ವಾಹನ ಅಪಘಾತ: ತನಿಖೆಗೆ ಹೋದ ಎಸ್‌ಐಗಳ ಮೇಲೆ ಹಲ್ಲೆ; ಆರೋಪಿ ಸೆರೆ

ಕಾಸರಗೋಡು: ವಾಹನ ಅಪಘಾ ತದ ಬಗ್ಗೆ ತನಿಖೆ ನಡೆಸಲು ಹೋದ ಎಸ್‌ಐಗಳ ಮೇಲೆ ಹಲ್ಲೆ ನಡೆಸಿ ಅವರ ಕರ್ತವ್ಯಕ್ಕೆ ಅಡಚಣೆ ಉಂಟುಮಾಡಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಪನತ್ತಡಿ ಚಾಮುಂಡಿಕುನ್ನುನ ಪ್ರಮೋದ್ ಎಸ್.ಸಿ (46) ಬಂಧಿತ ಆರೋಪಿ. ಚೆರ್ಕಳದಲ್ಲಿ ನಿನ್ನೆ ಸಂಜೆ ಆರೋಪಿ ಚಲಾಯಿಸುತ್ತಿದ್ದ ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಲ್ಲಿ ಸ್ಕೂಟರ್ ಸವಾರ ಕುಂಟಾರು ಪಡಿಯತ್ತಡ್ಕದ  ಇಬ್ರಾಹಿಂ ಬಿನ್‌ಶಾದ್ (19)ಗಾಯಗೊಂಡು ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಅಪಘಾತದ ಬಗ್ಗೆ ತನಿಖೆ ನಡೆಸಲು ವಿದ್ಯಾಗರ …

ಮೊಮ್ಮಗುವನ್ನು ಶಾಲೆಗೆ ಕರೆದುಕೊಂಡು ಹೋದ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಬಸ್ ತಂಗುದಾಣದಲ್ಲಿ ಪತ್ತೆ

ಕುಂಬ್ಡಾಜೆ: ಮೊಮ್ಮಗುವನ್ನು ಶಾಲೆಗೆ  ಕರೆದೊಯ್ದ ಬಳಿಕ ನಾಪತ್ತೆಯಾದ ಮಹಿಳೆಯನ್ನು ಬಸ್ ತಂಗುದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಬ್ಡಾಜೆ, ಚಂದ್ರಂಪಾರೆ ನಿವಾಸಿಯಾದ ೫೪ರ ಹರೆಯದ ಮಹಿಳೆಯನ್ನು ಇಂದು ಮುಂಜಾನೆ ಮಲ್ಲಂಪಳ್ಳಿ ಸಮೀಪದ ಬಸ್ ತಂಗುದಾಣದಲ್ಲಿ ಪತ್ತೆಹಚ್ಚಲಾಗಿದೆ. ಇವರನ್ನು ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ. ಕಳೆದ  ಎರಡು ವಾರಗಳಿಂದ ಈ ಮಹಿಳೆ ಅಮ್ಮಂಗೋಡಿನ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಪುತ್ರಿಯ ಮಗುವನ್ನು ಪೊವ್ವಲ್ ಶಾಲೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಇವರು ಹಿಂತಿರುಗಿರಲಿಲ್ಲ. ಸಂಜೆವರೆಗೂ ಹುಡುಕಾಡಿ ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ …

ವರ್ಕ್ ಶಾಪ್‌ನಿಂದ ಗ್ಯಾಸ್ ಸಿಲಿಂಡರ್, ಬೋಲ್ಟ್ ಕಳವು

ಕಾಸರಗೋಡು: ವಿದ್ಯಾನಗರದಲ್ಲಿ ಕಾರ್ಯವೆಸಗುತ್ತಿರುವ  ವರ್ಕ್ ಶಾಪ್‌ಗೆ ಕಳ್ಳರು ನುಗ್ಗಿ ಸುಮಾರು  75,000 ರೂ. ಬೆಲೆಯ ಎಂ.ಎಸ್ ಬೋಲ್ಡ್ ಮತ್ತು  ಎಲ್‌ಪಿ ಕಂಪೆನಿಯ ಗ್ಯಾಸ್ ಸಿಲಿಂಡರ್‌ಗಳನ್ನು ಕಳವುಗೈದಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ ವರ್ಕ್ ಶಾಪ್ ಸಿಬ್ಬಂದಿ ನೀಲೇಶ್ವರ ಕರುವಾಂಚೇರಿ  ನಿವಾಸಿ ಪ್ರಯಾಗ್ ವಿ.ವಿ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೂನ್ 8 ಮತ್ತು 9ರ ನಡುವೆ ಈ ಕಳವು ನಡೆದಿದೆ.

