ಬದಿಯಡ್ಕ-ವಿದ್ಯಾಗಿರಿ ರಸ್ತೆಯಲ್ಲಿ ಚರಂಡಿ ನಿರ್ಮಿಸಲು ಒತ್ತಾಯಿಸಿ ಕಾಂಗ್ರೆಸ್‌ನಿಂದ ಮನವಿ
ಬದಿಯಡ್ಕ: ಬದಿಯಡ್ಕ-ಬರ್ಲ-ವಿದ್ಯಾಗಿರಿ-ಮುನಿಯೂರು ರಸ್ತೆಯ ಮುಡಿಪಿನಡ್ಕ ಎಂಬಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು ಇದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಇಂಡ್ಯನ್ ನೇಶನಲ್ ಕಾಂಗ್ರೆಸ್ (ಐ) ಬದಿಯಡ್ಕ ಮಂಡಲ ಸಮಿತಿ ಅಧಿಕಾರಿಗಳನ್ನು ಒತ್ತಾಯಿಸಿದೆ. ರಸ್ತೆ ಬದಿ ಸರಿಯಾದ ಚರಂಡಿಯಿಲ್ಲ. ಹಲವು ಕಾಲದಿಂದ ಮಳೆ ನೀರು ಹರಿದು ಹೋಗುತ್ತಿದ್ದ ಚರಂಡಿಗೆ ಖಾಸಗಿ ವ್ಯಕ್ತಿಯೋರ್ವ ಅಡಚಣೆ ಸೃಷ್ಟಿಸಿರು ವುದಾಗಿಯೂ ದೂರಲಾಗಿದೆ. ಇದರಿಂದ ಮಳೆ ನೀರಿನೊಂದಿಗೆ ಕೊಚ್ಚಿಕೊಂಡು ಬರುವ ಮಣ್ಣು ರಸ್ತೆಯಲ್ಲಿ ತುಂಬಿ ಕೊಳ್ಳುತ್ತಿದೆ. …
Read more “ಬದಿಯಡ್ಕ-ವಿದ್ಯಾಗಿರಿ ರಸ್ತೆಯಲ್ಲಿ ಚರಂಡಿ ನಿರ್ಮಿಸಲು ಒತ್ತಾಯಿಸಿ ಕಾಂಗ್ರೆಸ್‌ನಿಂದ ಮನವಿ”