ವಾಹನ ಅಪಘಾತ: ಉಚಿತ ಚಿಕಿತ್ಸೆ ಕೇರಳದ 643 ಆಸ್ಪತ್ರೆಗಳಲ್ಲಿ ಲಭ್ಯ

ಕಾಸರಗೋಡು: ವಾಹನ ಅಪಘಾತದಿಂದ ಗಾಯಗೊಂಡವರಿಗೆ ಒಂದೂವರೆ ಲಕ್ಷ ರೂ. ತನಕ ಉಚಿತ ಚಿಕಿತ್ಸೆ ನೀಡುವ ಯೋಜನೆ ಪ್ರಕಾರ ಕೇರಳದ 643 ಆಸ್ಪತ್ರೆಗಳಲ್ಲಿ ಈ ಸೇವೆ ಲಭಿಸಲಿದೆ. ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಈ ಯೋಜನೆ ಪ್ರಕಾರ ಒಂದೂವರೆ ಲಕ್ಷ ರೂ. ತನಕ ಅಥವಾ ಏಳು ದಿನಗಳ ತನಕ ಉಚಿತ ಚಿಕಿತ್ಸೆ ಲಭಿಸಲಿದೆ. ಇದು ಕ್ಯಾಶ್‌ಲೆಸ್ ಟ್ರೀಟ್‌ಮೆಂಟ್ ಆಫ್ ರೋಡ್ ಆಕ್ಸಿಡೆಂಟ್ ವಿಕ್ಟೀಮ್ ಸ್ಕೀಮ್- 2025 ಎಂಬ ಹೆಸರಲ್ಲಿ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಯೋಜನೆಯಾಗಿದೆ. ಇದರಂತೆ ಪ್ರಧಾನಮಂತ್ರಿ ಆರೋಗ್ಯ ಯೋಜನೆ …