ಇಂಧನ ಸೋರಿಕೆ: ಬಾಹ್ಯಾಕಾಶ ಯಾನ  ಮತ್ತೆ ಮುಂದೂಡಿಕೆ

ನವದೆಹಲಿ: ಭಾರತದ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್-೪ ಮಿಷನ್‌ನನ್ನು ಮತ್ತೆ ಮುಂದೂಡಲಾಗಿದೆ. ಈ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಸ್ಪೇಸ್ ಎಕ್ಸ್ ಕಂಪೆನಿಯು ಉಡಾವಣೆಗೆ ಮೊದಲು ನಡೆಸಿದ ಪೋಸ್ಟ್ ಸ್ವ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ಸಮಯದಲ್ಲಿ ದ್ರವ ಆಮ್ಲಜನಕ ಸೋರಿಕೆ ಕಂಡು ಬಂದಿದೆ ಎಂದೂ ಆ ಕಾರಣದಿಂದಾಗಿ ಆಕ್ಸಿಯಮ್-೪ ಮಿಷನ್ ಯಾನವನ್ನು ಮುಂದೂಡಬೇಕಾಗಿ ಬಂದಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸುರಕ್ಷತೆ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೂಸ್ಟರ್ ತಪಾಸಣೆ ಸಮಯದಲ್ಲಿ ದ್ರವ ಆಮ್ಲ ಜನಕ …

ನೆರೆಮನೆಯ ಛಾವಡಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಅಡೂರು: ಕೂಲಿ ಕಾರ್ಮಿಕನಾದ ಯುವಕ ನೆರೆಮನೆಯ ಛಾವಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಅಡೂರು ಬಳಿಯ ಉರುಡೂರು ಚಂದನಕ್ಕಾಡ್ ಹೌಸ್‌ನ ದಿ| ಕುಂಞಿಕಣ್ಣನ್- ದಿ| ಮಾಧವಿ ದಂಪತಿಯ ಪುತ್ರ ಸತೀಶ್ ಟಿ. ಯಾನೆ ಬಿಜು (46) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಇವರು ಹಾಗೂ ಸಹೋದರಿ ಸೌಮಿನಿ ಮಾತ್ರವೇ ವಾಸಿಸುತ್ತಿದ್ದರು. ಸೌಮಿನಿ ನಿನ್ನೆ ಕೆಲಸಕ್ಕೆ ತೆರಳಿದ್ದು, ಸಂಜೆ ೫ ಗಂಟೆಗೆ ಮನೆಗೆ ಬಂದಾಗ ಸತೀಶ್ ಮನೆಯಲ್ಲಿರಲಿಲ್ಲ. ಇದರಿಂದ ನೆರೆಮನೆಗೆ ತೆರಳಿ ನೋಡಿದಾಗ ಅಲ್ಲಿ ಛಾವಡಿಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ …

ಸಹೋದರಿ ಮನೆಗೆಂದು ತಿಳಿಸಿ ಹೋದ ಯುವಕ ನಾಪತ್ತೆ

ಪೆರ್ಲ: ಸಹೋದರಿಯ ಮನೆಗೆಂದು ತಿಳಿಸಿ ಹೋದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೆರ್ಲ ಕಾಟುಕುಕ್ಕೆ ಅರೆಕ್ಕಡಿ ಎಂಬಲ್ಲಿನ ಜಯೇಶ್ (35) ನಾಪತ್ತೆಯಾದ ಬಗ್ಗೆ ದೂರಲಾಗಿದ್ದು, ಇದರಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಿಂಗಳ 9ರಂದು ಬೆಳಿಗ್ಗೆ 11 ಗಂಟೆಗೆ ಸಹೋದರಿಯ ಮನೆಗೆಂದು ತಿಳಿಸಿ ಜಯೇಶ್ ತೆರಳಿದ್ದರೆನ್ನ ಲಾಗಿದೆ. ಆದರೆ ಸಹೋದರಿಯ ಮನೆಗೆ ಅವರು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ ಎನ್ನಲಾಗಿದೆ. …

ಪೈವಳಿಕೆ: ಕಳವಿಗೀಡಾದ ಮನೆಯಲ್ಲಿ ಬೆರಳಚ್ಚು ತಜ್ಞರಿಂದ ತನಿಖೆ

ಪೈವಳಿಕೆ: ಪೈವಳಿಕೆ ಕಳಾಯಿ ಯಲ್ಲಿ 50,000 ರೂ. ಹಾಗೂ 25,000 ರೂ. ಮೌಲ್ಯದ ಸಿಸಿ ಟಿವಿ ಉಪಕರಣಗಳು ಕಳವಿಗೀಡಾದ ಮನೆ ಯಲ್ಲಿ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ನಿನ್ನೆ ತಪಾಸಣೆ ನಡೆಸಿದೆ. ಪೈವಳಿಕೆ ಕಳಾಯಿ ರಸ್ತೆಯ ಅಜೆಕ್ಕಳ ಎಂಬಲ್ಲಿನ ಅಶೋಕ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಆರೋ ಪಿಗಾಗಿ ಶೋಧ ನಡೆಸಲಾಗುತ್ತಿದೆ.ಈ ತಿಂಗಳ 7ರಂದು ರಾತ್ರಿ ಮನೆ ಯಿಂದ ಕಳವು ನಡೆದಿತ್ತು. ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿಅವರ ತಂದೆ ಮಾತ್ರವೇ …

