ಪಯಸ್ವಿನಿ ನದಿಯಲ್ಲಿ ಬೃಹತ್ತಾಕಾರದ ಆಮೆಯ ಕಳೇಬರ ಪತ್ತೆ

ಬೋವಿಕ್ಕಾನ: ಪಯಸ್ವಿನಿ ಹೊಳೆಯ ಆಲೂರಿನಲ್ಲಿ ಬೃಹತ್ತಾಕಾರದ ಆಮೆ (ಪಾಲಪ್ಪೂವನ್) ಸತ್ತ ಸ್ಥಿತಿಯಲ್ಲಿ ಕಂಡುಬಂದಿದೆ. ಬಾವಿಕ್ಕೆರೆ ಅಣೆಕಟ್ಟು ಇರುವ ಕೆಳಗಿನ ಭಾಗದಲ್ಲಿ ಅಪೂರ್ವ ಜಾತಿಯ ಭೀಮಾಕಾರದ ಆಮೆಯ ಕಳೇಬರ ಪತ್ತೆಯಾಗಿದೆ. ಅಣೆಕಟ್ಟದ ಶಟರ್‌ನಲ್ಲಿ ಸಿಲುಕಿ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. 1.25 ಮೀಟರ್ ಉದ್ದ, ಅದರ ಅರ್ಧದಷ್ಟು ಅಗಲವಿರುವ ಆಮೆ ಸತ್ತಿದೆ. 4.5 ಕಿಲೋ ಭಾರ ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು  ಪರಿಶೀಲಿಸಿದ ಬಳಿಕ ಪೋಸ್ಟ್ ಮಾರ್ಟಂ ಕ್ರಮ ಕೈಗೊಂಡು ಸಂಸ್ಕರಿಸಲಾಗಿದೆ. ಕಳೆದ ವರ್ಷವೂ ಅಣೆಕಟ್ಟದ ಶಟರ್‌ಗೆ ಸಿಲುಕಿ ಒಂದು …

16ರ ಹರೆಯದ ಬಾಲಕಿ ರಕ್ತಸ್ರಾವದಿಂದ ಸಾವು: ಗರ್ಭ ಛಿದ್ರಕ್ಕೆ ಔಷಧಿ ನೀಡಿರುವುದಾಗಿ ಸಂಶಯ: ತನಿಖೆ ಆರಂಭ

ಕಾಸರಗೋಡು: ಹದಿನಾರರ ಹರೆಯದ ಬಾಲಕಿ ಅಪರಿಮಿತ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯರಾತ್ರಿ ವೇಳೆ ರಕ್ತಸ್ರಾವ ಉಂಟಾದ ಬಾಲಕಿಯನ್ನು ಮೊದಲು ಪರಪ್ಪದ ವೈದ್ಯರೊಬ್ಬರ ಬಳಿಗೆ ಕರೆದೊಯ್ಯಲಾಗಿದೆ. ವೈದ್ಯ ನೀಡಿದ ಸೂಚನೆಯಂತೆ ಬಳಿಕ ಕಾಞಂಗಾಡ್‌ನ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆಯಲ್ಲಿ ಗರ್ಭಿಣಿಯೆಂದೂ ಆಕೆ ಗಂಭೀರ ಸ್ಥಿತಿಯಲ್ಲಿರುವುದಾಗಿ ತಿಳಿದು ಬಂದಿದೆ. ಇದರಿಂದ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲು ವೈದ್ಯರು ತಿಳಿಸಿದ್ದಾರೆ. ಇದರಂತೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ. …

