ಸಂಚರಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ತಂತಿ ಸಹಿತ ಮುರಿದು ಬಿದ್ದ ಮರ: ತಪ್ಪಿದ ಭಾರೀ ಅನಾಹುತ

ಕಾಸರಗೋಡು: ಸಂಚರಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ತಂತಿ ಸಹಿತ ಮರ ಬಿದ್ದು ಸಂಭಾವ್ಯ ಭಾರೀ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿಹೋದ ಘಟನೆ ವಿದ್ಯಾನಗರದಲ್ಲಿ ನಿನ್ನೆ ನಡೆದಿದೆ. ವಿದ್ಯಾನಗರದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಯ ಆವರಣದೊಳಗಿನ ಮರದ ರಂಬೆ ಸಮೀಪದ ರಸ್ತೆ ಬಳಿಯಿರುವ ಎಚ್.ಟಿ. ವಿದ್ಯುತ್ ಲೈನ್‌ನ ಮೇಲೆ ಮುರಿದು ಬಿದ್ದು, ಎರಡು ವಿದ್ಯುತ್ ಕಂಬಿಗಳು ಕುಸಿದು ಬಿದ್ದಿವೆ. ಆ ವೇಳೆ ರಸ್ತೆ ಮೂಲಕ ಬರುತ್ತಿದ್ದ ಕಾರಿನ ಮೇಲೆ ಮರದ ರೆಂಬೆ ಹಾಗೂ ವಿದ್ಯುತ್ ಲೈನ್‌ಗಳು ಬಿದ್ದಿವೆ. ಆ ಕಾರಿನೊಳಗಿದ್ದ …

ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ : ಚಾಲಕ ಅಪಾಯದಿಂದ ಪಾರು

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಸಂಭವಿಸಿದೆ.  ಶಿರಿಯಾ ಬತ್ತೇರಿ ಮಹಲ್‌ನ ಮೂಸಾ ಖಲೀಲ್ ಎಂಬವರ ಸ್ವಿಫ್ಟ್ ಕಾರು ಬೆಂಕಿಗಾಹುತಿಯಾ ಗಿದೆ. ಮೂಸಾ ಖಲೀಲ್ ಬಂದ್ಯೋಡು ಭಾಗದಿಂದ ಕುಂಬಳೆ ಪೇಟೆಗೆ ಬರುತ್ತಿದ್ದರು.  ಕುಂಬಳೆ ಪೇಟೆ ಸಮೀಪಕ್ಕೆ ತಲುಪಿದಾಗ ಕಾರಿನ ಮುಂಭಾಗದಿಂದ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಕೂಡಲೇ ಕಾರನ್ನು ನಿಲ್ಲಿಸಿ ಅವರು ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಕೆಲವೇ ನಿಮಿಷಗಳೊಳಗೆ  ಕಾರಿಗೆ ಪೂರ್ಣವಾಗಿ ಬೆಂಕಿ ಆವರಿಸಿದೆ.  ವಿಷಯ ತಿಳಿದು  ಸೀನಿಯರ್ ಫಯರ್ …

ಮನೆಯಿಂದ 9 ಪವನ್ ಚಿನ್ನಾಭರಣ, 85 ಸಾವಿರ ರೂ. ಕಳವು

ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಬ್ರಾಣದಲ್ಲಿ ಮನೆಯೊಂದರಿಂದ ಚಿನ್ನಾಭರಣ ಹಾಗೂ ನಗದು ಕಳವಿಗೀಡಾಗಿದೆ. ಬಂಬ್ರಾಣ ದಿನೇಶ್ ಬೀಡಿ ಸಮೀಪದ ಹಮೀದ್ ಅಬ್ದುಲ್ಲರ ಮನೆಯಿಂದ 9 ಪವನ್ ಚಿನ್ನಾಭರಣ ಹಾಗೂ 85,000 ರೂಪಾಯಿ ಕಳವಿಗೀಡಾಗಿದೆ. ಈ ತಿಂಗಳ 25ರಂದು ರಾತ್ರಿ 7.30ರಿಂದ 8.30 ರ ಮಧ್ಯೆ ಕಳವು ನಡೆದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಮೀದ್ ಅಬ್ದುಲ್ಲರ ಮಗಳ ಪತಿ ಮಲಪ್ಪುರಂ ತಾನೂರು ಪಟ್ಟರುಪರಂಬ್ ನೆಡುವಳ್ಳಿ ಹೌಸ್‌ನ ನೌಶಾದ್‌ರ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …

ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತ: ರಾಜ್ಯದಲ್ಲಿ ಜಡಿ ಮಳೆ ಸಾಧ್ಯತೆ ಎಲ್ಲೆಡೆ ಜಾಗ್ರತಾ ನಿರ್ದೇಶ

