ಮಣಿಪುರದಲ್ಲಿ ಭೂಕಂಪ: ಸತತ ಎರಡು ಬಾರಿ ನಡುಗಿದ ಭೂಮಿ

ನವದೆಹಲಿ: ಮಣಿಪುರದಲ್ಲಿ ಇಂದು ಮುಂಜಾನೆ 2 ಗಂಟೆಗಳ ಅಂತರದಲ್ಲಿ ಭೂಕಂಪನ ಉಂಟಾಗಿದೆ. ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪ ಕೇಂದ್ರದ ಎಕ್ಸ್‌ಪೋಸ್‌ನಲ್ಲಿ ಈ ವರದಿ ಮಾಡಲಾಗಿದೆ. ಮೊದಲ ಭೂಕಂಪವು ಇಂದು ಮುಂಜಾನೆ 1.54ರ ಸುಮಾರಿಗೆ 5.2 ತೀವ್ರತೆಯಲ್ಲಿ ನಡೆದಿದೆ. ಎರಡನೇ ಭೂಕಂಪವು ಮುಂಜಾನೆ 2.26ರ ವೇಳೆಗೆ ನಡೆದಿದೆ. ಇದರ ತೀವ್ರತೆ 2.5ರಷ್ಟಿತ್ತು. ಮೊದಲ ಭೂಕಂಪದ ಕೇಂದ್ರ ಬಿಂದು ಮಣಿಪುರದ ಚುರಾಚಂಪುರ ಮತ್ತು ಎರಡನೇ ಭೂಕಂಪದ ಕೇಂದ್ರ ಬಿಂದು ನೋನಿ ಜಿಲ್ಲೆಯಲ್ಲಿ ಆಗಿದೆ ಎಂದು ಇಲಾಖೆ ತಿಳಿಸಿದೆ.

ರಾ. ಹೆದ್ದಾರಿಯಲ್ಲಿ ಅಪಾಯಭೀತಿ: ಡ್ರೋನ್ ಪರಿಶೀಲನೆಗೆ ನಿರ್ಧಾರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ಅಂಗವಾಗಿ ಗುಡ್ಡೆ ಅಗೆದ ಪರಿಣಾಮ ಅಪಾಯ ಭೀತಿ ಎದುರಾದ ಪ್ರದೇಶಗಳಲ್ಲಿ ಡ್ರೋನ್ ಬಳಸಿ ಪರಿಶೀಲನೆ ನಡೆಸಲು ಜಿಲ್ಲಾ ದುರಂತ ನಿವಾರಣಾ ಅಥೋರಿಟಿ ಸಭೆ ನಿರ್ಧರಿಸಿದೆ. ಮಯ್ಯೀಚ, ವೀರ ಮಲಕುನ್ನು, ಮಟ್ಟಲಾಯಿಕುನ್ನು, ಬೇವಿಂಜೆ ಎಂಬೆಡೆಗಳಲ್ಲಿ ಡ್ರೋನ್ ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಜಿಯೋಲಜಿ, ಮಣ್ಣು ಪರಿಶೀಲನೆ ಇಲಾಖೆಗಳ ನೇತೃತ್ವದಲ್ಲಿ ಸಂಯುಕ್ತ ಸಮೀಕ್ಷೆ ನಡೆಸಲಾಗು ವುದು. ಡ್ರೋನ್ ಮೂಲಕ ಪರಿಶೀಲನೆ ನಡೆಸುವುದರಿಂದ ಗುಡ್ಡೆಯ ಮೇಲ್ಭಾಗ ಬಿರುಕು ಬಿಟ್ಟಿದೆಯೇ ಎಂದು ತಿಳಿಯಲು ಸಾಧ್ಯವಿದೆ. ಹಾಗಿದ್ದಲ್ಲಿ ಅದನ್ನು …

ನಿಧನ

ಕುಂಬಳೆ: ಮೂಲತಃ ಚೇವಾರು ನಿವಾಸಿ ಯೂ ಪ್ರಸ್ತುತ ಪುತ್ತೂರು ಆರ್ಯಾಪು ಗ್ರಾಮದ ಸಂಟ್ಯಾರ್‌ನಲ್ಲಿ ವಾಸಿಸುವ  ದೇವಪ್ಪ ನಾಯಕ್ ಯಾನೆ ಹರಿಯಣ್ಣ ನಾಯಕ್ (74) ನಿಧನ ಹೊಂದಿದರು.  ಪೆರ್ಮುದೆ ಗ್ರಾಮೀಣ ಬ್ಯಾಂಕ್‌ನ ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲಿ ಕೃಷಿ ಸಂಬಂಧ ಚಟುವಟಿಕೆಯಲ್ಲಿ ಸಕ್ರಿಯರಾಗಿ ದ್ದರು. ಉತ್ತಮ ಕೃಷಿಕನೂ ಆಗಿದ್ದ ಇವರನ್ನು ಪೈವಳಿಕೆ ಕೃಷಿ ಭವನದಲ್ಲಿ ಸನ್ಮಾನಿಸಲಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಓರ್ವೆ ಪುತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವ್ಯಾಪಾರಿ ನಿಧನ

