ನಾಪತ್ತೆಯಾದ ಐಟಿಐ ವಿದ್ಯಾರ್ಥಿ ಕಾಡಿನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಇಲ್ಲಿನ ಪರಂಬಿಕುಳ ಎಂಬಲ್ಲಿಂದ 2 ದಿನಗಳ ಹಿಂದೆ ನಾಪತ್ತೆ ಯಾದ ಐಟಿಐ ವಿದ್ಯಾರ್ಥಿ ಕಾಡಿ ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಎರ್ತ್ ಡ್ಯಾಂ ಉನ್ನತಿ ಎಂಬಲ್ಲಿನ ಮುರು ಗಪ್ಪನ್- ಸುಗಂಧಿ ದಂಪತಿಯ ಪುತ್ರ ಎಂ. ಅಶ್ವಿನ್ (21) ಮೃತ ವಿದ್ಯಾರ್ಥಿ. ಕಳೆದ ಮಂಗಳವಾರ ಮಧ್ಯಾಹ್ನ ಬಳಿಕ ಅಶ್ವಿನ್ ನಾಪತ್ತೆಯಾಗಿದ್ದನು. ಮನೆ ಯಿಂದ 3 ಕಿಲೋ ಮೀಟರ್ ಅಂತರ ದಲ್ಲಿರುವ ಟೈಗರ್ ಹಾಲ್‌ನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿ ಮರಳಿದ ಅಶ್ವಿನ್  ಬಳಿಕ ನಾಪತ್ತೆಯಾಗಿದ್ದನೆನ್ನ ಲಾಗಿದೆ. …

ಮದ್ಯದಮಲಿನಲ್ಲಿ ಹೊಡೆದಾಟ: ಚದುರಿಸಲೆತ್ನಿಸಿದ ಪೊಲೀಸರ ಮೇಲೆ ಹಲ್ಲೆ ; ಇಬ್ಬರ ಬಂಧನ

ಸೀತಾಂಗೋಳಿ: ಮದ್ಯದ ಮಲಿನಲ್ಲಿ ಇಬ್ಬರು ವ್ಯಕ್ತಿಗಳು  ಮದ್ಯದಂಗಡಿ ಮುಂದೆ ಹೊಡೆದಾಡಿಕೊಂಡಿದ್ದು, ಈ ವೇಳೆ ಅವರನ್ನು ಚದುರಿಸಲು ಯತ್ನಿಸಿದ ಪೊಲೀಸರ ಮೇಲೆ ಆ ಇಬ್ಬರು ಹಲ್ಲೆಗೈದ ಘಟನೆ ನಿನ್ನೆ ಸಂಜೆ ಸೀತಾಂಗೋಳಿಯಲ್ಲಿ ನಡೆದಿದೆ. ಈ ಸಂಬಂಧ  ಸೂರಂಬೈಲು ನಿವಾಸಿ ಋತಿಕ್ ಎಸ್ (25) ಹಾಗೂ ಬೇಳ ಪೆರಿಯಡ್ಕದ ಹರೀಶ ಪಾಟಾಳಿ (43) ಎಂಬಿವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ಸಂಜೆ  ಈ ಇಬ್ಬರು  ಸೀತಾಂಗೋಳಿಯ ಬಿವರೇಜಸ್‌ನ ಮದ್ಯದಂಗಡಿ ಮುಂದೆ ಮದ್ಯದಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆನ್ನಲಾಗಿದೆ. ಈ ವಿಷಯ ತಿಳಿದು ಅಲ್ಲಿಗೆ …