ತಿರುವನಂತಪುರ: ಮುಂಗಾರು ಮಳೆಯ ಅಬ್ಬರ ಅಲ್ಪ ಶಮನಗೊಂಡಿ ದ್ದರೂ ಇನ್ನೊಂದೆಡೆ ಬಂಗಾಳಕೊಲ್ಲಿ ಯಲ್ಲಿ ಮತ್ತೆ ಹೊಸ ವಾಯುಭಾರ ಪ್ರಕ್ರಿಯೆ ರೂಪುಗೊಳ್ಳತೊಡಗಿದೆ. ಇದ ರಿಂದಾಗಿ ಕೇರಳದಲ್ಲಿ ಮುಂದಿನ ದಿನಗ ಳಲ್ಲಿ ಜಡಿ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಹೊಸ ನಿರ್ದೇಶ ನೀಡಿದೆ.  ಈ ನಿರ್ದೇಶದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂ ತ ಜಾಗ್ರತಾ ನಿರ್ದೇಶ ನೀಡಲಾಗಿದೆ. ಮಳೆಯಿಂದ ಸೃಷ್ಟಿಯಾಗಿರುವ ಪ್ರಾಕೃತಿಕ ವಿಕೋಪಕ್ಕೆ ರಾಜ್ಯದಲ್ಲಿ ನಿನ್ನೆ ಇಬ್ಬರು ಸಾವನ್ನಪ್ಪಿದ್ದಾರೆ. ತೃಶೂರಿನ ನಡತ್ತಲದಲ್ಲಿ ನೀರು ತುಂಬಿದ ತೋಡಿಗೆ ಬಿದ್ದು ೧೦ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡ ಪತ್ತೆ

ಕಾಸರಗೋಡು: ಚೆರ್ಕಳ-ತೆಕ್ಕಿಲ್ ಚಟ್ಟಂಚಾಲ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ   ಭಾರೀ ಆಳದ ಹೊಂಡವೊಂದು ಪತ್ತೆಯಾ ಗಿದೆ. ನಿನ್ನೆ ಇಲ್ಲಿ ಸೇತುವೆ ನಿರ್ಮಾ ಣಕ್ಕಾಗಿ ಹೊಂಡ ತೋಡುತ್ತಿದ್ದ ವೇಳೆ  ನಡು ರಸ್ತೆಯಲ್ಲೇ ಬೃಹತ್ ಹೊಂಡ ಕಂಡುಬಂದಿದೆ. ಕೂಡಲೇ  ಸಂಭಾವ್ಯ ಅನಾಹುತ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಮಿಕರು ಕಾಂಕ್ರೀಟ್ ನಡೆಸುವ ಮೂಲಕ ಹೊಂಡವನ್ನು ಮುಚ್ಚಿದ್ದಾರೆ. ಇನ್ನೊಂ ದೆಡೆ ಚೆರ್ವತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಗುಡ್ಡೆ ಜರಿದು ಬಿದ್ದಿದೆ.

ನಿರಂತರ ವಿದ್ಯುತ್ ಮೊಟಕು: ಉಪ್ಪಳ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿದ ನಾಗರಿಕರು

ಉಪ್ಪಳ: ನಾಲ್ಕು ದಿನಗಳಿಂದ ನಿರಂತರವಾಗಿ ವಿದ್ಯುತ್ ವಿತರಣೆ ಮೊಟಕುಗೊಂಡು ಜನರು ಸಂಕಷ್ಟಕ್ಕೀಡಾದರೂ ದುರಸ್ತಿಗೆ ಮುಂದಾಗದ ಕೆಎಸ್‌ಇಬಿ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಉಪ್ಪಳದಲ್ಲಿ ನಾಗರಿಕರು ಕೆಎಸ್‌ಇಬಿ ಸೆಕ್ಷನ್ ಕಚೇರಿಗೆ ಮುತ್ತಿಗೆ ಹಾಕಿ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಬಿಜೆಪಿ ನೇತಾರ, ಮಂಗಲ್ಪಾಡಿ ಪಂ. ಸದಸ್ಯ ವಿಜಯ ಕುಮಾರ್ ರೈ ನೇತೃತ್ವದಲ್ಲಿ  ಬಂದ್ಯೋಡು ಮಳ್ಳಂಗೈ, ತಿಂಬರ, ಮೂಸೋಡಿ, ಮಣಿಮುಂಡ ಸಹಿತ ವಿವಿಧ ಪ್ರದೇಶಗಳ ನಾಗರಿಕರು ನಿನ್ನೆ ಸಂಜೆ ಕೆಎಸ್‌ಇಬಿ ಕಚೇರಿಗೆ ತೆರಳಿ ತಮ್ಮ ಸಂಕಷ್ಟವನ್ನು ತಿಳಿಸಿದ್ದಾರೆ.  ನಿರಂತರವಾಗಿ ವಿದ್ಯುತ್ ಇಲ್ಲದೆ ಕುಡಿಯುವ …

