ಕಾಸರಗೋಡು ನಗರದ ಬುರ್ಖಾ ಅಂಗಡಿಯಲ್ಲಿ ಭಾರೀ ಅಗ್ನಿಬಾಧೆ: ಲಕ್ಷಾಂತರ ರೂ.ಗಳ ನಷ್ಟ

ಕಾಸರಗೋಡು: ಕಾಸರಗೋಡು ನಗರದ ಬುರ್ಖಾ ಅಂಗಡಿಯಲ್ಲಿ ಇಂದು ಮುಂಜಾನೆ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ನಗರದ ಹಳೆ ಬಸ್ ನಿಲ್ದಾಣ ಪರಿಸರದ ಸ್ಟೇಟ್ ಹೋಟೆಲ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಚೆರ್ಕಳ ನಿವಾಸಿ ನಿಝಾರ್ ಎಂಬವರ ಇಸ್ವಾ ಪರ್ಧಾ ಎಂಬ ಅಂಗಡಿಗೆ ಇಂದು ಮುಂಜಾನೆ ಸುಮಾರು 8.30ರ ವೇಳೆ ಬೆಂಕಿ ತಗಲಿಕೊಂಡಿದೆ. ಆ ಬಗ್ಗೆ ಲಭಿಸಿದ ದೂರಿನಂತೆ ಸ್ಟೇಷನ್ ಆಫೀಸರ್ ಹರ್ಷರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ತಾಸುಗಳ ತನಕ ನಡೆಸಿದ …

ಪ್ರತಾಪನಗರದಲ್ಲಿ ರಸ್ತೆಗಳು ಸಂಪೂರ್ಣ ಶೋಚನೀಯ:  ವಾಹನಗಳಸಹಿತ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಮಳೆಗೆ ರಸ್ತೆ ಶೋಚನೀಯಾವಸ್ಥೆಗೆ ತಲುಪಿ ಸಂಚಾರ ದುಸ್ತರವಾಗಿದೆ. ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್  ಪ್ರತಾಪನಗರದಲ್ಲಿ ರಸ್ತೆ ಹದಗೆಟ್ಟು ಶೋಚನೀಯಾವಸ್ಥೆಗೆ ತಲುಪಿದೆ. ಸೋಂಕಾಲ್‌ನಿಂದ ಪ್ರತಾಪನಗರಕ್ಕೆ ತೆರಳುವ ಇಂಟರ್‌ಲಾಕ್ ರಸ್ತೆ ಸಮೀಪದಲ್ಲಿರುವ ಡಾಮರು ರಸ್ತೆ ವರ್ಷಗಳ ಹಿಂದೆ ಹದಗೆಡಲು ಪ್ರಾರಂಭಗೊಂಡಿತ್ತು. ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಗೆ ರಸ್ತೆ ಇನ್ನಷ್ಟು ಶೋಚನೀಯಾವಸ್ಥೆಗೆ ತಲುಪಿ ಕೆಸರಿನಲ್ಲಿ ವಾಹನಗಳ ಚಕ್ರ ಹೂತು ಹೋಗುತ್ತಿರುವುದು ಸವಾರರಲ್ಲಿ ಆತಂಕವನ್ನುಂಟು ಮಾಡಿದೆ. ಅಲ್ಲದೆ ಪಾದಚಾರಿಗಳಿಗೂ ಸಂಚಾರಕ್ಕೆ ಕಷ್ಟಕರವಾಗಿದೆ. ರಸ್ತೆಯನ್ನು ದುರಸ್ತಿಗೊಳಿಸಲು ಈ ಹಿಂದೆಯೇ ಸಂಬಂಧಪಟ್ಟವರನ್ನು …

