ಮೊಬೈಲ್ ಫೋನ್ ಲಪಟಾವಣೆ: ಆರೋಪಿ ಸೆರೆ

ಕಾಸರಗೋಡು: ಮೊಬೈಲ್ ಫೋನ್ ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮುಟ್ಟತ್ತೋಡಿ ಪಡುವಡ್ಕ ನಿವಾಸಿ ಅಸರುದ್ದೀನ್ ಎನ್.ಎ. (35) ಬಂಧಿತ ಆರೋಪಿ. ಈತನ ವಿರುದ್ಧ ಮುಳಿಯಾರು ಬಾಲಡ್ಕ ನಿವಾಸಿ ಮುಹಮ್ಮದ್ ನಿಶಾದ್ ಎಂಬವರು ನೀಡಿದ ದೂರಿನ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂನ್ 24ರಂದು ಪಡುವಡ್ಕ ಬಳಿ ತಾನು ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ ವೇಳೆ ತನ್ನ ಕೈಯಲ್ಲಿದ್ದ 1,06,000 ರೂ. ಬೆಲೆಯ ಐ-ಫೋನನ್ನು ಆರೋಪಿ ಕಸಿದು ಪರಾರಿಯಾಗಿದ್ದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ನಿಶಾದ್ ಆರೋಪಿಸಿದ್ದಾರೆ.

ಮೂಕ ವ್ಯಕ್ತಿ ನಾಪತ್ತೆ

ಕಾಸರಗೋಡು: ಮನೆಯಿಂದ ಹೊರಕ್ಕೆ ಹೋದ ಮೂಕನಾಗಿರುವ ವ್ಯಕ್ತಿ ನಾಪತ್ತೆಯಾದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ. ತೆಕ್ಕಿಲ್ ತೆಕ್ಕೆಮೂಲೆ ನಿವಾಸಿ ರಾಮನ್ (54) ನಾಪತ್ತೆಯಾದ ವ್ಯಕ್ತಿ. ಇವರು ಮಾತನಾಡಲು ಸಾಧ್ಯವಾಗದ ವ್ಯಕ್ತಿಯಾಗಿದ್ದಾರೆ. ಜೂನ್ ೨೬ರಂದು ಮನೆಯಿಂದ ಹೊರಹೋದ ಅವರು ಬಳಿಕ ಹಿಂತಿರುಗಿಲ್ಲವೆಂದು ಸಹೋದರ ಈಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇವರು ಪತ್ತೆಯಾದಲ್ಲಿ 9497970103 ಎಂಬ ನಂಬ್ರಕ್ಕೆ ತಿಳಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

ಜನರಲ್ ಆಸ್ಪತ್ರೆಯ ಕಟ್ಟಡ ಅಪಾಯಭೀತಿಯಲ್ಲಿ: ಜಿಲ್ಲಾ ಟಿ.ಬಿ ಕೇಂದ್ರ ಉಪಯೋಗಶೂನ್ಯವೆಂದು ಘೋಷಿಸಿದ ಕಟ್ಟಡದಲ್ಲಿ

