ಸಾರಿಗೆ ಕಾನೂನು ಉಲ್ಲಂಘನೆ: ಕುಂಬಳೆಯಲ್ಲಿ 15ರಷ್ಟು ದ್ವಿಚಕ್ರ ವಾಹನಗಳ ವಶ

ಕುಂಬಳೆ: ವಾಹನ ಅಪ ಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಕಾನೂ ನು ಉಲ್ಲಂಘಿ ಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳತೊಡಗಿದ್ದಾರೆ. ಇದರಂತೆ ಬಂದ್ಯೋಡು ಪೇಟೆಯಲ್ಲಿ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  15ರಷ್ಟು ದ್ವಿಚಕ್ರ ವಾಹನಗಳನ್ನು ವಶಪಡಿಸಲಾಗಿದೆ. ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದವರನ್ನು ಸೆರೆಹಿಡಿಯಲಾಗಿದೆ.  ವಾಹನಗಳನ್ನು ಕಸ್ಟಡಿಗೆ ತೆಗೆದು ಠಾಣೆಗೆ ತಲುಪಿಸಲಾಗಿದೆ. ಡ್ರೈವಿಂಗ್ ಲೈಸನ್ಸ್ ಇಲ್ಲದವರು, ಪ್ರಾಯಪೂರ್ತಿ ಯಾಗದವರು ವಾಹನ ಚಲಾಯಿಸು ವುದರಿಂದ ಅಪಘಾತಗಳು ಹೆಚ್ಚುತ್ತಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ  ಪೊಲೀಸರು ಕಾರ್ಯಾ ಚರಣೆಯನ್ನು …

ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ

ಮಂಜೇಶ್ವರ: ವರ್ಕಾಡಿ ಅಗ್ರಿಕಲ್ಚರಿಸ್ಟ್  ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ಮಜೀರ್‌ಪಳ್ಳದಲ್ಲಿನ ನೂತನ ಕಟ್ಟಡದ ಉದ್ಘಾಟನೆಯನ್ನು ನಿನ್ನೆ ಶಾಸಕ ಎಕೆಎಂ ಅಶ್ರಫ್ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿ ಕೌಂಟರ್ ಉದ್ಘಾಟನೆ ಮಾಡಿದರು. ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಕುದುರು ಧ್ವಜಾರೋಹಣ ನೆರವೇರಿಸಿ ಸ್ವಾಗತಿಸಿದರು. ಠೇವಣಿ ಸ್ವೀಕಾರವನ್ನು ಕೋ ಓಪರೇಟಿವ್ ಸೊಸೈಟಿ ಡೆಪ್ಯುಟಿ ರಿಜಿಸ್ಟ್ರಾರ್ ಚಂದ್ರನ್ ವಿ. ನಿರ್ವಹಿಸಿದರು. ಕೆ.ಆರ್ ಜಯಾನಂದ ಸಾಲ ವಿತರಣೆ ಮಾಡಿದರು.ಕೋ ಆಪರೇಟಿವ್ ಸೊಸೈಟಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಫ್ ಜನರಲ್ ರವೀಂದ್ರ ಎ. …

ಕೇರಳ ಆಶಾವರ್ಕರ್ಸ್ ಸಂಘ್ ಜಿಲ್ಲಾ ಸಮ್ಮೇಳನ ಆಶಾ ಕಾರ್ಯಕರ್ತೆಯರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು- ಬಿಎಂಎಸ್