ಕುಂಬಳೆ: ಕುಂಬಳೆಯಲ್ಲಿ ಹಿರಿಯ ಜೀನಸು ವ್ಯಾಪಾರಿಯಾಗಿದ್ದ ಎರಿಯಾಲ್ ನಿವಾಸಿ ಮೊಯ್ದೀನ್ ಕುಟ್ಟಿ (75) ನಿಧನ ಹೊಂದಿದರು. ಇ.ಎಂ. ಸ್ಟೋರ್ಸ್ ಎಂಬ ಅಂಗಡಿಯ ಮಾಲಕನಾಗಿದ್ದರು. ಮೃತರು ಪತ್ನಿ ಮರಿಯಂಬಿ, ಮಕ್ಕಳಾದ ಸಫ್ವಾನ್, ರಿಫಾಯಿ, ಫೈಸಲ್, ಹಿಸಾಂ, ರುಕ್ಸಾನ ಬಲ್ಕೀಸ್, ಕುಬ್ರ, ಅಳಿಯ-ಸೊಸೆಯಂದಿರಾದ ಫರ್ಹಾನ, ತಸ್ರೀನ, ಫರ್ಹಾನ, ಸುರುಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ನಿಧನ

ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲನಿಯ ನಿವಾಸಿ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಎಚ್. ಉಮೇಶ್ ಪೈ (84) ನಿಧನ ಹೊಂದಿದರು. ಇವರ ಪತ್ನಿ ಜಯಲಕ್ಷ್ಮಿ ಪೈ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಪೈ (ಎಲ್‌ಐಸಿ ಅಡ್ವೈಸರ್), ಹರೀಶ್ ಪೈ (ಎಲ್‌ಐಸಿ ಡೆವಲಪ್‌ಮೆಂಟ್ ಆಫೀಸರ್, ಬಂಟ್ವಾಳ), ಪದ್ಮಿನಿ ಕಾಮತ್ (ಹುಬ್ಬಳ್ಳಿ), ಸೊಸೆ ಸುಶ್ಮಾರಾವ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಳಿಯ ವಿನಯ್ ಕಾಮತ್ ಈ ಹಿಂದೆ ನಿಧನರಾಗಿದ್ದಾರೆ.

ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣ ಉದ್ಘಾಟನೆ: ಉಚಿತ ಪುಸ್ತಕ, ಸಹಾಯ ಹಸ್ತ ವಿತರಣೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಇದರ ಆಶ್ರಯದಲ್ಲಿ ಜಿಲ್ಲಾ ಕುಲಾಲ ಸಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ ಜರಗಿತು.  ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25  ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ಸಹಾಯಹಸ್ತ ವಿತರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ …

ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಜೋಡುಕಲ್ಲು: ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ ವಾರ್ಷಿಕ ಮಹಾಸಭೆ ಫ್ರೆಂಡ್ಸ್ ಸಭಾಭವನದಲ್ಲಿ ಜರಗಿತು. ಕ್ಲಬ್‌ನ ಗೌರವಾಧ್ಯಕ್ಷ ದಯಾನಂದ ಮಾಡ ಅಧ್ಯಕ್ಷತೆ ವಹಿಸಿದ್ದರು, ಅಧ್ಯಕ್ಷ ರತ್ನಾಕರ ಸೊಂದಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಜೋಡುಕಲ್ಲು ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.ಗೌರವಾಧ್ಯಕ್ಷರಾಗಿ ದಯಾನಂದ ಮಾಡ, ಅಧ್ಯಕ್ಷರಾಗಿ ರತ್ನಾಕರ ಸೊಂದಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಜೋಡುಕಲ್ಲು,ಕೋಶಾಧಿಕಾರಿ ಯಾಗಿ ಗೋಕುಲದಾಸ್ ಪಟ್ಲ, ಉಪಾಧ್ಯಕ್ಷರುಗಳಾಗಿ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ರಾಜ ಅರಿಯಾಳ, ಜೊತೆ ಕಾರ್ಯದರ್ಶಿಗಳಾಗಿ ಪ್ರಜ್ವಲ್ ಕೆ.ಪಿ. ಪಟ್ಲ, ಸುಮಂತ್ ಜೋಡುಕಲ್ಲು,ಕ್ರೀಡಾ …

ಅಧ್ಯಾಪಕ ಹುದ್ದೆ: ಸಂದರ್ಶನ

ಕುAಬಳೆ: ಕಣ್ಣೂರು ಸರಕಾರಿ ಎಲ್ಪಿ ಶಾಲೆಯಲ್ಲಿ ಎಲ್ಪಿಎಸ್ಟಿ (ಮಲೆಯಾಳ) ಹುದ್ದೆಗೆ ತಾತ್ಕಾಲಿಕ ಅಧ್ಯಾಪಕರ ನೇಮಕಾತಿಗೆ ಸಂದರ್ಶನ ಮೇ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕೆಂದು ತಿಳಿಸಲಾಗಿದೆ.ಮಂಜೇಶ್ವರ: ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಚ್ಎಸ್ಟಿ -ಇಂಗ್ಲಿಷ್-1, ಹಿಂದಿ-1, ಫಿಸಿಕಲ್ ಸಯನ್ಸ್(ಕನ್ನಡ ಮಾಧ್ಯಮ)-1, ಯುಪಿಎಸ್ಟಿ (ಕನ್ನಡ ಮಾಧ್ಯಮ) -2 ಹುದ್ದೆಗಳಿಗೆ ಅಧ್ಯಾಪಕರ ನೇಮಕಾತಿ ನಡೆಸಲಾಗುವುದು. ನಾಳೆ ಬೆಳಿಗ್ಗೆ 11 ಗಂಟೆಗೆ ಶಾಲೆ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಅರ್ಹರು ಅಸಲಿ ಪ್ರಮಾಣಪತ್ರಗಳ ಸಹಿತ ಹಾಜರಾಗಬೇಕೆಂದು …