ಕಾಸರಗೋಡು: ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೂರಂತಸ್ತಿನ ಕಟ್ಟಡ ಕುಸಿದುಬಿದ್ದು ಮಹಿಳೆ ಮೃತಪಟ್ಟ ಘಟನೆಗೆ ಸಮಾನವಾದ ರೀತಿಯಲ್ಲಿ ಕಾಸರ ಗೋಡಿನಲ್ಲೂ ಸರಕಾರಿ ಆಸ್ಪತ್ರೆ ಯ ಕಟ್ಟಡವೊಂದು  ಅಪಾಯಭೀತಿಯೊಡ್ಡುತ್ತಿದೆ. ಜನರಲ್ ಆಸ್ಪತ್ರೆ ಆವರಣದೊಳಗೆ ಜಿಲ್ಲಾ ಟಿಬಿ ಕೇಂದ್ರ  ಕಾರ್ಯಾಚರಿಸುವ ಕಟ್ಟಡ ಶೋಚನೀಯ ಸ್ಥಿತಿಯಲ್ಲಿದ್ದು, ಅಪಾಯಭೀತಿ ಸೃಷ್ಟಿಸುತ್ತಿದೆ.  ಈ ಕೇಂದ್ರದ ಕಟ್ಟಡವನ್ನು ಒಂದು ವರ್ಷ ಹಿಂದೆ ಮುರಿದು ತೆರವುಗೊಳಿಸಲಾ ಗಿದೆ. ಅನಂತರ  ಕೇಂದ್ರ ಉಪಯೋಗ ಶೂನ್ಯವೆಂದು ಅಧಿಕಾರಿಗಳೇ ಘೋಷಿ ಸಿದ ಕಟ್ಟಡದಲ್ಲಿ ಕಾರ್ಯಾಚರಿಸು ತ್ತಿದೆ. ಕಾಂಕ್ರೀಟ್‌ನ ಮೇಲ್ಛಾವಣಿಗೆ ಪೂರ್ಣವಾಗಿ ಪ್ಲಾಸ್ಟಿಕ್ …

ಕೇರಳಕ್ಕೆ ಎಂಡಿಎಂಎ ತಲುಪಿಸುವ ತಂಡದ ಕೊಂಡಿ ಬಿಹಾರ ನಿವಾಸಿ ಮಹಿಳೆ ಸೆರೆ

ತೃಶೂರು: ರಾಜ್ಯಕ್ಕೆ ಎಂಡಿಎಂಎ ತಲುಪಿಸುವ ತಂಡದ ಕೊಂಡಿಯಾದ ಬಿಹಾರ ನಿವಾಸಿಯನ್ನು ತೃಶೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಸೀಮಾ ಸಿನ್ಹರನ್ನು ಹರ್ಯಾಣದ ಗುರುಗ್ರಾಮ್‌ನ ಆಫ್ರಿಕನ್ ಕಾಲನಿಯಿಂದ ಪೊಲೀಸರು ಇತ್ತೀಚೆಗೆ ಸೆರೆ ಹಿಡಿದಿದ್ದಾರೆ. ಎಂಡಿಎಂಎ ರಖಂ ವ್ಯಾಪಾರಿಯಾದ ಈಕೆ 10 ದಿನದೊಳಗೆ 1 ಕೋಟಿ ರೂ.ಗಳ ಮಾದಕ ಪದಾರ್ಥ ಮಾರಾಟ ನಡೆಸಿರುವುದಾಗಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕಳೆದ ಫೆಬ್ರವರಿಯಲ್ಲಿ 47 ಗ್ರಾಂ ಎಂಡಿಎಂಎ ಸಹಿತ ತೃಶೂರು ರೈಲ್ವೇ ನಿಲ್ದಾಣದಲ್ಲಿ ಸೆರೆಯಾದ ಫಸಲ್ ನಿಝಿಲ್‌ನ ಹಿನ್ನೆಲೆ ತನಿಖೆ ನಡೆಸುತ್ತಾ ಮುಂದುವರಿದಾಗ ಸೀಮಾಳ ಬಗ್ಗೆ …

ಮೂಸೋಡಿ-ಮಣಿಮುಂಡ ರಸ್ತೆ ಶೋಚನೀಯಗೊಂಡು ಸಂಚಾರಕ್ಕೆ ಅಡಚಣೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಮೂಸೋಡಿ ಶಾಲಾ ಬಳಿಯಿಂದ ಮಣಿಮುಂಡ ಸಮುದ್ರ ತೀರ ರಸ್ತೆ ಹದಗೆಟ್ಟು ನೀರು ತುಂಬಿಕೊAಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದಕ್ಕೆ ಅಲ್ಲಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊAಡು ಹೊಳೆಯ ರೀತಿಯಲ್ಲಿ ಕಂಡುಬರುತ್ತಿದೆ. ಪರಿಸರದಲ್ಲಿ ತ್ಯಾಜ್ಯ ಸಂಗ್ರಹಗೊAಡು ಆತಂಕ ಉಂಟಾಗಿದೆ. ಮೀನು ಕಾರ್ಮಿಕರ ಸಹಿತ ನೂರಾರು ಮನೆಗಳು ಹೊಂದಿರುವ ಈ ಪ್ರದೇಶದಲ್ಲಿ ರಸ್ತೆ ಶೋಚನೀಯಾವಸ್ಥೆಯಿಂದ ದ್ವಿಚಕ್ರ, ತ್ರಿಚಕ್ರ …