ಕಾಸರಗೋಡು: ಆಶಾ ಕಾರ್ಯ ಕರ್ತೆಯರನ್ನು ಸರಕಾರಿ  ನೌಕರರಾಗಿ ಅಂಗೀಕರಿಸಿ ಅರ್ಹವಾದ ಸೌಲಭ್ಯಗಳನ್ನು ನೀಡಬೇಕು ಎಂದು ಬಿಎಂಎಸ್ ಕೇರಳ ಆಶಾವರ್ಕರ್ಸ್ ಸಂಘ್ ಆಗ್ರಹಿಸಿದೆ. ಆಶಾ ಕಾರ್ಯಕರ್ತೆಯರಿಗೆ ಲಭಿಸಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡಬೇಕೆಂದು ಒತ್ತಾಯಿಸಲಾಯಿತು. ಜಿಲ್ಲಾ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಕೇರಳ ಆಶಾ ವರ್ಕರ್ಸ್ ಸಂಘ್  ಜಿಲ್ಲಾಧ್ಯಕ್ಷೆ ಜಯಲಕ್ಷ್ಮಿ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಶುಭ ಕೋರಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಿತಿಯ ನೂತನ ಪದಾಧಿಕಾರಿಗಳನ್ನು …

ಪಾಸ್ಟರ್‌ಗಳ ಪ್ರಾರ್ಥನೆಯಲ್ಲಿ ಪಾಕಿಸ್ತಾನ ಪತಾಕೆ ಉಪಯೋಗ ವಿರುದ್ಧ ಕೇಸು

ಕೊಚ್ಚಿ: ಉದಯಂಪೇರೂರುನಲ್ಲಿ ಪಾಸ್ಟರ್‌ಗಳು ಆಯೋಜಿಸಿದ ಪ್ರಾರ್ಥ ನಾ ಕಾರ್ಯಕ್ರದಲ್ಲಿ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ದೇಶಗಳ ಕ್ಷೇಮಕ್ಕಾಗಿ ನಡೆಸಿದ ಪ್ರಾರ್ಥನೆಗಳ ಮಧ್ಯೆ ಪಾಕಿಸ್ತಾನದ ಪತಾಕೆ ಉಪಯೋಗಿಸಿರುವುದರ ವಿರುದ್ಧ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕುಟ್ಟನ್ ನೀಡಿದ ದೂರಿನಲ್ಲಿ ಕೇಸು ದಾಖಲಿಸ ಲಾಗಿದೆ. ಕಾರ್ಯಕ್ರಮ ಆಯೋಜಿಸಿದ ಪಾಸ್ಟರ್ ಹಾಗೂ ಸಭಾಂಗಣದ ಮಾಲಕನಾದ ದೀಪು ಜೇಕಬ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪಾಕಿಸ್ತಾನ್ ಧ್ವಜವನ್ನು ವಶಪಡಿಸಲಾಗಿದೆ. ಆದರೆ ದುರುದ್ದೇಶ ಪೂರಿತವಾದ ಕ್ರಮ ಇದಲ್ಲವೆಂದು, ಕಳೆದ ಒಂದೂವರೆ ವರ್ಷದಿಂದ …

ಪತ್ನಿಯನ್ನು ವಿದೇಶಕ್ಕೆ ಕಳುಹಿಸಿ ಹಿಂತಿರುಗುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು

ತೃಶೂರು: ದುಬಾಯಿಯಿಂದ ರಜೆಯಲ್ಲಿ ಊರಿಗೆ ತಲುಪಿದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವೆಳಿಯನ್ನೂರು ವಟ್ಟಪ್ಪುಳಕ್ಕಾವ್ ನಿವಾಸಿ ಅರುಣ್ ಗೋಪಿ ಮೃತಪಟ್ಟ ಯುವಕ. ಪತ್ನಿಯನ್ನು ವಿದೇಶಕ್ಕೆ ಕಳುಹಿಸಿದ ಬಳಿಕ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಅರುಣ್ ಗೋಪಿಯ ಬೈಕ್ ನಿಲ್ಲಿಸಿದ್ದ ಮಿನಿ ಲಾರಿಯ ಹಿಂದುಗಡೆಗೆ ಢಿಕ್ಕಿಯಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಕಾರ್ಯಾಗಾರ

