ಅಪಘಾತ: ಒಂದೇ ಕುಟುಂಬದ 9 ಮಂದಿ ಸಾವು

ನವದೆಹಲಿ:  ಮಧ್ಯಪ್ರದೇಶದ ದುಬೂವ ಜಿಲ್ಲೆಯ ಮೇಘ ನಗರದಲ್ಲಿ  ವ್ಯಾನ್‌ಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸಂಜೇಲಿ ರೈಲ್ವೇ ಕ್ರಾಸಿಂಗ್ ನಲ್ಲಿರುವ ಮೇಲ್ಸೇತುವೆ ದಾಟುವಾಗ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ವ್ಯಾನ್‌ಗೆ ಢಿಕ್ಕಿ ಹೊಡೆದಿದೆ. ವ್ಯಾನ್‌ನೊಳಗಿದ್ದ ೯ ಮಂದಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿ ದ್ದಾರೆ. ಇಬ್ಬರನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವನ್ಯ ಜೀವಿಗಳ ದಾಳಿ : ಜನರ ಜೀವ, ಸೊತ್ತಿಗೆ ಸಂರಕ್ಷಣೆ ಒದಗಿಸಬೇಕು-ಎಂ.ಎಲ್. ಅಶ್ವಿನಿ

ಅಡೂರು:  ವನ್ಯ ಜೀವಿಗಳ ಉಪಟಳ ತೀವ್ರಗೊಂಡ ದೇಲಂಪಾಡಿ ಪಂಚಾಯತ್‌ನ ಜನರ ಜೀವ ಹಾಗೂ ಸೊತ್ತಿಗೆ ಸಂರಕ್ಷಣೆ ಒದಗಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ. ಬಿಜೆಪಿ ದೇಲಂಪಾಡಿ ಏರಿಯಾ ಸಮಿತಿ ನೇತೃತ್ವದಲ್ಲಿ ಪರಪ್ಪದ ಅರಣ್ಯ ಇಲಾಖೆ ಡಿಪ್ಪೋಗೆ ನಿನ್ನೆ ನಡೆಸಿದ ಮಾರ್ಚ್ ಹಾಗೂ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವನ್ಯ ಜೀವಿಗಳ ದಾಳಿಯಿಂದ ಕೃಷಿನಾಶ ಉಂಟಾದರೆ ಅತ್ಯಲ್ಪ ನಷ್ಟ ಪರಿಹಾರ ನೀಡಲಾಗುತ್ತಿದೆ. ಅದು ಕೂಡಾ ಲಭಿಸಲು ಹಲವು ಕಾಲ ಕಾಯಬೇಕಾಗಿ ಬರುತ್ತಿದೆ.  ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು …

ರೇಶನ್ ಸಾಮಗ್ರಿಗಳನ್ನು ಎಫ್‌ಸಿಐಯಿಂದ ನೇರವಾಗಿ ಅಂಗಡಿಗಳಿಗೆ ತಲುಪಿಸಲು ಒತ್ತಾಯ

ಉಪ್ಪಳ: ಗುತ್ತಿಗೆದಾರರು ಯಥಾ ಸಮಯ ರೇಶನ್ ಸಾಮಗ್ರಿಗಳನ್ನು ವಿತರಿಸುವಲ್ಲಿ ಲೋಪವೆಸಗುತ್ತಿ ದ್ದಾರೆಂದೂ ಆದ್ದರಿಂದ ರೇಶನ್ ಸಾಮಗ್ರಿಗಳನ್ನು ಸಿವಿಲ್ ಸಪ್ಲೈ ಕಚೇರಿಯನ್ನು ಹೊರತುಪಡಿಸಿ ಎಫ್‌ಸಿಐಯಿಂದ ನೇರವಾಗಿ ರೇಶನ್ ಅಂಗಡಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಮಂಜೇಶ್ವರ ತಾಲೂಕು ರೇಶನ್ ಡೀಲರ್ಸ್ ಅಸೋಸಿಯೇಶನ್ ಸಮ್ಮೇಳನ ಒತ್ತಾಯಿಸಿದೆ. ವೇತನ ಪ್ಯಾಕೇಜ್ ಪರಿಷ್ಕರಿಸಬೇಕು, ಹಲವು ವರ್ಷಗಳಿಂದ ಅಂಗಡಿ ನಡೆಸುತ್ತಿ ರುವ ತಾತ್ಕಾಲಿಕ ರೇಶನ್ ಲೈಸನ್ಸ್ ಗಳನ್ನು ಖಾಯಂಗೊಳಿ ಸಬೇಕು, ವೇತನ ಯಥಾ ಸಮಯ ಲಭ್ಯಗೊಳಿ ಸಬೇಕು ಮುಂತಾದ ಬೇಡಿಕೆಗಳನ್ನು ಸಮ್ಮೇಳನ ಮುಂದಿರಿಸಿದೆ. ರಾಜ್ಯ ಕಾರ್ಯದರ್ಶಿ …

ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪೇಟೆಯಲ್ಲಿ  ಪಾದಚಾರಿಗಳಿಗೆ ನಡೆದು ಹೋಗಲು ದಾರಿಯಿಲ್ಲ: ಹೆಚ್ಚಿದ ಸಮಸ್ಯೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಕಂಡುಬಂದ ಲೋಪದೋಷಗಳನ್ನು ತಿಳಿಸುವಾಗ  ಮೌನ ವಹಿಸುವ ಅಧಿಕಾರಿಗಳ ನಿಲುವಿನಿಂದಾಗಿ ಮೊಗ್ರಾಲ್‌ನಲ್ಲಿ ಪಾದಚಾರಿಗಳಿಗೆ  ಸಮಸ್ಯೆ ಇನ್ನಷ್ಟು ಹೆಚ್ಚಿದೆ. ಮೊದಲು ಮಾಡಬೇಕಾದ ಕಾಮಗಾರಿಗಳನ್ನು ಕೊನೆಗೆ ನಡೆಸುವ ಕ್ರಮದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಭಾರೀ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಚರಂಡಿ ಹಾಗೂ ಕಾಲ್ನಡೆ  ದಾರಿಯ ಅಭಾವದಿಂದಾಗಿ ಹಲವು ಕಡೆಗಳಲ್ಲಿ ಜನರಿಗೆ ನಡೆದಾಡಲು ಸಮಸ್ಯೆ ಎದುರಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಸಮೀಪ ಪ್ರದೇಶಗಳು ತೀವ್ರ ಮಳೆಗೆ  ಜಲಾವೃತವಾಗುತ್ತಿವೆ.  ಮೊಗ್ರಾಲ್ ಲೀಗ್ ಕಚೇರಿಯಿಂದ ಮುಹಿಯುದ್ದೀನ್ ಜುಮಾ ಮಸೀದಿ ವರೆಗಿನ ೫೦೦ ಮೀಟರ್ …

ಕಾನ ಮಠ ಗುರು ಭವನಕ್ಕೆ ಶಂಕುಸ್ಥಾಪನೆ

ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಹವ್ಯಕ ಮಠಗಳಲ್ಲಿ ಒಂದಾದ ಕಾನ ಶ್ರೀಶಂಕರನಾರಾಯಣ ಮಠ-ಶ್ರೀಧೂಮಾವತಿ ಅಮ್ಮನವರ ದೈವಕ್ಷೇತ್ರಕ್ಕೆ ಸಂಬAಧಿಸಿ ಮಠದ ಶ್ರೀಧೂಮಾವತೀ ದೈವದ ಭಂಡಾರ ಕೊಟ್ಟಗೆಯ ಮುಂಭಾಗದಲ್ಲಿ ಮೂಡ ಕೋಣಮ್ಮೆ ವೆಂಕಟರಮಣ ಭಟ್ಟರು ದಾನವಾಗಿ ನೀಡಿದ ಭೂಮಿಯಲ್ಲಿ ಶ್ರೀ ರಾಮಚಂದ್ರಾಪುರ ಸಂಸ್ಥಾನದವರ ಮೊಕ್ಕಾಂ ಮತ್ತು ಕಾನ ಮಠದ ಭಜಕರ ಉಪಯೋಗಕ್ಕಾಗಿ ಗುರುಭವನ ಸಹಿತವಾದ ಸಭಾಭವನದ ಕಾಮಗಾರಿ ಪ್ರಾರಂಭಕ್ಕೆ ಶಂಕುಸ್ಥಾಪನೆ ನಡೆಯಿತು.ಕ್ಷೇತ್ರಾಚಾರ್ಯ ಗುಣಾಜೆ ಭಟ್ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ವಾಸ್ತುಪೂಜೆ, ಶಂಕುಸ್ಥಾಪನೆ ನಡೆಯಿತು. ಮುಖ್ಯ ಅರ್ಚಕÀ ಕೇಶವ …

ಕ.ಸಾ.ಪದಿಂದ ಸೀತಾಂಗೋಳಿಯಲ್ಲಿ ಕೃಷ್ಣರಾಜ ಒಡೆಯರ 141ನೇ ಜನ್ಮದಿನಾಚರಣೆ

ಸೀತಾಂಗೋಳಿ: ಮೈಸೂರು ಸಂಸ್ಥಾನ ಸರ್ವಾಂಗೀಣ ಪ್ರಗತಿ ಹೊಂದಲು,ವಿಶ್ವಮಾನ್ಯವಾಗಲು ಕಾರಣೀಭೂತರಾದವರು ನಾಲ್ವಡಿ ಕೃಷ್ಣರಾಜ ಒಡೆಯರು. ಅವರು ಕರುನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಧೀಮಂತ ವ್ಯಕ್ತಿ.ಒಡೆಯರ ಆಳ್ವಿಕೆಯು ಮೈಸೂರು ಸಂಸ್ಥಾನದ ಸುವರ್ಣ ಯುಗವಾಗಿತ್ತು ಎಂದು ನ್ಯಾಯವಾದಿ, ಸಾಹಿತಿ ಥೋಮಸ್ ಡಿ’ಸೋಜ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ 141ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ, …

ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆ ಡಿಸೆಂಬರ್‌ನಲ್ಲಿ ಪೂರ್ತೀಕರಿಸಲಾಗುವುದು-ಕೇಂದ್ರ ಸಚಿವ ಗಡ್ಕರಿ

ತಿರುವನಂತಪುರ: ಕೇರಳದ ರಾಷ್ಟ್ರೀಯ ಹೆದ್ದಾರಿಯನ್ನು ಷಟ್ಪಥವಾಗಿ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಈವರ್ಷ ಡಿಸೆಂಬ ರ್‌ನೊಳಗಾಗಿ ಪೂರ್ತೀಕರಿಸಲಾಗು ವುದೆಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ರಾಜ್ಯ ಲೋಕೋಪಯೋಗಿ ಖಾತೆ ಸಚಿವರನ್ನೊಳಗೊಂಡ ನಿಯೋಗ ದಿಲ್ಲಿಯಲ್ಲಿ ನಿನ್ನೆ ಕೇಂದ್ರ ಭೂಸಾರಿಗೆ ಸಚಿವರನ್ನು ಭೇಟಿಯಾಗಿ ಕೇರಳದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಬಗ್ಗೆ ನಡೆಸಿದ ಚರ್ಚೆಯ ವೇಳೆ ಕೇಂದ್ರ ಸಚಿವರು ಈ ಭರವಸ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಡೆಸುತ್ತಿರುವ ಕೆಲವು ರೀಚ್‌ಗಳಲ್ಲಿ ಸಮಸ್ಯೆಗಳು …

ಜಿಲ್ಲೆಯ 71 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಪಟ್ಟಾ ಶೀಘ್ರ ವಿತರಣೆ

ಕಾಸರಗೋಡು: ಜಿಲ್ಲೆಯ 71 ಪರಿಶಿಷ್ಟ ವರ್ಗ ಕುಟುಂಬಗಳಿಗೆ ಶೀಘ್ರದಲ್ಲೇ ಭೂಮಿಯ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಗೋತ್ರ ವಿಭಾಗವಾದ ಕೊರಗ ಕುಟುಂಬಗಳ ಭೂಮಿಗೆ ಹಕ್ಕುಪತ್ರ ದೊರಕಿಸುವ ನೂತನ ಯೋಜನೆಯಾದ ಆಪರೇಶನ್ ಸ್ಮೈಲ್ ಚಟುವಟಿಕೆ ಕುರಿತು ಅವಲೋಕನ ನಡೆಸಲು ಜಿಲ್ಲಾಧಿಕಾರಿಯ ಚೇಂಬರ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರಿಸಲಾಯಿತು. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ, ಸರ್ವೇ, ಪರಿಶಿಷ್ಟ ವರ್ಗ  ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು. ಪ್ರಸ್ತುತ ಜಿಲ್ಲೆಯ ಎಲ್ಲಾ ಕೊರಗ …

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ:- ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ತೂಮಿನಾಡು ಇದರ 2025-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಉಪಾಧ್ಯಕ್ಷರಾಗಿ ರಾಮ ಉಜಿರೆ, ಪ್ರಧಾನ ಕಾರ್ಯದರ್ಶಿ ಯಾಗಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಜತೆ ಕಾರ್ಯದರ್ಶಿಯಾಗಿ ಭೋಜ ಮಾಸ್ತರ್, ಪಾವೂರು, ಕೋಶಾಧಿಕಾರಿಯಾಗಿ ಈಶ್ವರ್ ಕುಲಾಲ್ ಕಣ್ವತೀರ್ಥ, ಕ್ರೀಡಾ ಕಾರ್ಯದರ್ಶಿಯಾಗಿ ತಾರನಾಥ ಕಣ್ವತೀರ್ಥ, ಸಂಘಟನಾ ಸಂಚಾಲಕರಾಗಿ ಸುಧೀರ್ ರಂಜನ್ ದೈಗೋಳಿ, ಜಯಂತ ಚಿಪ್ಪಾರು, ಸೇವಾದಳಪತಿಗಳಾಗಿ ಪ್ರಸಾದ್ ತೂಮಿನಾಡು, ಸುರೇಶ್ ಕಣ್ವತೀರ್ಥ, ನ್ಯಾಯ ಸಲಹಾ …