ಕೊರಿಯರ್ ಮೂಲಕ ತಲುಪಿದ ಗಾಂಜಾ ಮಿಠಾಯಿ ಪಡೆಯಲು ಬಂದ ವಿದ್ಯಾರ್ಥಿ ಸೆರೆ

ಕಾಸರಗೋಡು:ಕೊರಿಯರ್ ಪಾರ್ಸೆಲ್ ಮೂಲಕ ಬಂದ ಗಾಂಜಾ ಮಿಠಾಯಿಯನ್ನು ಕೊರಿಯರ್ ಸಂಸ್ಥೆಯಿಂದ ಪಡೆಯಲು ಬಂದ ವಿದ್ಯಾರ್ಥಿಯನ್ನು ಅಬಕಾರಿ ತಂಡ ಬಂಧಿಸಿದೆ. ಕಾಞಂಗಾಡ್ ಸೌತ್  ತೆಕ್ಕೇ ವಳಪ್ಪಿನ ದಿಲ್‌ಜಿತ್ (19) ಬಂಧಿತ ವಿದ್ಯಾರ್ಥಿ. ಕೊರಿಯರ್ ಮೂಲಕ  ಬಂದ ಎರಡು ಪಾರ್ಸೆಲ್‌ಗಳನ್ನು ಆತ ಪಡೆಯಲು ಬಂದಾಗ ಅಬಕಾರಿ ತಂಡ ವಶಕ್ಕೆ ಆ ಎರಡು ಪಾರ್ಸೆಲ್ ಗಳನ್ನು ವಶಕ್ಕೆ ತೆಗೆದು ಪರಿಶೀಲಿಸಿ ದಾಗ ಅದರಲ್ಲಿ 448 ಗ್ರಾಂ ಗಾಂಜಾ ಮಿಠಾಯಿ ಪತ್ತೆಯಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.  ಹೊಸದುರ್ಗ ವೆಳ್ಳಿಕ್ಕೋತ್ತ್‌ನಲ್ಲಿರುವ ಕೊರಿಯರ್ ಸಂಸ್ಥೆಗೆ ಈ ಪಾರ್ಸೆಲ್ …

ಪೊಲೀಸರನ್ನು ಅವಮಾನಿಸಿ ರೀಲ್ಸ್: 9 ಮಂದಿ ಸೆರೆ

ಕುಂಬಳೆ: ಪೊಲೀಸರನ್ನು ಅವಮಾನಿಸುವ ರೀತಿಯಲ್ಲಿ ರೀಲ್ಸ್ ಚಿತ್ರೀಕರಿಸಿದ ೯ ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಅವರಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.  ಕುಂಬಳೆ ಬದ್ರಿಯಾನಗರ ನಿವಾಸಿಗಳಾದ ಅಬೂಬಕರ್ ಸಿದ್ದಿಕ್ (37), ಅಬ್ದುಲ್ ರೌಫ್ ಎಂ (34), ಮೊಹಮ್ಮದ್ ರಿಯಾಸ್ (27), ಶುಹೈಬ್ ಎಂ.ಬಿ (28), ಮೊಹಮ್ಮದ್ ಮುಸಾಮಿಲ್ ಎಸ್ (33), ಮೊಹಮ್ಮದ್ ಫಾಯೀಸ್ ಎಂ.ಎ (21), ಮೊಯ್ದೀನ್ ಕುಂಞಿ (35), ಮೊಹಮ್ಮದ್ ಮಶೂಕ್ (19), ಮೊಯ್ದೀನ್ ಜುನೈದ್ (31) ಎಂಬಿವರು ಬಂಧಿತ ಆರೋಪಿಗ ಳಾಗಿದ್ದಾರೆ. ಇವರು ಇತ್ತೀಚೆಗೆ …

ಕೋಟ್ಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕುಸಿದು ಮಹಿಳೆ ಸಾವನ್ನಪ್ಪಿದ ಘಟನೆ: ವೈಫಲ್ಯಕ್ಕೆ ಸರಿಯಾದ ಸ್ಪಷ್ಟೀಕರಣನೀಡಲು ಸಾಧ್ಯವಾಗದ ಸರಕಾರ