ಕುಂಬ್ಡಾಜೆ: ಬಿಜೆಪಿ ಕುಂಬ್ಡಾಜೆ ಪಂ. ಸಮಿತಿ ನೇತೃತ್ವದಲ್ಲಿ ಪಕ್ಷದ ಮುಖಂಡರ ಕಾರ್ಯಾಗಾರ ಜರಗಿದ್ದು, ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾ ಟಿಸಿದರು. ಕುಂಬ್ಡಾಜೆ ಪಂಚಾಯತ್‌ನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಕಾರ್ಯಕರ್ತರು ವಾರ್ಡ್ ಮಟ್ಟದಲ್ಲಿ ಸಕ್ರಿಯರಾಗಿ ಮನೆ ಸಂಪರ್ಕ ನಡೆಸಿ ಮುಂದಿನ ಚುನಾವಣೆಗೆ ಮುಂಚಿತ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊ ಳ್ಳಲು ಬಾಕಿ ಇರುವವರನ್ನು ಸೇರಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ …

ಮಜಿಬೈಲ್‌ನಲ್ಲಿ ತೋಡಿನ ಕಟ್ಟ ಒಡೆದು ಅಪಾರ ನಾಶನಷ್ಟ: ಸ್ಥಳೀಯರಿಂದ ಪುನರ್ ನಿರ್ಮಾಣ; ನಷ್ಟ ಪರಿಹಾರಕ್ಕೆ ಆಗ್ರಹ

ಮಂಜೇಶ್ವರ: ಮೀಂಜ ಪಂಚಾ ಯತ್‌ನ ಮಜಿಬೈಲು ಪ್ರದೇಶದಲ್ಲಿ ವ್ಯಾಪಕ ಮಳೆಗೆ ತೋಡಿನ ಕಟ್ಟ ಒಡೆದು ಪ್ರವಾಹೋಪಾದಿಯಲ್ಲಿ ನೀರು ಹರಿದ ಹಿನ್ನೆಲೆಯಲ್ಲಿ ಅಪಾರ ನಾಶನಷ್ಟದ ಜೊತೆಗೆ ಹಲವಾರು ವಾಹನಗಳು ಕೂಡಾ ನೀರಿಗೆ ಕೊಚ್ಚಿ ಹೋಗಿದೆ.  ಸುಮಾರು ೭೫ ಹೆಕ್ಟೆರ್ ಭತ್ತ ಕೃಷಿಗೆ ನೀರು ಹರಿದು ನಾಶವಾಗಿದ್ದು, ಈ ಪ್ರದೇಶದ ೧೫೦ರಷ್ಟು ಕುಟುಂಬಗಳು ಸಂಚರಿಸುತ್ತಿದ್ದ ದಾರಿ ಕೂಡಾ ನೀರುಪಾಲಾಗಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ತೋಡಿಗೆ ಕಟ್ಟ ಕಟ್ಟಿ ನೀರ ಹರಿವನ್ನು ತಡೆಯಲು ಸ್ಥಳೀಯರು ಮುಂದಾಗಿದ್ದು, ಈಗಾಗಲೇ ಎರಡೂವರೆ ಲಕ್ಷ …

ಡಿಸಿಸಿ ಮಾಜಿ ಅಧ್ಯಕ್ಷ ವೆಳ್ತಂಬು ಸಂಸ್ಮರಣೆ

ಪೈವಳಿಕೆ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ವೆಳ್ತಂಬು ಅವರ ಸಂಸ್ಮರಣೆ ದಿನವನ್ನು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ಪುಷ್ಪಾರ್ಚನೆಯ ಬಳಿಕ ಸಂಸ್ಮರಣಾ ಸಭೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್ ಉದ್ಘಾಟಿಸಿದರು. ರಾಘವೇಂದ್ರ ಭಟ್, ಗಂಗಾಧರ ನಾಯ್ಕ್, ಎಡ್ವರ್ಡ್ ಡಿ ಸೋಜ, ಮಹಮ್ಮದ್, ನೌಶಾದ್ ಪಟ್ಲ ಉಪಸ್ಥಿತರಿದ್ದರು. ಶಾಜಿ ಎನ್.ಸಿ. ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