ಮಂಜೇಶ್ವರ ಠಾಣೆಯ ಲಾಕಪ್‌ನಿಂದ ಪರಾರಿಯಾದ ವಾರಂಟ್ ಆರೋಪಿ ಸೆರೆ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಲಾಕಪ್‌ನಿಂದ ಪರಾರಿಯಾದ ವಾರಂಟ್ ಆರೋಪಿಯನ್ನು ಬಂಧಿಸಲಾಗಿದೆ. ಹೊಸಬೆಟ್ಟು ಸಲ್ಮಾ ಮಂಜಿಲ್‌ನ  ಸಿದ್ದಿಕ್ ಸಾರಿಕ್ ಪರ್ಹಾನ್ (29) ಎಂಬಾತನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.  ಸೋಮವಾರ ಮುಂಜಾನೆ ಈತ ಲಾಕಪ್‌ನಿಂದ ಪರಾರಿಯಾಗಿದ್ದನು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಆರೋಪಿ ಮುಂಬೈಗೆ ಪರಾರಿಯಾಗಿ ದ್ದಾನೆಂಬ ಬಗ್ಗೆ ಪ್ರಚಾರವುಂ ಟಾಗಿತ್ತು. ಆದರೆ ಅದನ್ನು ನಂಬದ ಪೊಲೀಸರು ಆರೋಪಿ ಮಂಜೇಶ್ವರ ಭಾಗದಲ್ಲೇ ಇದ್ದಾನೆಂದು ಖಚಿತಪಡಿಸಿ ಶೋಧ ಮುಂದುವರಿಸಿದ್ದರು. ಈ ವೇಳೆ ಆರೋಪಿಯನ್ನು ಮಂಜೇಶ್ವರ ದಿಂದಲೇ …

ನೀರ್ಚಾಲು: ಬೈಕ್ ಢಿಕ್ಕಿ ಹೊಡೆದು ಲಾಟರಿ ಏಜೆಂಟ್ ಮೃತ್ಯು

ನೀರ್ಚಾಲು: ನೀರ್ಚಾಲಿನಲ್ಲಿ ಬೈಕ್ ಢಿಕ್ಕಿ  ಹೊಡೆದು ಗಂಭೀರ ಗಾಯಗೊಂ ಡಿದ್ದ ಲಾಟರಿ ಏಜೆಂಟ್ ಮೃತಪಟ್ಟರು. ಕಣ್ಣೂರು ಆಲಕ್ಕೋಡ್  ಕಾಪಿಮಲೆ ಹೌಸ್‌ನ ಸಾಜು ಜೋರ್ಜ್ (61) ಮೃತಪಟ್ಟ ವ್ಯಕ್ತಿ. ಸೋಮವಾರ ರಾತ್ರಿ 8 ಗಂಟೆ ವೇಳೆ ನೀರ್ಚಾಲು ವಿ.ಎಂ.ನಗರದಲ್ಲಿ ಅಪಘಾತ ಸಂಭವಿಸಿತ್ತು. ಸಾಜು ಜೋರ್ಜ್ ರಸ್ತೆ ದಾಟುತ್ತಿದ್ದ ವೇಳೆ ತಲುಪಿದ ಬೈಕ್ ಅವರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ …

ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಗೊಂಡು ತಿಂಗಳುಗಳು ಕಳೆದರೂ ತೆರೆಯಲು ಕ್ರಮವಿಲ್ಲ: ಕುಂಬಳೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ

ಕುಂಬಳೆ: ಸಾರ್ವಜನಿಕರ ಸೌಕರ್ಯ ಕ್ಕಾಗಿ ಕುಂಬಳೆ ಪೇಟೆಯಲ್ಲಿ ಸ್ಥಾಪಿಸಿದ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಉದ್ಘಾಟನೆಗೊ ಳ್ಳದೆ ಉಳಿದುಕೊಂಡಿದೆ. ಕುಂಬಳೆ ಪೇಟೆಯ ಅನಿಲ್ ಕುಂಬ್ಳೆ ರಸ್ತೆಯಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳು ಕಳೆಯಿತು. ಆದರೆ ಅದನ್ನು ಉದ್ಘಾಟಿಸಿ ಸಾರ್ವಜನಿಕರ ಅಗತ್ಯಕ್ಕೆ ತೆರೆದುಕೊಡಲು ಕ್ರಮ ಉಂಟಾಗಿಲ್ಲ. ಕುಂಬಳೆ ಪಂಚಾಯತ್ ಫಂಡ್‌ನಿಂದ 40 ಲಕ್ಷ ರೂಪಾಯಿ ವ್ಯಯಿಸಿ ಈ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಪೇಟೆಗೆ ತಲುಪುವ ಸಾರ್ವಜನಿಕರಿಗೆ ಶೌಚಾಲಯ ಸೌಕರ್ಯವಿಲ್ಲವೆಂಬ ಆರೋಪ ತೀವ್ರಗೊಂಡ ಹಿನ್ನೆಲೆಯಲ್ಲಿ …