ಪೊದೆಯಿಂದ 34 ಲೀಟರ್ ಗೋವಾ ಮದ್ಯ ಪತ್ತೆ

ಕಾಸರಗೋಡು: ನಗರದ ಕರಂದಕ್ಕಾಡ್‌ನ ಜನವಾಸವಿಲ್ಲದ ಹಿತ್ತಿಲ ಪೊದೆಯಲ್ಲಿ ಬಚ್ಚಿಡಲಾಗಿದ್ದ 180 ಎಂಎಲ್‌ನ 192 ಪ್ಯಾಕೆಟ್ ಗೋವಾ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿಕೆವಿ ಸುರೇಶ್ ನೇತೃತ್ವದಲ್ಲಿ ಗ್ರೇಡ್ ಎಇಐ ಪ್ರಮೋದ್ ಕುಮರ್, ಗ್ರೇಡ್ ಪಿ.ಒ  ನೌಶಾದ್, , ಸಿಇಒಗಳಾದ  ಸೋನು ಸೆಬಾಸ್ಟಿನ್, ಅತುಲ್ ಟಿ.ವಿ, ಧನ್ಯ ಎಂಬಿವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರರಣೆ ನಡೆಸಿದೆ.

ಹದಗೆಟ್ಟ ಲಾಲ್‌ಭಾಗ್- ಕುರುಡಪದವು ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ: ದುರಸ್ತಿಗೆ ಕಾಲವಿಳಂಬ

ಪೈವಳಿಕೆ: ಬೇಸಿಗೆ ಕಾಲದಲ್ಲೇ ಶೋಚನೀಯಗೊಂಡು ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದ ಮಾಸಿಕುಮೇರಿ -ಕುರುಡಪದವು ರಸ್ತೆ ಮಳೆ ಆರಂಭದೊಂದಿಗೆ ಇನ್ನಷ್ಟು ಹದಗೆಟ್ಟಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಭಾಗ್‌ನಿಂದ ಕುರುಡಪದವು ತನಕದ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ರೂಪುಗೊಂಡಿದ್ದು, ಬಸ್ ಸಹಿತ ವಾಹನಗಳಿಗೆ ಸಂಚಾರವೇ ತೊಡಕಾಗಿದೆ. ದಿನನಿತ್ಯ ನೂರಾರು ವಾಹನಗಳು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಬಸ್‌ಗಳ ಹಾಗೂ ಇತರ ವಾಹನಗಳ ಬಿಡಿ ಭಾಗಗಳು ಹಾನಿಯಾಗುತ್ತಿದೆ ಎಂದು ವಾಹನ ಮಾಲಕರು ತಿಳಿಸುತ್ತಿದ್ದಾರೆ.  ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಹೊಂಡಗಳಲ್ಲಿ ತುಂಬಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳಿಂದಲೇ …

ಅಸೌಖ್ಯ: ಬಡಗಿ ನಿಧನ

ಉಪ್ಪಳ: ಕುಂಬಳೆ ಬಳಿಯ ಬಂಬ್ರಾಣ ನಿವಾಸಿ ಬಡಗಿ ಚಂದ್ರಕಾAತ ಆಚಾರ್ಯ [57] ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಆರು ವರ್ಷಗಳಿಂದ ಅನಾರೋ ಗ್ಯದಿಂದ ಬಳಲುತ್ತಿದ್ದು, ಒಂದು ವಾರದಿಂದ ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಬಂಬ್ರಾಣ ತಿಲಕನಗರ ಶ್ರೀ ರಾಮಾಂಜನೇಯ ಭಜನಾ ಮಂದಿ ರವನ್ನು ಜೀರ್ಣೋದ್ದಾರಗೊಳಿಸಲು ಯತ್ನಿಸಿದ ಪ್ರಮುಖ ವ್ಯಕ್ತಿ ಯಾಗಿದ್ದಾರೆ. ಮೃತರು ಪತ್ನಿ ಅನುಸೂಯ, ಮಕ್ಕಳಾದ ವಿದ್ಯಾಲಕ್ಷಿö್ಮÃ, ಶ್ರೇಯಾ, ಅಳಿಯ ಸಚಿನ್ ಆಚಾರ್ಯ, ಸಹೋದರ ರಾದ ಯೋಗೀಶ್ ಆಚಾರ್ಯ, ಭುವನೇಶ ಆಚಾರ್ಯ, ಕೇಶವ …