ಕುಂಬಳೆಯಿಂದ ನಾಪತ್ತೆಯಾದ ಯುವತಿಗಾಗಿ ತೀವ್ರ ಶೋಧ

ಕುಂಬಳೆ: ಕುಂಬಳೆಯಿಂದ ನಾಪತ್ತೆಯಾದ ಯುವತಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಯಿಪ್ಪಾಡಿ ವಿಲ್ಲೇಜ್ ಕುಂಟಂಗೇರಡ್ಕದ ಗೋಪಾಲಕೃಷ್ಣ ಎಂಬವರ ಪತ್ನಿ ರೋಹಿಣಿ (34) ನಾಪತ್ತೆ ಯಾಗಿದ್ದಾರೆ. ಕಳೆದ ಬುಧವಾರ ಬೆಳಿಗ್ಗೆ 9.30ರ ವೇಳೆ ಪಳ್ಳತ್ತಡ್ಕ ದಲ್ಲಿರುವ ತಾಯಿಯ ಮನೆಗೆಂದು ತಿಳಿಸಿ ರೋಹಿಣಿ ಹೋದಿದ್ದಾರೆ. ಅಂತರ ಆಕೆಯ ಕುರಿತು ಯಾವುದೇ ಮಾಹಿತಿಯಿಲ್ಲವೆಂದು ಪತಿ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕರಂದಕ್ಕಾಡಿನಲ್ಲಿ ಅಬಕಾರಿ ದಾಳಿ : 240 ಪ್ಯಾಕೆಟ್ ಕರ್ನಾಟಕ ಮದ್ಯ ವಶ

ಕಾಸರಗೋಡು: ನಗರದ ಕರಂದ ಕ್ಕಾಡಿನ ಶೇಂದಿ ಅಂಗಡಿ ಎದುರುಗಡೆ ಇರುವ ಜನವಾಸವಿಲ್ಲದ ಹಿತ್ತಿಲಿಗೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿಕೆವಿ ಸುರೇಶ್ (ಗ್ರೇಡ್)ರ ನೇತೃತ್ವ ಅಬಕಾರಿ ತಂಡ  ನಡೆಸಿದ  ದಾಳಿಯಲ್ಲಿ 180 ಎಂಎಲ್‌ನ 240 ಟೆಟ್ರಾ ಪ್ಯಾಕೆಟ್ (43.2 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಪ್ಪು ಪ್ಲಾಸ್ಟಿಕ್ ಕವರುಗಳಲ್ಲಿ ಈ ಮದ್ಯ  ಪ್ಯಾಕೆಟ್‌ಗಳನ್ನು ತುಂಬಿಸಿ ಹಿತ್ತಿಲ ಪೊದೆಯಲ್ಲಿ ಬಚ್ಚಿಡಲಾಗಿತ್ತೆಂದೂ ಇದಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದಲ್ಲಿ ಯಾರನ್ನೂ ಆರೋಪಿಯಾಗಿ ಸೇರ್ಪಡೆಗೊಳಿಸಲಾಗಿಲ್ಲವೆಂದು ಅಬಕಾರಿ …

ಬದಿಯಡ್ಕ ಅಕ್ಷಯಾ ಫ್ಯಾನ್ಸಿ ಮಾಲಕ ನಿಧನ

ಬದಿಯಡ್ಕ: ಬದಿಯಡ್ಕ ಅಕ್ಷಯ ಫ್ಯಾನ್ಸಿಯ ಮಾಲಕರಾದ ಬದಿಯಡ್ಕ ಶಾಂತಿಯಡಿ ಅಕ್ಷಯದ ಶ್ರೀನಿವಾಸ ರಾವ್ (73 ನಿಧನಹೊಂದಿದರು. ಅಲ್ಪ ಕಾಲದಂದ ಇವರಿಗೆ ಅಸೌಖ್ಯ ಬಾಧಿಸಿತ್ತು. ನಿನ್ನೆ ಬೆಳಿಗ್ಗೆ ಅಸೌಖ್ಯ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೧೧.೨೦ರ ವೇಳೆ  ನಿಧನ ಸಂಭವಿಸಿದೆ. ಮೃತರು ಪತ್ನಿ ಪುಷ್ಪಾರಾಜೀವಿ, ಮಕ್ಕಳಾದ ರೋಶನ್ ಕಿರಣ್, ರಚನಾ ಎ.ಎಸ್, ಅಳಿಯ ಡಾ. ಯಶಸ್ ಸೈಪಂಗಲ್ಲು (ಭಾರತೀಯ ಸೇನೆ), ಸೊಸೆ ಅಂಜು, ಸಹೋದರ-ಸಹೋದರಿಯರಾದ ಸಂಜೀವ ರಾವ್, ವಸಂತ ರಾವ್, ಸುಗಂಧಿ, …

