ಶಾಲೆಗಳಲ್ಲಿ ಸಂಭ್ರಮದ ಪ್ರವೇಶೋತ್ಸವ
ಕಾಸರಗೋಡು: ಜ್ಞಾನದ ಹಸಿವು ನೀಗಿಸಲು ಜೊತೆಯಾಗಿ ಕಲಿಯಲು ವಿದ್ಯಾರ್ಥಿಗಳು ಶಾಲಾ ಅಂಗಣಕ್ಕೆ ತಲುಪುವಾಗ ಅವರನ್ನು ಸ್ವಾಗತಿಸುವುದಕ್ಕಾಗಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಸಜ್ಜಾಗಿ ನಿಂತಿವೆ. ಒಂದುಗೂಡಿ, ಒಂದಾಗಿ, ಒಂದಾಗುವ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳನ್ನು ವಿದ್ಯಾಲಯಗಳು ಸ್ವಾಗತಿಸಿವೆ. ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ಮಡಿಕೈ ಜಿವಿಎಚ್‌ಎಸ್‌ಎಸ್‌ನಲ್ಲಿ ಇಂದು ಬೆಳಿಗ್ಗೆ ಜರಗಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಶಾಸಕರು ಸಹಿತ ಹಲವು ಗಣ್ಯರು ಭಾಗವಹಿಸಿದರು. ಇದರ ಹೊರತಾಗಿ ಜಿಲ್ಲೆಯ 592 ಸಾರ್ವಜನಿಕ …