ಕೋಟ್ಟಯಂ: ಕೋಟ್ಟಯಂ ವೈದ್ಯ ಕೀಯ ಕಾಲೇಜಿನ ಮೂರು ಅಂತಸ್ತಿನ ಹಳೆ ಕಟ್ಟಡ ನಿನ್ನೆ ಕುಸಿದುಬಿದ್ದು ಮಹಿಳೆಯೋರ್ವೆ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಅದಕ್ಕೆ ಸರಿಯಾದ ಸ್ಪಷ್ಟೀಕರಣ ನೀಡಲು ಸಾಧ್ಯವಾಗದ ಸ್ಥಿತಿ ಆರೋಗ್ಯ ಇಲಾಖೆ ಮತ್ತು ರಾಜ್ಯಸರಕಾರಕ್ಕೆ ಉಂಟಾಗಿದೆ.  ಈ ಘಟನೆಗೆ ಸಂಬಂಧಿಸಿ ಹಲವು ಸಚಿವರು ಹಲವು ರೀತಿಯ ಸ್ಪಷ್ಟೀಕರಣ ವನ್ನು  ನೀಡಿ ಆ ಮೂಲಕ ಸರಕಾರದ ವತಿಯಿಂದ ಉಂಟಾದ ವೈಫಲ್ಯಕ್ಕೆ  ತೇಪೆಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಈ ವೈಫಲ್ಯದ ನಿಜವಾದ ಕಾರ ಣದ ಬಗ್ಗೆ ಯಾವುದೇ …

ಗಾಂಜಾ, ಮಾದಕದ್ರವ್ಯ ಕೈವಶವಿರಿಸಿದ ಯುವಕನ ಸೆರೆ

ಉಪ್ಪಳ: ಮಂಗಲ್ಪಾಡಿಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ವಿಷ್ಣುಪ್ರಕಾಶ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 10 ಗ್ರಾಂ ಗಾಂಜಾ ಮತ್ತು 0.21 ಗ್ರಾಂ ಮೆಥಾಫಿಟಮಿನ್ ಕೈವಶವಿರಿಸಿ ಕೊಂಡ ಆರೋಪದಂತೆ ಯುವಕನೋರ್ವನನ್ನು ಬಂಧಿಸಿದೆ. ಮಂಗಲ್ಪಾಡಿ ಪತ್ವಾಡಿ ಮಜಲ್ ನಿವಾಸಿ ಶೇಖ್ ಸುಬ್ಬಾನ್ ಅಹಮ್ಮದ್ (26) ಬಂಧಿತನಾದ ಯುವಕ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ  ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಗ್ರೇಡ್ ಪ್ರಿವೆಂಟಿವ್ ಆಫೀಸರ್ ನೌಶಾದ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸೋನು  …

523 ಗ್ರಾಂ ಗಾಂಜಾ ಸಹಿತ ಇಬ್ಬರಸೆರೆ

ಕಾಸರಗೋಡು: ಕಾಞಂ ಗಾಡ್‌ನಲ್ಲಿ  ಪೊಲೀಸರು ನಡೆಸಿದ    ಕಾರ್ಯಾಚರಣೆಯಲ್ಲಿ   523.96 ಗ್ರಾಂ ಗಾಂಜಾ ವನ್ನು ವಶಪಡಿಸಲಾಗಿದೆ.  ಮಾವುಂಗಾಲ್ ಕಲ್ಯಾಣ್ ರೋಡ್‌ನ ಪಿ. ಶ್ರೀಕಾಂತ್, ಎಂ. ಅಶ್ವಿನ್ ಎಂಬವರನ್ನು ಹೊಸ ದುರ್ಗ ಪೊಲೀಸರು  ಸೆರೆಹಿಡಿ ದಿದ್ದಾರೆ.   50 ಪ್ಲಾಸ್ಟಿಕ್ ಕವರ್ ಗಳಲ್ಲಾಗಿ ಕೊಂಡೊಯ್ಯುತ್ತಿದ್ದ ಗಾಂಜಾವನ್ನು ಬಂಧಿತರ ಕೈಯಿಂದ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಜ್ಯೂನಿಯರ್ ಎಸ್‌ಐ  ಪಿ.ವಿ. ವರುಣ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಎಂ. ನಿಶಾದ್, ಚಾಲಕ ಶಬ್ಜು ಎಂಬಿವರಿದ್ದರು.

ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧಿಕಾರಿಯಾಗಿ ಸವಿತಾ ಪಿ. ನೇಮಕ

ಕಾಸರಗೋಡು: ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧಿಕಾರಿಯಾಗಿ ಸವಿತಾ ಪಿ ಅವರನ್ನು ನೇಮಿಸಲಾಗಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಾಪಿಕೆಯಾಗಿ, ಶಿರಿಯ ಹಾಗೂ ಕಾಸರಗೋಡು ಸರಕಾರಿ ಹೆಣ್ಮಕ್ಕಳ ಶಾಲೆಯಲ್ಲಿ ಮುಖ್ಯೋಪಾ ಧ್ಯಾಯರಾಗಿ ಇವರು ಸೇವೆ ಸಲ್ಲಿಸಿದ್ದಾರೆ.  ಕಾಸರಗೋಡು ಬಿಇಎಂ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿಯಾದ ಇವರು ಮನ್ನಿ ಪ್ಪಾಡಿಯ ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಜಕುಮಾರ್ ಮಧೂರು ಅವರ ಪತ್ನಿಯಾಗಿದ್ದಾರೆ. ಹಲವು ವರ್ಷಗಳ ಬಳಿಕ ಕಾಸರಗೋಡು  ವಿದ್ಯಾಭ್ಯಾಸ ಜಿಲ್ಲಾಧಿಕಾರಿಯಾಗಿ ಮಹಿಳೆ ಯೊಬ್ಬರು ನೇಮಕಗೊಂಡಿದ್ದಾರೆ.

ವೃದ್ಧ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ವೃದ್ಧನೋರ್ವ  ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಡ್ಲಮೊಗರು ಕತ್ತರಿಕೋಡಿ ನಿವಾಸಿ ತಂಬಾನ್ (73) ಮೃತಪಟ್ಟ ವ್ಯಕ್ತಿ.  ಇವರ ಮೃತದೇಹ ನಿನ್ನೆ ಅಪರಾಹ್ನ ಮನೆಯಿಂದ ಅಲ್ಪ ದೂರ ಬೇರೊಬ್ಬ ವ್ಯಕ್ತಿಯ ಆವರಣರಹಿತ ಬಾವಿಯಲ್ಲಿ ಪತ್ತೆಯಾಗಿದೆ. ನೀರಿನ ಮೇಲೆ ಮೃತದೇಹ ತೇಲುತ್ತಿರುವುದನ್ನು ಕಂಡ ಮನೆಯವರು ನೀಡಿದ ಮಾಹಿತಿ ಯಂತೆ ಉಪ್ಪಳ ಅಗ್ನಿಶಾಮಕದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿದೆ. ಬಳಿಕ ಮಂಜೇಶ್ವರ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನ ರಲ್ ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ.  ತಂಬಾನ್  …

ರಾಜ್ಯದಲ್ಲಿ ಮತ್ತೆ ನಿಫಾ ಸೋಂಕು: ಪಾಲಕ್ಕಾಡ್‌ನ ಯುವತಿ ಆಸ್ಪತ್ರೆಯಲ್ಲಿ

ಪಾಲಕ್ಕಾಡ್: ರಾಜ್ಯದಲ್ಲಿ ಮತ್ತೆ ನಿಫಾ ದೃಢೀಕರಿಸಲಾಗಿದೆ. ಪಾಲಕ್ಕಾಡ್‌ನ ಮಣ್ಣಾರ್‌ಕಾಡ್ ನಾಟ್ಟುಕಲ್ ನಿವಾಸಿಯಾದ 38ರ ಹರೆಯದ ಯುವತಿಗೆ ನಿಫಾ ಸೋಂಕು ಕಂಡುಬಂದಿದೆ. ಯುವತಿಯನ್ನು ಪೆರಿಂದಲ್‌ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ತಪಾಸಣೆಗಾಗಿ ಸ್ಯಾಂಪಲ್ ಪುಣೆಯ ವೈರೋಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಯುವತಿಗೆ ರೋಗ ಸೋಂಕು ಎಲ್ಲಿಂದ ತಗಲಿದೆ ಎಂದು ತಿಳಿದು ಬಂದಿಲ್ಲ. ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಯೆಂದೂ ಹೇಳಲಾಗುತ್ತಿದೆ. ಇದೇ ವೇಳೆ ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಮಲಪ್ಪುರಂ ಮಂಕಡ ನಿವಾಸಿಯಾದ 17ರ ಹರೆಯದ ಬಾಲಕಿಗೆ ನಿಫಾ …