ರಿಂಕು ಸಿಂಗ್ ದಾಂಪತ್ಯಕ್ಕೆ: ಸಂಸದೆ ಪ್ರಿಯ ವಧು

ದೆಹಲಿ: ಭಾರತೀಯ ಕ್ರಿಕೆಟ್ ಪಟು ರಿಂಕು ಸಿಂಗ್ ಹಾಗೂ ಉತ್ತರಪ್ರದೇಶದಿಂದಿರುವ ಸಮಾಜ ವಾದಿ ಪಕ್ಷದ ಸಂಸದೆ ಪ್ರಿಯ ಸರೋಜ್ ವಿವಾಹಿತರಾಗುತ್ತಿದ್ದಾರೆ. ಜೂನ್ ಎಂಟರಂದು ಲಕ್ನೋದಲ್ಲಿ ವಿವಾಹ ನಿಶ್ಚಯ ನಡೆಯಲಿದೆ ಎಂದು ವರದಿಯಾಗಿದೆ. ಓರ್ವ ಗೆಳೆಯನ ಸಹಾಯದಿಂದ ಇವರಿಬ್ಬರೂ ಪರಿಚಯ ಗೊಂಡಿದ್ದಾರೆ.  ಈ ಮೊದಲೇ ಇವರಿಬ್ಬರು ವಿವಾಹವಾಗುವ ಬಗ್ಗೆ ಗಾಸಿಪ್ ಬಹಿರಂಗವಾಗಿತ್ತು. ವಿವಾಹ ವಿಷಯದಲ್ಲಿ ಇವರಿಬ್ಬರ ಕುಟುಂಬದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಪ್ರಿಯರ ತಂದೆ ಹಾಗೂ ಎಸ್.ಪಿ. ಶಾಸಕನಾಗಿರುವ ತುಫಾನಿ ಸರೋಜ್ ಬಹಿರಂಗಪಡಿಸಿದ್ದಾರೆ. ಸುಪ್ರಿಂಕೋರ್ಟ್‌ನಲ್ಲಿ ನ್ಯಾಯ ವಾದಿಯಾಗಿರುವ ಪ್ರಿಯ …

ಆಶ್ರಮದಿಂದ ಮಹಿಳೆ ನಾಪತ್ತೆ

ಮಂಜೇಶ್ವರ: ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲಿದ್ದÀ ಅನ್ಯ ರಾಜ್ಯದ 30 ವರ್ಷ ಪ್ರಾಯದ ಸೋನಾಲಿ ಯಾನೆ ಶಾಂತ ಎಂಬ ಮಹಿಳೆ ಮೇ 29ರಂದು ಸಂಜೆ 4ಗಂಟೆಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆಶ್ರಮದ ಮೆನೇಜರ್ ಅಧೀಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಾನಸಿಕ ಅಸ್ವಸ್ಥ ಹೊಂದಿರುವ ಈಕೆಯನ್ನು ಎರಡು ವರ್ಷಗಳ ಹಿಂದೆ ಕರ್ನಾಟಕದಿಂದ ಪೊಲೀಸರ ನೇತೃತ್ವದಲ್ಲಿ ಸಮಾಜ ಸೇವಕರು ಆಶ್ರಮಕ್ಕೆ ತಲುಪಿಸಿದ್ದರು. ಹಿಂದಿ ಭಾಷೆ ಮಾತ್ರ ಮಾತನಾಡುತ್ತಿ ದ್ದಾರೆ. ಇವರನ್ನು ಯಾರಾದರು ಕಂಡಲ್ಲಿ …

