ಮಹಿಳೆ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ವರ್ಕಾಡಿ ಕೆದುಂಬಾಡಿ ಬಾವಲಿಗುಳಿಯ ಅಸ್ತಾಬ್ ಎಂಬವರ ಪತ್ನಿ ಅಪ್ಸಾಬಿ (58) ಮನೆ ಬಳಿಯ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಮುಂಜಾನೆ 5.30ಕ್ಕೆ ಇವರು ಮನೆಯಿಂದ ನಾಪತ್ತೆ ಯಾಗಿದ್ದರು. ಇದರಿಂದ ಅವರಿಗಾಗಿ ಮನೆಯವರು ಹುಡುಕಾಟ ನಡೆಸುತ್ತಿ ದ್ದಾಗ ಅಪ್ಸಾಬಿ ಬಾವಿಯಲ್ಲಿ ಬಿದ್ದಿರು ವುದು ಕಂಡುಬಂದಿದೆ. ಅಗ್ನಿಶಾಮಕದಳ ತಲುಪಿ ಅವರನ್ನು ಮೇಲಕ್ಕೆತ್ತಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  …

ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಿಕೊಳ್ಳಲು ಯತ್ನಿಸಿದ ವ್ಯಕ್ತಿಯ ಸೆರೆ

ಕಾಸರಗೋಡು: ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಲು ಪ್ರಯತ್ನಿಸಿದ ವ್ಯಕ್ತಿಯನ್ನು ಇತರ ಪ್ರಯಾಣಿಕರು ಹಾಗೂ ನೌಕರರು ಸೇರಿ ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪ್ರಯಾಣಿಕೆಯ ಹೇಳಿಕೆ ದಾಖಲಿಸಿಕೊಂಡ ಬಳಿಕ ವ್ಯಕ್ತಿಯನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಲಪ್ಪುಳ ನಿವಾಸಿಯಾದ ನಾಸರ್ (53) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬಸ್‌ನಲ್ಲಿ ಕುಳಿತಿದ್ದ ಮಹಿಳೆಯನ್ನು ನಾಸರ್ ಬಿಗಿದಪ್ಪಲು ಪ್ರಯತ್ನಿಸಿದ್ದನೆನ್ನ …

ಡಿವೈಡರ್‌ಗೆ ಢಿಕ್ಕಿ ಹೊಡೆದು ಲಾರಿ ಪಲ್ಟಿ

ಕಾಸರಗೋಡು: ಪೇಟೆಯನ್ನು ಸುಂದರಗೊಳಿಸುವ ಅಂಗವಾಗಿ ಪಾಲಕುನ್ನು ಪೇಟೆಯಲ್ಲಿ ಸ್ಥಾಪಿಸಿದ್ದ ಡಿವೈಡರ್‌ಗೆ ಢಿಕ್ಕಿ ಹೊಡೆದು ಸರಕು ಲಾರಿ ಮಗುಚಿ ಬಿದ್ದಿದೆ. ಇಂದು ಮುಂಜಾನೆ ಅಪಘಾತ ಉಂಟಾಗಿದೆ. ಮಹಾರಾಷ್ಟ್ರದ ಕೋಲಾಪುರದಿಂದ ಕಣ್ಣೂರಿಗೆ ಸಕ್ಕರೆ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ. ಚಾಲಕನ ಅಶ್ರದ್ಧೆಯೇ ಅಪಘಾತಕ್ಕೆ ಕಾರಣವೆಂದು ಸಂಶಯಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿವೈಡರ್‌ಗೆ ಢಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದಿದ್ದು, ಈ ವೇಳೆ ಅಲ್ಲಿದ್ದ ನಾಲ್ಕು ಸೋಲಾರ್ ಬೀದಿದೀಪಗಳು ಹಾನಿಗೀಡಾಗಿವೆ.  ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಬೇಕಲ ಪೊಲೀಸರು ಲಾರಿಯ ಚಾಲಕ ಇಜಾಸ್ ಎಂಬಾತನನ್ನು …

ನೇಣುಬಿಗಿದು ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಮೃತ್ಯು

ಕಾಸರಗೋಡು: ಕ್ಷುಲ್ಲಕ ಕಾರಣಕ್ಕೆ  ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ ಪಟ್ಟಳು. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಅರಮಂಗಾನ ಉಲೂಜಿಯ ಸುಮಲತಾ ಎಂಬ ವರ ಪುತ್ರಿ ರಂಜಿನಿ ಮೃತಪಟ್ಟ ಯುವತಿ.  ಎಪ್ರಿಲ್ ೨೮ರಂದು ರಾತ್ರಿ ರಂಜಿನಿ ಶೌಚಾಲಯದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿ ದ್ದಳು. ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೂ ನಂತರ ಅಲ್ಲಿಂದ ಕಣ್ಣೂರಿನ ಆಸ್ಪತ್ರೆಗೂ ಸ್ಥಳಾಂತರಿಸಲಾಗಿತ್ತು.