ಪೊಲೀಸ್ ಪೆನ್ಶನರ್ಸ್ ಸಂಘಟನೆಯ ಹಿತ್ತಿಲಿನಿಂದ ಮೋಟಾರ್, ಪೈಪ್ ಕಳವು

ಕಾಸರಗೋಡು: ಮಧೂರು ಪಂಚಾಯತ್‌ನ ಮಂಗಲಮೂಲೆ ಯಲ್ಲಿರುವ ಕೇರಳ ಪೊಲೀಸ್ ಪೆನ್ಶನರ್ಸ್ ಅಸೋಸಿಯೇ ಷನ್‌ನ ಹಿತ್ತಿಲ ಕೊಳವೆ ಬಾವಿಯ ಮೋಟಾರು ಮತ್ತು ಪೈಪ್‌ಗಳನ್ನು ಕಳವುಗೈಯ್ಯ ಲಾಗಿದೆ. ಈ ಬಗ್ಗೆ ಅಸೋಸಿಯೇ ಷನ್‌ನ ಅಧ್ಯಕ್ಷ ಶ್ರೀಧರನ್ ಎಂ. ನೀಡಿದ ದೂರಿನಂತೆ  ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ಈ  ಕೊಳವೆ ಬಾವಿ ಮೋ ಟರ್‌ನ ಮೀಟರ್ ಬಾಕ್ಸ್‌ನ್ನು ಒಡೆದು ಹಾಕಲಾಗಿದೆಯೆಂದು ಮೇ 7ರಂದು ಸಂಜೆ ಮತ್ತು ನಿನ್ನೆ ಬೆಳಿಗ್ಗೆಯ ಸಮಯದೊಳಗಾಗಿ ಈ ಕಳವು ನಡೆದಿದೆ ಎಂದು ಪೊಲೀಸರಿಗೆ …

ಆನ್ಲೈನ್ ಟ್ರೇಡಿಂಗ್: ಅಂಗಡಿಮೊಗರು ನಿವಾಸಿಯ42,41,000 ರೂ. ಲಪಟಾವಣೆ

ಕಾಸರಗೋಡು: ಆನ್ಲೈನ್ ಟ್ರೇಡಿಂಗ್ನ ಹೆಸರಲ್ಲಿ ಅಂಗಡಿಮೊಗರು ನಿವಾಸಿಯ 42,41,000 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಅಂಗಡಿಮೊಗರು ಖತೀಬ್ನಗರ ನಾಸ್ ಮಂಜಿಲ್ನ ಚಾಕಟ್ಟಚ್ಚಾಲ್ ಅಬೂಬಕ್ಕರ್ (73) ಎಂಬವರ ಹಣ ನಷ್ಟಗೊಂಡಿದೆ. 2025 ಫೆ.9ರಂದು ಆನ್ಲೈನ್ ಟ್ರೇಡಿಂಗ್ ಎಂದು ತಿಳಿಸಿ ದೂರುದಾತನನ್ನು ವಾಟ್ಸಪ್ನಲ್ಲಿ ಪರಿಚಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಧನಿ-ಟಿಆರ್ಡಿ ಎಂಬ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಸಿದ ಬಳಿಕ ಎಪ್ರಿಲ್ 4ರಿಂದ 21ರವರೆಗಿನ ತಾರೀಕುಗಳಲ್ಲಾಗಿ ಹಣ ಕಳುಹಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಠೇವಣಿ ಮೊತ್ತ ಹಾಗೂ ಅದರ ಲಾಭವನ್ನು ನೀಡದ ಹಿನ್ನೆಲೆಯಲ್ಲಿ ಅಬೂಬಕ್ಕರ್ ದೂರು ನೀಡಿದ್ದಾರೆ. …

ಜೈಲಿನಿಂದ ಬಿಡುಗಡೆಗೊಂಡ ತಕ್ಷಣ ಕಳವು: ಕುಖ್ಯಾತ ಆರೋಪಿ ಬಂಧನ

ಕಾಸರಗೋಡು: ಕಳವು ಪ್ರಕರಣ ದಲ್ಲಿ ಸೆರೆಗೀಡಾಗಿ ಜೈಲಿನಲ್ಲಿದ್ದು ಬಳಿಕ ಬಿಡುಗಡೆಗೊಂಡ ತಕ್ಷಣ ಮತ್ತೆ ಕಳವು ನಡೆಸಿದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕುಖ್ಯಾತ ಕಳವು ಆರೋಪಿ ತಳಿಪರಂಬ ನಡುವಿಲ್ ಪುಲಿಕುರುಂಬ ಎಂಬಲ್ಲಿನ ತೋರಪ್ಪನ್ ಸಂತೋಷ್ ಯಾನೆ ನೆಡುಮನ ಸಂತೋಷ್ (45) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮಾನಂತವಾಡಿ ಡಿವೈಎಸ್‌ಪಿ ವಿ.ಕೆ. ವಿಶ್ವಂಭರನ್‌ರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ವಿ.ಜೆ. ಅಗಸ್ಟ್ಯನ್, ಎಸ್‌ಐ ಪಿ.ಡಿ. ರೋಯಿ ಚ್ಚನ್ ಎಂಬಿವರು ಸೇರಿ ತೋರಪ್ಪನ್ ಸಂತೋಷ್‌ನನ್ನು ಬಂಧಿಸಿದ್ದಾರೆ. ಕುಖ್ಯಾತ ಕಳವು ಆರೋಪಿಯಾದ ತೋರಪ್ಪನ್ ಸಂತೋಷ್ ಎಪ್ರಿಲ್ …