ಬಿಕೆಎಂಯು ರಾಷ್ಟ್ರೀಯ ಆಂದೋಲನ: ಕೇಂದ್ರ ಸರಕಾರಿ ಕಚೇರಿಗಳಿಗೆ ಮಾರ್ಚ್, ಧರಣಿ

ಕಾಸರಗೋಡು: ಕೇಂದ್ರ ಸರಕಾರದ ಜನದ್ರೋಹ ನೀತಿ ವಿರುದ್ಧ, ಕೃಷಿ ಕಾರ್ಮಿ ಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಬಿಕೆಎಂಯು ದೇಶವ್ಯಾಪಕವಾಗಿ ಪ್ರತಿಭಟನಾ ದಿನಾಚರಣೆ ನಡೆಸಿದೆ. ಇದರಂಗವಾಗಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕೇಂದ್ರ ಸರಕಾರಿ ಕಚೇರಿಗಳಿಗೆ ಮಾರ್ಚ್, ಧರಣಿ ನಡೆಸಲಾಯಿತು. ಕೃಷಿ ಕಾರ್ಮಿಕರಿಗೆ ಸಮಗ್ರವಾದ ರಾಷ್ಟ್ರೀಯ ಕಾನೂನು ರೂಪಿಸಬೇಕು, ದೇಶದಲ್ಲಿ ಲಭ್ಯವಾದ ಹೆಚ್ಚುವರಿ ಭೂಮಿಯನ್ನು, ಸರಕಾರಿ ಭೂಮಿಯನ್ನು ಭೂರಹಿತರಿಗೆ ವಿತರಿಸಬೇಕು, ಖಾಸಗಿ ವಲಯದಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ, ಒಬಿಸಿ ವಿಭಾಗಗಳಿಗೆ ಮೀಸಲಾತಿ ಏರ್ಪಡಿಸಬೇಕು, ಸಾರ್ವಜನಿಕ ಸಮೀಕ್ಷೆಯ ಜೊತೆಗೆ …

ಪಾತೂರು ಸಾರ್ವಜನಿಕ ಶೌಚಾಲಯ ಉದ್ಘಾಟನೆ

ವರ್ಕಾಡಿ: ಪಂಚಾಯತ್‌ನ 2024-2025 ನೇ ವಾರ್ಷಿಕ ಯೋ ಜನೆಯಲ್ಲಿ ಒಳಪಡಿಸಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪಾತೂರು ಜಂಕ್ಷನ್ ಸಾರ್ವಜನಿಕ ಶೌಚಾಲಯ ವನ್ನು ಪಾತೂರು ವಾರ್ಡ್ ಪ್ರತಿನಿಧಿ ಅಬ್ದುಲ್ ಮಜೀದ್ ಬಿ.ಎ ಉದ್ಘಾಟಿ ಸಿದರು. ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ, ಆಶಾ ಕಾರ್ಯಕರ್ತೆ ಶಶಿಕಲಾ, ಹಸಿರು ಕ್ರಿಯಾ ಸಮಿತಿ ಸದಸ್ಯೆ ಮಾಲತಿ, ಎ.ಡಿ.ಎಸ್ ಅಧ್ಯಕ್ಷೆ ಮೀನಾಕ್ಷಿ, ವಾರ್ಡ್ ಶುಚಿತ್ವ ಸಮಿತಿ ಸದಸ್ಯರಾದ ಅಬ್ದುಲ್ ಕರೀಂ, ಅಬ್ದುಲ್ಲ ಬಹ್ರೃನ್, ಸವಾದ್ ಬದಿಮಲೆ, ಹನೀಫ್ ಬದಿಮಲೆ, ಮಮತಾ, ಕುಟುಂಬಶ್ರೀ ಸದಸ್ಯೆಯರು, …