ಖಾಸಗಿ ಬಸ್ ಮುಷ್ಕರ ಪೂರ್ಣ: ಸಂಕಷ್ಟಕ್ಕೀಡಾದ ಪ್ರಯಾಣಿಕರು

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಖಾಸಗಿ ಬಸ್ ಮಾಲಕರು  ತಮ್ಮ ಬಸ್ ಸೇವೆಗಳನ್ನು ನಿಲುಗಡೆಗೊಳಿಸಿ  ಇಂದು ಬೆಳಿಗ್ಗೆ ಆರಂಭಿಸಿರುವ ಸೂಚನಾ ಮುಷ್ಕರ ಪೂರ್ಣಗೊಂ ಡಿದೆ. ಇದರಂಗವಾಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾಗಬೇಕಾಗಿ ಬಂದಿದೆ. ಬಸ್ ಮುಷ್ಕರ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ. ಪ್ರಯಾಣಕ್ಕಾಗಿ ಖಾಸಗಿ ಬಸ್‌ಗಳನ್ನು ಮಾತ್ರವೇ ಆಶ್ರಯಿಸುತ್ತಿರುವ ಪ್ರದೇಶಗಳ ಜನರು ತೀವ್ರ ಸಂಕಷ್ಟಕ್ಕೊಳಗಾದರು. ಖಾಸಗಿ ಬಸ್‌ಗಳ ಮುಷ್ಕರದ ಹಿನ್ನೆಲೆಯಲ್ಲಿ  ಕೆಎಸ್‌ಆರ್‌ಟಿಸಿ  ಇಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಏಳು ಹೆಚ್ಚುವರಿ ಬಸ್ ಸೇವೆ ಏರ್ಪಡಿಸಿದೆ. ಕೆಎಸ್‌ಆರ್‌ಟಿಸಿಯ ಎಲ್ಲಾ …

ಅಡೂರಿನಲ್ಲಿ ಯುವಕನಿಗೆ ಹಲ್ಲೆ, ಮನೆಗೆ ಕಲ್ಲೆಸೆತ ಪ್ರಕರಣದ ಆರೋಪಿ 30 ವರ್ಷಗಳ ಬಳಿಕ ಸೆರೆ

ಮುಳ್ಳೇರಿಯ: ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಆತನ ಮನೆಗೆ ಕಲ್ಲೆಸೆದು ಹೆಂಚು ನಾಶ ಗೊಳಿಸಲಾಯಿತೆಂಬ ಪ್ರಕರಣದ ಆರೋಪಿಯನ್ನು 30 ವರ್ಷಗಳ ಬಳಿಕ ಬಂಧಿಸಲಾಗಿದೆ. ಅಡೂರು ಮೂಲ ಹೌಸ್‌ನ ಎಂ.ಇ. ಬಾತಿಶ (48) ಎಂಬಾತನನ್ನು ಆದೂರು ಎಸ್‌ಐ ವಿನೋದ್ ಕುಮಾರ್, ಎಎಸ್‌ಐ ಸತ್ಯಪ್ರಕಾಶ್ ಜಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಘವನ್, ಸಿಪಿಒ ಹರೀಶ್ ಎಂಬಿವರು ಸೇರಿ ಸೆರೆಹಿಡಿದಿದ್ದಾರೆ. 1995 ಎಪ್ರಿಲ್ 21ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಅಂದು ಆರೋಪಿಯಾದ ಬಾತಿಶನಿಗೆ ಪ್ರಾಯ 18 ವರ್ಷ ವಾಗಿತ್ತು. …

ರಾಷ್ಟ್ರೀಯ ಮುಷ್ಕರ ಇಂದು ರಾತ್ರಿಯಿಂದ

ಕಾಸರಗೋಡು: ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಡೆಸುವ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ಇಂದು ರಾತ್ರಿ 12 ಗಂಟೆಗೆ ಆರಂಭಗೊಂಡು ನಾಳೆ ರಾತ್ರಿ 12 ಗಂಟೆ ತನಕ ಮುಂದುವರಿಯಲಿದೆ. ಕಾರ್ಮಿಕರ ಹತ್ತು ಸಂಘಟನೆಗಳು ಮತ್ತು  ಅವುಗಳ ಸಹವರ್ತಕ ವೇದಿಕೆಯ ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ರಾಷ್ಟ್ರವಿರೋಧಿ ಮತ್ತು ಕಾರ್ಪರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆಯೆಂದು ಆರೋಪಿಸಿ ಇದನ್ನು ವಿರೋಧಿಸಿ ಸಂಯುಕ್ತ ರಾಷ್ಟ್ರೀಯ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. …