ವಿವಾಹ ಭರವಸೆಯೊಡ್ಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ ಸೆರೆ

ಕಾಸರಗೋಡು: ಮದುವೆಯಾ ಗುವುದಾಗಿ ಭರವಸೆಯೊಡ್ಡಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಯುವಕ ಕೊನೆ ಗೂ ಪೊಲೀಸರ ಕೈಗೆ ಸಿಲುಕಿದ್ದಾನೆ. ತೃಶೂರು ಕೈಪಮಂಗಲ ಕುರಿಕ್ಕುಳಿ ನಿವಾಸಿ ಶೋಭಿ ಅಲಿಯಾಸ್ ಪಿ.ಎಸ್. ಪ್ರಶೋಬ್ (30) ಬಂಧಿತ ಆರೋಪಿ.  ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ಮೇಲ್ನೋಟದಲ್ಲಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ. ಅಜಿತ, ಪೊಲೀಸ್ ಸ್ಕ್ವಾಡ್ ಸದಸ್ಯರುಗಳಾದ ಎಸ್‌ಐ ನಾರಾಯಣನ್, ಎಎಸ್‌ಐ ಸಾಜು ಎಂಬವರನ್ನೊಳಗೊಂಡ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಮೋಡೆಲಿಂಗ್ ಇತ್ಯಾದಿಗಳಲ್ಲಿ ಅವಕಾಶ ಕೊಡಿಸುವುದೆಂದು …

ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆ ನಡೆದ ಜಗಳದ ಹೆಸರಲ್ಲಿ 60ನೇ ವರ್ಷದಲ್ಲಿ ಮತ್ತೆ ಪರಸ್ಪರ ಹೊಡೆದಾಡಿಕೊಂಡ ಸಹಪಾಠಿಗಳು

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ನಡೆದ ಜಗಳದ ಹಳೇ ದ್ವೇಷದಿಂದ ಈಗ 60 ವರ್ಷ ದಾಟಿದ ಸಹಪಾಠಿಗಳಿಬ್ಬರೂ ಮತ್ತೆ ಪರಸ್ಪರ ಹೊಡೆದಾಡಿಕೊಂಡ ಸ್ವಾರಸ್ಯಕರ ಘಟನೆ ನಡೆದಿದೆ. ವೆಳ್ಳರಿಕುಂಡ್‌ಗೆ ಸಮೀಪದ ಮಾಲೋಂ ವೆಟ್ಟಕೊಂಬಿಲ್ ಬಾಬು (62) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅವರು ನಾಲ್ಕನೇ ಕ್ಲಾಸಿನಲ್ಲಿ ಸಹಪಾಠಿಯಾಗಿದ್ದ ಮಾಲೋಂ ನಿವಾಸಿ ಆಗಿರುವ ಬಾಲಕೃಷ್ಣನ್ (62) ಹಾಗೂ ಅವರ ಸ್ನೇಹಿತ ವಲಿಯ ಪ್ಲಾಕಲ್ ಮ್ಯಾಥ್ಯು (61) ಎಂಬವರ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. …

ಮನೆಯ ಹೆಂಚು ತೆಗೆದು ಒಳನುಗ್ಗಿ ಚಿನ್ನ, ಸೀರೆಗಳನ್ನು ಕಳವುಗೈದ ಆರೋಪಿ ಸೆರೆ

ಕಾಸರಗೋಡು: ಬೇಡಗಂ ಕೊಳತ್ತೂರಿನಲ್ಲಿ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿ  ಅರ್ಧ ಪವನ್ ಚಿನ್ನಾಭರಣ ಹಾಗೂ ಸೀರೆಗಳನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕೊಳತ್ತೂರು ಮನಿಯಾರಂ ಕೊಚ್ಚಿಯ ಭಾಸ್ಕರನ್ (45) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಸೋಮವಾರ ರಾತ್ರಿ  ಕೊಳತ್ತೂರು ನಾರಕ್ಕೋಟ್‌ನ ಸರೋಜಿನಿ (62) ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ ಸರೋಜಿನಿ ಸಮೀಪದಲ್ಲಿ ವಾಸಿಸುವ ಮಗಳ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಅವರು …

ಪೈವಳಿಕೆ ಸಹಕಾರಿ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ನಿಧನ

ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಪೈವಳಿಕೆ ನಿವಾಸಿ ಪರಮೇಶ್ವರ (71) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನರಾದರು. ಇವರು ಸಿಪಿಐಯ ಸಕ್ರಿಯ ಕಾರ್ಯಕರ್ತ ನಾಗಿದ್ದರು. ಮೃತರು ಪತ್ನಿ ಸುಗುಣ, ಮಕ್ಕಳಾದ ನವೀನ್ ಕುಮಾರ್, ಪ್ರವೀಣ್ ಕುಮಾರ್, ಸೊಸೆಯಂದಿ ರಾದ ಸೌಮ್ಯ, ಶಿಲ್ಪ, ಸಹೋದರ-ಸಹೋದರಿಯರಾದ ಕೃಷ್ಣ, ರಮೇಶ, ರತ್ನ, ಭವಾನಿ, ಲಕ್ಷ್ಮಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ದಿವಂಗತರಾದ ಕೋಚು ಸಾಲಿಯಾನ್-ದೇವಕಿ ದಂಪತಿಯ ಪುತ್ರನಾದ ಇವರ ಓರ್ವ ಸಹೋದರ ಅಶೋಕ …

ವ್ಯಾಪಾರಿ ಮನೆಯೊಳಗೆ ನೇಣು ಬಿಗಿದು ಸಾವು

ಕಾಸರಗೋಡು: ವ್ಯಾಪಾರಿಯೊ ಬ್ಬರು ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಡಗದಲ್ಲಿ ಜೀನಸು ಅಂಗಡಿ ನಡೆಸುವ ವಲಿಯಡ್ಕಂನ ವಿನೀಶ್ ಬಾಬು (45) ಸಾವಿಗೀಡಾದ ವ್ಯಕ್ತಿ. ನಿನ್ನೆ ಮಧ್ಯಾಹ್ನ 1 ಗಂಟೆಗೆ ವಿನೀಶ್ ಬಾಬು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅದನ್ನು ಕಂಡ ತಾಯಿ ಬೊಬ್ಬೆ ಹಾಕಿದ್ದು, ಅಷ್ಟರಲ್ಲಿ ತಲುಪಿದ ನೆರೆಮನೆ ನಿವಾಸಿಗಳು ಬಾಬುರನ್ನು ಕೆಳಗಿಳಿಸಿ ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ  ರಕ್ಷಿಸಲಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸತ್ರೆಯಲ್ಲಿ ನಡೆಸಲಾಯಿತು. ಬೇಡಗಂನ …

ಕುಂಬಳೆ- ಕಂಚಿಕಟ್ಟೆ- ಕೋಟೆಕಾರು ನಾಯ್ಕಾಪು ರಸ್ತೆಯಲ್ಲಿ ಅಪಾಯ ಭೀತಿ

ಕುಂಬಳೆ: ಕುಂಬಳೆಯಿಂದ ಕಂಚಿಕಟ್ಟೆ ಕೋಟೆಕಾರು ಮೂಲಕ ನಾಯ್ಕಾಪುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ. ದಿನನಿತ್ಯ ನೂರಾರು ಕುಟುಂಬಗಳು ಸಂಚರಿಸುವ ಈ ಪಿಡಬ್ಲ್ಯುಡಿ ರಸ್ತೆಯತ್ತ ಅಧಿಕಾರಿಗಳು ಮಾತ್ರ ಕಣ್ಣೆತ್ತಿಯೂ ನೋಡುತ್ತಿಲ್ಲ. ಅದರ ಪರಿಣಾಮವಾಗಿಯೇ ಈ ಸ್ಥಿತಿ ಉಂಟಾಗಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ. ಕಳೆದ ಬೇಸಿಗೆ ಕಾಲದಲ್ಲೇ ರಸ್ತೆಯ ವಿವಿಧೆಡೆ ಕುಸಿಯಲಾರಂಭಿಸಿತ್ತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ನೀರಿನ ರಭಸಕ್ಕೆ ರಸ್ತೆ ಮತ್ತಷ್ಟು ಕುಸಿದಿದೆ. ಅಗಲ ಕಿರಿದಾದ ರಸ್ತೆಯ ಬದಿ ಕುಸಿಯತೊಡಗಿರುವುದು ವಾಹನ ಚಾಲಕರು ಹಾಗೂ ಪ್ರಯಾಣಿಕರಿಗೆ ತೀವ್ರ …