ಭಾರತ-ಪಾಕಿಸ್ತಾನ ಘರ್ಷಣೆ ಹಿನ್ನೆಲೆ: ಎಡರಂಗ ಸರಕಾರದ ವಾರ್ಷಿಕ ಕಾರ್ಯಕ್ರಮ ಮುಂದೂಡಿಕೆ

ತಿರುವನಂತಪುರ: ಭಾರತ-ಪಾಕಿ ಸ್ತಾನದ ನಡುವೆ ಮುಂದುವರಿಯುತ್ತಿರುವ ಘರ್ಷಣೆ ಹಿನ್ನೆಲೆಯಲ್ಲಿ ಎಡರಂಗ ಸರಕಾರದ 4ನೇ ವಾರ್ಷಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ. 4ನೇ ವಾರ್ಷಿಕದಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ವಸ್ತು ಪ್ರದರ್ಶನ ಮಾತ್ರವೇ ನಿಗದಿತ ಸಮಯ ತನಕ ಮುಂದುವರಿಯಲಿದೆ. ವಾರ್ಷಿಕದಂಗವಾಗಿ ನಡೆಸಲು ತೀರ್ಮಾನಿಸಲಾಗಿರುವ ಎಲ್ಲಾ  ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. 6 ಜಿಲ್ಲೆಗಳಲ್ಲಿ  ಇಂತಹ ಕಾರ್ಯಕ್ರಮಗಳನ್ನು ಈಗಾಗಲೇ ಮುಂದೂಡಲಾಗಿದೆ. ಆನ್‌ಲೈನ್ ಮೂಲಕ ನಡೆಸಲಾದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲದೆ ಎಡರಂಗ ಸರಕಾರದ …

ಪ್ರಾಯಪೂರ್ತಿಯಾಗದವರ ವಾಹನ ಚಾಲನೆ ವಿರುದ್ಧ ಕಠಿಣ ಕ್ರಮ: ಕುಂಬಳೆಯಲ್ಲಿ ನಿನ್ನೆ ಎರಡು ಕೇಸು ದಾಖಲು

ಕುಂಬಳೆ: ಪ್ರಾಯ ಪೂರ್ತಿಯಾ ಗದವರು ವಾಹನ ಚಲಾಯಿಸುವ ಪ್ರಕರಣ ತೀವ್ರಗೊಂಡಿದೆ. ಕುಂಬಳೆ ಪೊಲೀಸರುನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ ಹಾಗೂ ಕಾರು ಚಲಾಯಿಸುತ್ತಿದ್ದ ಇಬ್ಬರು ಬಾಲಕರನ್ನು ಪತ್ತೆಹಚ್ಚಲಾಗಿದೆ. ಬಂದ್ಯೋಡಿನಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದ ವೇಳೆ 16ರ ಹರೆಯದ ಬಾಲಕ ಸ್ಕೂಟರ್ ಚಲಾ ಯಿಸಿ ಬರುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಸ್ಕೂಟರ್ ಕಸ್ಟಡಿಗೆ ತೆಗೆದು ಬಾಲಕನನ್ನು ಮನೆಗೆ ತಲುಪಿಸಿದ್ದಾರೆ. ಈ ಸಂಬಂಧ ಸ್ಕೂಟ ರ್‌ನ ಮಾಲಕಿಯಾದ ಬಾಲಕನ  ತಾಯಿ ವಿರುದ್ಧ  ಕೇಸು ದಾಖಲಿಸಲಾಗಿದೆ. ಅದೇ ರೀತಿ ಮೊಗ್ರಾಲ್ ಕೆ.ಕೆ. ಪುರದಲ್ಲಿ …