ಹೃದಯಾಘಾತದಿಂದ ನಿಧನ

ಬೋವಿಕ್ಕಾನ: ಇರಿಯಣ್ಣಿ ಸಮೀಪ ಬೇಪು ಶ್ರೀನಿಲಯದ ಅಣಿಲೆ ಗೋಪಾಲಕೃಷ್ಣ ಭಟ್ (80) ಹೃದಯಾಘಾತ ದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಕೃಷಿಕರಾಗಿದ್ದರು. ಮೃತರು ಪತ್ನಿ ಪರಮೇಶ್ವರಿ ಭಟ್, ಮಕ್ಕಳಾದ  ಎ. ಶಾಸ್ತ ಕುಮಾರ್ (ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ), ಎ. ಪ್ರೇಮ (ಮುಳ್ಳೇರಿಯ ಎಯುಪಿಎಸ್ ಅಧ್ಯಾ ಪಿಕೆ), ಅಳಿಯ ಡಾ| ಸೂರ್ಯ ನಾರಾ ಯಣ ಭಟ್ ( ನಿವೃತ್ತ ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಕ), ಸೊಸೆ ಪ್ರಸೀಜ (ಪೇರಾಲ್ ಜಿಜೆಬಿಎಸ್ ಅಧ್ಯಾಪಿಕೆ), …

ಆರೋಗ್ಯ ವಲಯದ ಅನಾಸ್ಥೆ ವಿರುದ್ಧ ಮುಸ್ಲಿಂ ಯೂತ್ ಲೀಗ್ ಡಿಎಂಒ ಕಚೇರಿ ಮಾರ್ಚ್: ಪೊಲೀಸರಿಂದ ಜಲಫಿರಂಗಿ

ಕಾಸರಗೋಡು: ಎಡರಂಗ ಸರ ಕಾರದ ಲೋಪದಿಂದಾಗಿ ಆರೋಗ್ಯ ವಲಯದಲ್ಲಿ ಮುಂದುವರಿಯುತ್ತಿರುವ ಅನಾಸ್ಥೆಯನ್ನು ಪ್ರತಿಭಟಿಸಿ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಿತಿ ಆಹ್ವಾನ ಪ್ರಕಾರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಞಂಗಾಡ್ ಡಿಎಂಒ ಕಚೇರಿಗೆ ಮಾರ್ಚ್ ನಡೆಸಲಾಯಿತು. ಮಾರ್ಚನ್ನು ಜಿಲ್ಲಾ ಆಸ್ಪತ್ರೆ ಪರಿಸರದಲ್ಲಿ ಪೊಲೀಸರು ತಡೆದರು. ಬಳಿಕ ಪೊಲೀಸ್ ಹಾಗೂ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಗಿ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಮಾರ್ಚನ್ನು ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಫಾತಿಮ ತಹ್ಲಿಯಾ ಪ್ರಧಾನ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ …

ಎಡರಂಗ ಸರಕಾರದ ಅಂತ್ಯ ಸನ್ನಿಹಿತ- ಕಾಂಗ್ರೆಸ್

ಉಪ್ಪಳ: ಕೇರಳದ ಎಡರಂಗ ಸರಕಾರ ಜನರ ಮೇಲೆ ದ್ರೋಹವೆಸಗುತ್ತಿದ್ದು ಕಂಡಕಂಡಲ್ಲಿ ದಂಡ ವಸೂಲಿ ಮಾಡಿ ಖಜಾನೆ ತುಂಬಿಸುವುದನ್ನು ಅಲಂಕಾರ ಎಂದು ಭಾವಿಸಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಆರೋಪಿಸಿದರು. ಸ್ವಸ್ಥ ಆಡಳಿತ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡ ಎಡರಂಗ ಸರಕಾರದ ಅಂತ್ಯ ಸನ್ನಿಹಿತವಾಗಿದೆ ಎಂದು ಅವರು ನುಡಿದರು. ಮಂಗಲ್ಪಾಡಿ ಮಂಡಲದ ಬಂದ್ಯೋಡು ವಾರ್ಡ್ ಕಾಂಗ್ರೆಸ್ ಸಮಿತಿ ರೂಪೀಕರಣ ಸಭೆ ಹಾಗೂ ಮಹಾತ್ಮಾಗಾಂಧಿ ಕುಟುಂಬ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. …

ಜಿಲ್ಲಾ ಮೊಗೇರ ಸಂಘದಿಂದ ಪ್ರತಿಭಾ ಪುರಸ್ಕಾರ

ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಜರಗಿತು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕಿಶನ್‌ರಾಜ್ ಕೆ ಕೆ, ಧನ್ಯಶ್ರೀ ಎ.ಕೆ., ಹಾಗೂ +2ವಿನಲ್ಲಿ ಅತ್ಯದಿsಕ ಅಂಕ ಗಳಿಸಿದ ಜ್ಯೋತಿಕ ಮಜೀರ್‌ಪಳ್ಳಕಟ್ಟೆ ಇವರನ್ನು ಅಭಿನಂದಿ ಸಲಾಯಿತು. ಬದಿಯಡ್ಕ ಪಂ. ಸದಸ್ಯ ಶಂಕರ ಡಿ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಮದರು ಮಹಾಮಾತೆ ಅಧ್ಯಕ್ಷ ವಸಂತ ಅಜಕೊಡು, ಅಂಬೇಡ್ಕರ್ …

ಓಣಂಗೆ ಹೆಚ್ಚುವರಿ ಅಕ್ಕಿ ನ್ಯಾಯಬೆಲೆಗೆ ನೀಡುವುದಾಗಿ ಸಚಿವ ಜಿ.ಆರ್. ಅನಿಲ್

ತಿರುವನಂತಪುರ: ಕೇಂದ್ರ ಸರಕಾರದ ಸಹಾಯ ಲಭಿಸದಿದ್ದರೂ ಓಣಂ ಹಬ್ಬದ ಸಂದರ್ಭದಲ್ಲಿ ಸಪ್ಲೈ ಕೋ ಮಾರಾಟದಂಗಡಿಗಳಲ್ಲೂ ರೇಶನ್ ಅಂಗಡಿಗಳ ಮೂಲಕ ಹೆಚ್ಚುವರಿಯಾಗಿ ಅಕ್ಕಿಯನ್ನು ನ್ಯಾಯಬೆಲೆಗೆ ವಿತರಿಸುವು ದಾಗಿ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ಸಪ್ಲೈ ಕೋ ಮೂಲಕ ರೇಶನ್ ಕಾರ್ಡ್ ಮಾಲಕರಿಗೆ 29 ರೂ.ಗೆ ನೀಡುವ 2 ಕಿಲೋ ಗ್ರಾಂ ಬೆಳ್ತಿಗೆ ಅಕ್ಕಿ ಹಾಗೂ 33 ರೂ.ಗೆ ನೀಡುವ 8 ಕಿಲೋ ಗ್ರಾಂ ಶಬರಿ ಅಕ್ಕಿ ಮತ್ತೂ ಬೆಲೆ ಕಡಿತಗೊ ಳಿಸಿ ನೀಡಲಾಗುವುದು. ತೆಂಕಣ ಜಿಲ್ಲೆಗಳಲ್ಲಿ ಕುಚ್ಚಿಲಕ್ಕಿ ಹಾಗೂ …