58ರ ಮಹಿಳೆಯ ಮೇಲೆ ಅತ್ಯಾಚಾರ: ಸಹೋದರಿಯ ಪತಿ ವಿರುದ್ಧ ಕೇಸು

ಕಾಸರಗೋಡು: ೫೮ರ ಹರೆಯದ ಮಹಿಳೆ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ ಆರೋಪದಂತೆ ಪೊಲೀ ಸರು ಕೇಸು ದಾಖಲಿಸಿಕೊಂ ಡಿದ್ದಾರೆ. ದೂರುದಾತೆಯ ತಂಗಿಯ ಪತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಮಹಿಳೆ ದೂರು ನೀಡಿದ್ದಾಳೆ. 2022 ಎಪ್ರಿಲ್ 15ರಿಂದ 2023 ಅಕ್ಟೋಬರ್ವರೆಗೆ ಹಲವು ಬಾರಿ ಕಿರುಕುಳ ನೀಡಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಭಯದಿಂದ ಘಟನೆ ಕುರಿತು ಇದುವರೆಗೆ ಯಾರಲ್ಲೂ ತಿಳಿಸಿರ ಲಿಲ್ಲವೆನ್ನಲಾಗಿದೆ. ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದುವರಿಯುತ್ತಿರುವ ಅಬಕಾರಿ ಕಾರ್ಯಾಚರಣೆ: ಗಾಂಜಾ, ಅಕ್ರಮ ಮದ್ಯ ವಶ: ವಲಸೆ ಕಾರ್ಮಿಕ ಸೇರಿ ಮೂವರ ಸೆರೆ

ಕಾಸರಗೋಡು: ಅಬಕಾರಿ ತಂಡ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದ್ದು ಇದರಂತೆ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ ಗಾಂಜಾ ಮತ್ತು ಅಕ್ರಮ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂ ಧಿಸಿ ವಲಸೆ ಕಾರ್ಮಿಕ ಸೇರದಂತೆ ಮೂವರನ್ನು ಸೆರೆಹಿಡಿಯಲಾಗಿದೆ. ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ  ಎಕ್ಸೈಸ್ ಇನ್‌ಸ್ಪೆಕ್ಟರ್ ಆದರ್ಶ್.ಜಿ  ನೇತೃತ್ವದ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ಸೊಂದರಲ್ಲಿ 10 ಗ್ರಾಂ ಗಾಂಜಾ ಕೈವಶವಿರಿಸಿಕೊಂಡ ಆರೋಪದಂತೆ ವಲಸೆ ಕಾರ್ಮಿಕ ಉತ್ತರ ಪ್ರದೇಶ ಗೊಂಡಾ ಜಿಲ್ಲೆಯ ಡೌರಿಯಾ …

ಪೂವಡ್ಕ- ಅಡ್ಕತ್ತೊಟ್ಟಿ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಹಲವು ದಿನಗಳಿಂದ ಬೀಡು ಬಿಟ್ಟಿರುವುದಾಗಿ ಸ್ಥಳೀಯರು

ಮುಳ್ಳೇರಿಯ: ಇಲ್ಲಿಗೆ ಸಮೀಪದ ಪೂವಡ್ಕದಿಂದ ಅಡ್ಕತ್ತೊಟ್ಟಿಗೆ ತೆರಳುವ ರಸ್ತೆಯಲ್ಲಿ ಕಾಡುಕೋಣಗಳು ಗುಂಪಾಗಿ ವಿಹರಿಸುತ್ತಿರುವುದು ಕಂಡು ಬಂದಿದೆ. ೮ ಕಾಡುಕೋಣಗಳು ನಿನ್ನೆ ಸಂಜೆ ಇಲ್ಲಿ ರಸ್ತೆಗಿಳಿದಿವೆ. ಈ ಸಮಯದಲ್ಲಿ ಈ ದಾರಿಯಾಗಿ ತೆರಳುತ್ತಿದ್ದವರು ಇದರ ವೀಡಿಯೋ ಚಿತ್ರೀಕರಿಸಿದ್ದಾರೆ. ಜನರನ್ನು ಹಾಗೂ ವಾಹನಗಳನ್ನು ಕಂಡರೂ ರಸ್ತೆಯಿಂದ ಕದಲದೇ ಅತ್ತಿತ್ತ ನೋಡುತ್ತಾ ಕಾಡುಕೋಣಗಳು ನಿಂತಿವೆ ಎಂದಿದ್ದಾರೆ. ಬಳಿಕ ಕಾಡಿನೊಳಗೆ ತೆರಳಿವೆ ಎಂದು ಈ ದಾರಿಯಾಗಿ ಸಂಚರಿಸುತ್ತಿದ್ದವರು ತಿಳಿಸಿದ್ದು, ಕಳೆದ ಕೆಲವು ದಿನಗಳಿಂದ ಇಲ್ಲಿ ಗುಂಪಾಗಿ ಕಾಡುಕೋಣಗಳು ಕಂಡು ಬರುತ್ತಿವೆ ಎಂದು ಸ್ಥಳೀಯರು …

