೆಯ ಸರಕಾರದ ಪಾಲು ರೂಪದಲ್ಲಿ 33.14 ಕೋಟಿ ರೂ., ಸಮಗ್ರ ತರಕಾರಿ ಅಭಿವೃದ್ಧಿ ಯೋಜನೆಗೆ 78,48 ಕೋಟಿ ರೂ., ಬೀದಿ ನಾಯಿಗಳ ದಾಳಿ ತಡೆಗಟ್ಟಲು 2 ಕೋಟಿ ರೂ., ತೀರ್ಥಾಟನಾ ಪ್ರವಾಸೋದ್ಯಮಕ್ಕೆ 200 ಕೋಟಿ ರೂ., ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗೆ 100 ಕೋಟಿ ರೂ. ಮೀಸಲಿರಿಸಲಾಗಿದೆ.
ಕೇರಳಕ್ಕೆ 10 ಸಾವಿರ ಕೋಟಿ ರೂ.ಗಳ ಬಯೋ ಎಥೆನಲ್ನ ಅಗತ್ಯ ಉಂಟಾಗಲಿದೆ. ಇದರ ಉತ್ಪಾದನೆ ರೈತರಿಗೆ ಅತ್ಯಂತ ಪ್ರಯೋ ಜನಕಾರಿಯಾಗಲಿದೆ. ಇದಕ್ಕಾಗಿ ಬಯೋ ಎಥೆನಾಲ್ ಸಂಶೋಧನೆ ಹಾಗೂ ಉತ್ಪಾದನೆಗಾಗಿ ಬಜೆಟ್ನಲ್ಲಿ 10 ಕೋಟಿ ರೂ. ಮೀಸಲಿರಿಸ ಲಾಗಿದೆ. ಉನ್ನತ ಶಿಕ್ಷಣ ವಲಯಗಳಲ್ಲಿ 7 ಹಿರಿಮೆ ಕೇಂದ್ರಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ 25 ಕೋಟಿ ರೂ. ಮೀಸಲಿರಿಸಲಾಗಿದೆ. ಲೈಫ್ ಭವನ ಯೋಜನೆಯಂತೆ 2025-26ನೇ ವರ್ಷದಲ್ಲಿ 1 ಲಕ್ಷ ಮನೆಗಳ ನಿರ್ಮಾಣ ಕೆಲಸ ಪೂರ್ತೀಕರಿಸಲಾಗುವುದು. ಇದಕ್ಕೆ ಬಜೆಟ್ನಲ್ಲಿ 1160 ಕೋಟಿ ರೂ. ಮೀಸಲಿರಿಸಲಾಗಿದೆ. ಸರ್ವೀಸ್ ಪೆನ್ಶನ್ ಸುಧಾರಣೆಯ ಕೊನೆಯ ಹಂತದ ಕಂತು ಆದ 600 ಕೋಟಿ ರೂ.ವನ್ನು ನೀಡಲಾಗುವುದೆಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೈಡ್ರೋಜನ್ ಇಂಧನ ಉತ್ಪಾದಿಸಲಾಗುವುದು. ಇದಕ್ಕಾಗಿ ಹೈಡ್ರೋಜನ್ ವ್ಯಾಲಿ ಯೋಜನೆಗೆ ರೂಪು ನೀಡಲಾಗುವುದು. ಅದಕ್ಕಾಗಿ ಹಣ ಮೀಸಲಿರಿಸಲಾಗುವುದು. ರಾಜ್ಯದಲ್ಲಿ ಹೆಲ್ತ್ ಟೂರಿಸಂ ಹಬ್ ಯೋಜನೆ ಆರಂಭಿಸಲಾಗುವುದು. ಹೆಲ್ತ್ ಟೂರಿಸಂ(ಆರೋಗ್ಯ ಪ್ರವಾಸೋದ್ಯಮ) ಹಬ್ಬನ್ನಾಗಿ ರಾಜ್ಯವನ್ನು ಬದಲಾಯಿಸಲಾ ಗುವುದು. ಇದಕ್ಕಾಗಿ ಬಜೆಟ್ನಲ್ಲಿ 50 ಕೋಟಿ ರೂ. ಮೀಸಲಿರಿಸಲಾ ಗಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಸೇತುವೆಗಳು ಮತ್ತು ರಸ್ತೆಗಳಿಗಾಗಿ 3060 ಕೋಟಿ ರೂ., ಕಾರುಣ್ಯ ಆರೋಗ್ಯ ಯೋಜನೆಗೆ 700 ಕೋಟಿ ರೂ. ಹಾಗೂ ಆರೋಗ್ಯ ಇಲಾಖೆಗೆ ಒಟ್ಟಾರೆಯಾಗಿ 10431.73 ಕೋಟಿ ರೂ. ಮೀಸಲಿರಿಸಲಾಗಿದೆ. ಕಾಸರಗೋಡಿನಿಂದ ಆರಂಭಗೊAಡು ತಿರುವನಂತಪುರ ತನಕವಿರುವ ಕರಾವಳಿ ಯೋಜನೆಯಲ್ಲಿ ಪ್ರತೀ ಕಿಲೋ ಮೀಟರ್ಗೆ 25 ಜಮೀನುಗಳನ್ನು ಸ್ವಾಧೀನಪಡಿಸ ಲಾಗುವುದು. ಒಳನಾಡ ಜಲಸಾರಿಗೆಗಾಗಿ 500 ಕೋಟಿ ರೂ. ಮೀಸಲಿರಿಸಲಾಗಿದೆ. ಉದ್ದಿಮೆ ದಾರರಿಗೆ ಅಗತ್ಯದ ಭೂಮಿ ಲಭಿಸಲು ಕ್ಲಿಕ್ ಪೋರ್ಟಲ್ಗೆ ರೂಪು ನೀಡಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಜೆಟ್ನಲ್ಲಿ 15980.41 ಕೋಟಿ ರೂ. ಹಾಗೂ ಜನರಲ್ ಪರ್ಪಸ್ ನಿಧಿ ರೂಪದಲ್ಲಿ 2577 ಕೋಟಿ ರೂ. ಮೀಸಲಿರಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗುವುದು. ಉಚಿತ ಶಾಲಾ ಯೂನಿಫಾಂ ಯೋಜನೆಗಾಗಿ ಬಜೆಟ್ ನಲ್ಲಿ 154.34 ಕೋಟಿ ರೂ., ಕ್ಯಾನ್ಸರ್ ಚಿಕಿತ್ಸೆಗೆ ಮಲಬಾರ್ ಸೆಂಟರ್ಗೆ 35 ಕೋಟಿ ರೂ., ಕೊಚ್ಚಿ ಕ್ಯಾನ್ಸರ್ ಸೆಂಟರ್ಗೆ 18 ಕೋಟಿ ಮತ್ತು ಆರ್ಸಿಸಿಗೆ 75 ಕೋಟಿರೂ., ಪಂಪಾ ಸನ್ನಿಧಾನದ ನಡೆಹಾದಿ ಯ ಅಭಿವೃದ್ಧಿಗಾಗಿ 47.97 ಕೋಟಿ ರೂ. ಮೀಸಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page