ರಾಜ್ಯದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಹಾಲಿನ ಬೆಲೆ ಹೆಚ್ಚಿಸಲು ಸಾಧ್ಯತೆ ಇದೆ ಎಂದು ಮೃಗಸಂರಕ್ಷಣೆ ಕ್ಷೀರೋತ್ಪಾದಕ ಸಚಿವೆ ಚಿಂಜುರಾಣಿ ತಿಳಿಸಿದ್ದಾರೆ. ಮಿಲ್ಮಾ ಹಾಗೂ ಕೃಷಿಕರ ಮಧ್ಯೆ ನಡೆಯುವ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಲೀಟರ್ ಒಂದಕ್ಕೆ 10 ರೂ.ನಂತೆ ಹೆಚ್ಚಿಸಬೇಕೆಂದು ಮಿಲ್ಮಾ ತಿರುವನಂತಪುರ ವಲಯ ಘಟಕ ಆಡಳಿತ ಸಮಿತಿ ಸಭೆ ಶಿಫಾರಸ್ಸು ಮಾಡಿತ್ತು. ಎರ್ನಾಕುಳಂ, ಮಲಬಾರ್ ಘಟಕಗಳು ಬೆಲೆ ಹೆಚ್ಚಿಸಬೇಕೆಂಬ ಬೇಡಿಕೆಯೊಡ್ಡಿತ್ತು. ಉತ್ಪಾದನೆ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ  ಹಾಲಿನ ದರ ಹೆಚ್ಚಿಸಲು ಘಟಕಗಳು …

ಬಿಇಎಂ ಶಾಲೆಗೆ ನೂತನ ಬಸ್ ಕೊಡುಗೆ

ಕಾಸರಗೋಡು: ನಗರದ ಬಿಇಎಂ ಹೈಸ್ಕೂಲ್‌ಗೆ ಮೆನೇಜ್‌ಮೆಂಟ್, ಅಧ್ಯಾಪಕ,. ಸಿಬ್ಬಂದಿ ವರ್ಗದವರು ಕೊಡುಗೆಯಾಗಿ ನೀಡಿದ ಶಾಲಾ ಬಸ್‌ನ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಮೆನೇಜರ್ ರೆವರೆಂಡ್ ಫಾ| ಸುನಿಲ್ ಪುದಿಯಾಟಿಲ್ ಉದ್ಘಾಟಿಸಿ ದರು. ಪ್ರಾಂಶುಪಾಲ ರಾಜೇಶ್ಚಂದ್ರ, ಮುಖ್ಯೋಪಾಧ್ಯಾಯ ಗಣೇಶ್ ಕೆ, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೊಳ್ಳ, ಪ್ರೇಮ್‌ಜಿತ್, ಪಿಟಿಎ ಸದಸ್ಯರು, ಯಶವಂತ ಮಾಸ್ತರ್, ಬಾಲ ಕೃಷ್ಣ, ಸಂಧ್ಯಾಕುಮಾರಿ, ಸಿಬ್ಬಂದಿವರ್ಗ, ಮಕ್ಕಳು ಉಪಸ್ಥಿತರಿದ್ದರು.

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಕುಂಬಳೆ: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ನಿನ್ನೆ ನಡೆಯಿತು. ವ್ಯವಸ್ಥಾಪಕ ಎಂ. ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಉದ್ಘಾಟಿಸಿದರು. ಪಂಚಾಯತ್ ಸದಸ್ಯೆ ಪುಷ್ಪಲತಾ ಶೆಟ್ಟಿ ಪ್ರತಿಭಾ ಪುರಸ್ಕಾರ ವಿತರಿಸಿದರು. ಎಲ್‌ಎಸ್‌ಎಸ್, ಯುಎಸ್‌ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್. ಶಿವರಾಮ ಭಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಮಾತೃಸಂಘದ ಅಧ್ಯಕ್ಷೆ ಸುಧಾ ಟೀಚರ್, ಪಿಟಿಎ ಉಪಾಧ್ಯಕ್ಷ …