ಚೆಂಬರಿಕದಲ್ಲಿ ತೆಂಗು ಬಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ

ಕಾಸರಗೋಡು: ಮೇಲ್ಪರಂಬ, ಚೆಂಬರಿಕದಲ್ಲಿ ತೆಂಗು ತುಂಡಾಗಿ ಬಿದ್ದು ನಾಲ್ಕು ವಿದ್ಯುತ್  ಕಂಬಗಳು ತುಂಡಾಗಿ ರಸ್ತೆಗೆ ಬಿದ್ದಿದೆ.  ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಯುವಕನ ಕಾಲಿಗೆ ಗಂಭೀರ ಗಾಯ ಉಂಟಾಗಿದೆ. ಈ ಮಧ್ಯೆ ಆ ದಾರಿಯಲ್ಲಿ ಸಂಚರಿಸಿದ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ರಸ್ತೆಯ ಆವರಣ ಗೋಡೆಗೆ ಡಿಕ್ಕಿ ಹೊಡೆದಿದೆ. ಇಂದು ಬೆಳಿಗ್ಗೆ 6.30ರ ವೇಳೆ ಘಟನೆ ನಡೆದಿದೆ. ಮಕ್ಕಳನ್ನು ಮದ್ರಸಕ್ಕೆ ಸೇರಿಸಿ ಹಿಂತಿರುಗುತ್ತಿದ್ದ ಚೆಂಬರಿಕದ ಮುಹ ಮ್ಮದ್ ಕುಂಞಿ ಅದೃಷ್ಟದಿಂದ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಕಾಲಿಗೆ …

ವಿದ್ಯಾನಗರ ಪೊಲೀಸರ ಪಕ್ಷಪಾತ ನೀತಿ ಕೊನೆಗೊಳಿಸಲು ವಿಎಚ್‌ಪಿ ಆಗ್ರಹ

ಕಾಸರಗೋಡು: ವಿದ್ಯಾನಗರ ಠಾಣೆಯ ಪೊಲೀಸರು ಪಕ್ಷಪಾತ ನಿಲುವು ಕೊನೆಗೊಳಿಸಬೇಕೆಂದು ವಿಎಚ್‌ಪಿ ಆಗ್ರಹಿಸಿದೆ. ಎಡನೀರು ಕಳರಿಯಲ್ಲಿ ಸ್ಥಾಪಿಸಲಾಗಿದ್ದ ಓಂಕಾರ ಧ್ವಜ, ತೋರಣಗಳನ್ನು ತೆರವುಗೊಳಿಸಿದ ಘಟನೆಯನ್ನು ವಿಶ್ವಹಿಂದು ಪರಿಷತ್ ಖಂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಿಪಿಎಂ ಬೆಂಬಲಿಗರಲ್ಲದ ಇತರ ಪಕ್ಷ ದವರು ನಡೆಸುವ ಧಾರ್ಮಿಕ ಕಾರ್ಯ ಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ ಸಿಪಿಎಂನ ನಿಲುವನ್ನೇ ಪೊಲೀಸರು ಕೂಡ ಬೆಂಬಲಿಸುತ್ತಿದ್ದಾ ರೆಂದು ವಿಎಚ್‌ಪಿ ದೂರಿದೆ. ಸಾರ್ವಜ ನಿಕ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಹಲವು ವರ್ಷಗಳಿಂ ದ ಸ್ಥಾಪಿಸಿರುವ ಸಿಪಿಎಂ ಧ್ವಜ, …

ಸೌದಿ ಅರೇಬಿಯಾದಲ್ಲಿ ಕಾಸರಗೋಡು ನಿವಾಸಿ ಗುಂಡೇಟಿಗೆ ಬಲಿ

ಕಾಸರಗೋಡು: ಕಾಸರಗೋಡು ಖಾಸಗಿ ಬಸ್ಸೊಂದರ ಚಾಲಕ ಸೌದಿ ಅರೇಬಿಯಾದಲ್ಲಿ ಗುಂಡೇಟು ತಗಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂದಡ್ಕ ಏಣಿಂiiಡಿ ನಿವಾಸಿ  ಕುಂಬಕ್ಕೋಡು ಮುಹಮ್ಮದ್ ಬಷೀರ್ (42) ಸಾವನ್ನಪ್ಪಿದ ವ್ಯಕ್ತಿ. ಇವರು ಮೊನ್ನೆ ರಾತ್ರಿ 12 ಗಂಟೆ ವೇಳೆಗೆ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ ಸ್ಥಳದಲ್ಲಿ ತಮ್ಮ ಕಾರಿನ ಬಳಿಯಲ್ಲೇ ಗುಂಡೇಟು ತಗಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.