ಹಿಂದೂ ಮಹಾಸಾಗರದಲ್ಲಿ 9500 ವರ್ಷಗಳ ಪ್ರಾಚೀನ ನಗರ ಪತ್ತೆ

ನವದೆಹಲಿ: ಹಿಂದೂ ಮಹಾಸಾಗರದ ಅಡಿ ಭಾಗದಲ್ಲಿ ಸುಮಾರು 9500 ವರ್ಷಗಳ ಪ್ರಾಚೀನ ನಗರವೊಂದು ಪತ್ತೆಯಾಗಿದೆ. ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಗಳಲ್ಲಿ ಹರಪ್ಪ ಅಂದರೆ ಸಿಂಧೂ ಕಣಿವೆ ನಾಗರಿಕತೆ ಮತ್ತು ಸುಮೇರಿಯನ್ ನಾಗರಿಕತೆಯ ಹೆಸರುಗಳು ಸಾಮಾನ್ಯವಾಗಿ ಕೇಳಿ ಬರುತ್ತದೆ. ಆದರೆ ಅವುಗಳಿಗಿಂತಲೂ ಹಳೆಯದಾದ ನಾಗರಿಕತೆ ಈ ಭೂಮಿಯ ಮೇಲೆ ಅಸ್ಥಿತ್ವದಲ್ಲಿದೆ ಎಂಬುದಕ್ಕೆ ಹಿಂದೂ ಮಹಾಸಾಗರದಲ್ಲಿ ಪತ್ತೆಯಾದ ಈ ಪ್ರಾಚೀನ ನಗರ ಒಂದು ಉದಾಹರಣೆಯಾಗಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ವೈಜ್ಞಾನಿಕ ತಂಡದ ಅಭಿಪ್ರಾಯ ಪ್ರಕಾರ ಹಿಮಯುಗದ ಕೊನೆಯಲ್ಲಿ ಸಮುದ್ರ ಮಟ್ಟ …

ಬಂಟ್ವಾಳದ ಅಬ್ದುಲ್ ರಹೀಂ ಕೊಲೆ ಪ್ರಕರಣ: 15 ಮಂದಿ ವಿರುದ್ಧ ಕೇಸು ದಾಖಲು

ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿಯ ಕೊಳತ್ತಮಜಲುನಲ್ಲಿ ನಿನ್ನೆ ಪಿಕಪ್ ವಾಹನ ಚಾಲಕ ಹಾಗೂ ಜುಮಾ ಮಸೀದಿ ಕಾರ್ಯದರ್ಶಿಯೂ ಆಗಿದ್ದ ಅಬ್ದುಲ್ ರಹೀಂ (32) ಎಂಬ ವರ ಮೇಲೆ ಮಾರಕಾಯುಧಗಳಿಂದ ಆಕ್ರಮಿಸಿ ಕೊಲೆಗೈದು ಅವರ ಜೊತೆಗಿದ್ದ ಕಲಂದರ್ ಶಾಫಿ ಎಂಬವರಿಗೆ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿ ಬಂಟ್ವಾಳ ಗ್ರಾಮೀಣ ಪೊಲೀಸರು 15 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೊಹಮ್ಮದ್ ನಿಸಾರ್ ಎಂಬವರು ನೀಡಿದ ದೂರಿನ ಪ್ರಕಾರ ಬಿಎನ್ಎಸ್-103, 109, 118(1), 118(2), 190, 191(1), 191(2) ಮತ್ತು 191(3) …

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 34 ಲೀಟರ್ ಕರ್ನಾಟಕ ಮದ್ಯ ವಶ

ಬದಿಯಡ್ಕ:  ಸ್ಟ್ರೈಕಿಂಗ್ ಫೋರ್ಸ್‌ನಂಗವಾಗಿ ಬದಿಯಡ್ಕ ಎಕ್ಸೈಸ್ ರೇಂಜ್‌ನ ಅಬಕಾರಿ ತಂಡ ಪನ್ನಿಪ್ಪಾರೆ ಚೆಟ್ಟುಂಗುಳಿಗೆ ಸಾಗುವ ಎಂ.ಜಿ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ  ಅಕ್ರಮವಾಗಿ ಸಾಗಿಸುತ್ತಿದ್ದ 34.560 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಪನ್ನಿಪ್ಪಾರೆಯ ರಾಧಾಕೃಷ್ಣ ಎಂಬಾತನ ವಿರುದ್ಧ  ಕೇಸು ದಾಖಲಿಸಲಾಗಿದೆ.  ಸಾಗಿಸುತ್ತಿದ್ದ ಮಾಲು ಮತ್ತು ವಾಹನವನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಕೃಷ್ಣ ಎ ನೇತೃತ್ವದಲ್ಲಿ  ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಧನ್ಯ, …

ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ ಜೂನ್ 3ರಂದು

ವರ್ಕಾಡಿ: ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿ ಮಜೀರ್ಪಳ್ಳ ಕೇಂದ್ರೀಕರಿಸಿ   ಕಾರ್ಯಾಚರಿಸುತ್ತಿದ್ದು, ಸೊಸೈಟಿಯ ಸ್ವಂತ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡ ಉದ್ಘಾಟನೆ ಜೂನ್ 3ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಕುದುರು ಧ್ವಜಾರೋಹಣ ನಡೆಸುವರು. ಬಳಿಕ ನಡೆಯುವ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ರವೀಂದ್ರ ಮಡ್ವ ವರದಿ ವಾಚಿಸುವರು. ಸಚಿವ ವಿ.ಎನ್. ವಾಸವನ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಭದ್ರತಾ ಕೊಠಡಿಯನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸು ವರು. …