ಎಲ್‌ಐಸಿ ಏಜೆಂಟ್ ಹೃದಯಾಘಾತದಿಂದ ನಿಧನ

ಮಂಜೇಶ್ವರ: ಎಲ್‌ಐಸಿ ಏಜೆಂಟ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಚೌಕಿ ಸಮೃದ್ಧಿ ನಿಲಯದ ಸೋಮಶೇಖರ ಬಿ (43) ಮೃತಪಟ್ಟ ವ್ಯಕ್ತಿ. ಇವರಿಗೆ ನಿನ್ನೆ ರಾತ್ರಿ ಮನೆಯಲ್ಲಿ ಹೃದಯಾಘಾತ ವುಂಟಾಗಿತ್ತು. ಕೂಡಲೇ ಹೊಸಂ ಗಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ದಿವಂಗತರಾದ ದೇರ ಮೂಲ್ಯ-ರಾಧಾ ದಂಪತಿಯ ಪುತ್ರನಾದ ಮೃತರು ಪತ್ನಿ ಚಂದ್ರಿಕಾ, ಮಕ್ಕಳಾದ ಸಮರ್ಥ್, ಸಮೃದ್ಧಿ, ಸಹೋದರ-ಸಹೋದರಿಯರಾದ ಭೋಜರಾಜ್, ರಮಣಿ, ಶೋಭಾ, ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ನಾರಾಯಣ ಈ ಹಿಂದೆ …

ಕಾಸರಗೋಡು ನಗರಸಭೆ ವಾರ್ಡ್ ವಿಭಜನೆಯಲ್ಲಿ ವಂಚನೆ: ವಾರ್ಡ್ ವಿಭಜನೆ ವಿಜ್ಞಾಪನೆಗೆ ಹೈಕೋರ್ಟ್ ತಡೆ

ಕಾಸರಗೋಡು: ಕಾಸರಗೋಡು ನಗರಸಭೆ ವಾರ್ಡ್ ವಿಭಜನೆ ವಿಜ್ಞಾಪನೆಯನ್ನು ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ವಾರ್ಡ್ ವಿಭಜನೆಯಲ್ಲಿ ಅವೈಜ್ಞಾನಿಕ ಹಾಗೂ ವಂಚನೆ ನಡೆದಿದೆ ಎಂದು ಮುಸ್ಲಿಂ ಲೀಗ್ ಮುನ್ಸಿಪಲ್ ಕಮಿಟಿ ಅಧ್ಯಕ್ಷ ಕೆ.ಎಂ. ಬಶೀರ್ ನೀಡಿದ ದೂರಿನಂತೆ ನ್ಯಾಯಾಲಯ ಈ ನಿರ್ದೇಶ ನೀಡಿದೆ. ತೆರುವತ್ ವಾರ್ಡ್‌ನ ಸ್ವಾಭಾವಿಕ ಗಡಿಯಾದ ಹಾಶಿಂ ಸ್ಟ್ರೀಟ್ ರಸ್ತೆಯ ಎರಡು ಭಾಗವನ್ನು  ಆ ವಾರ್ಡ್‌ನಲ್ಲಿ ಸೇರಿಸಲಾಗಿದೆ ಎಂದೂ, ಹಲವು ವಾರ್ಡ್‌ಗಳಲ್ಲೂ ಸ್ವಾಭಾವಿಕ ಗಡಿ ಇಲ್ಲದಾಗಿದೆ ಎಂದೂ, ಫಿಶ್ ಮಾರ್ಕೆಟ್ ವಾರ್ಡ್‌ನ ಒಂದು ಫ್ಲೋಟ್ ಸಮುಚ್ಚಯ …

ರಾಷ್ಟ್ರೀಯ ಹೆದ್ದಾರಿಯಲ್ಲಿ ದನಗಳ ಹಿಂಡು: ವಾಹನ ಚಾಲಕರಲ್ಲಿ ಭೀತಿ

ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ  ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯ ಭೀತಿ ಎದುರಿಸುವಂತಾಗಿದೆ. ದಿನವೂ ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ದನ ಸಾಕುವವರು ದನಗಳನ್ನು ಮೇಯಲು ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿ ಇವು ನೇರವಾಗಿ ಹೆದ್ದಾರಿಗೆ ಬರುತ್ತಿವೆ. ರಸ್ತೆ ಬದಿಯಲ್ಲಿ ಇನ್ನೂ ದೀಪ ಸ್ಥಾಪಿಸದೇ ಇರುವ ಹಿನ್ನೆಲೆಯಲ್ಲಿ ರಾತ್ರಿ …

ಜನರಲ್ ಆಸ್ಪತ್ರೆಗೆ ಮಾರ್ಚ್: 85 ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಆರೋಗ್ಯ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ  ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆಸಿದ ಮಾರ್ಚ್‌ಗೆ ಸಂಬಂಧಿಸಿ 85 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಸಂಘಟಿತರಾಗಿ ಬಂದು ರಸ್ತೆ ತಡೆ, ಸಾರಿಗೆ ಅಡಚಣೆ, ಸಾರ್ವಜನಿಕ ಸಂಚಾರಕ್ಕೆ ತಡೆಯೊಡ್ಡುವಿಕೆ ಇತ್ಯಾದಿ ಆರೋಪದಂತೆ ಕೇಸು ದಾಖಲಿ ಸಲಾಗಿದೆ. ಪಿ.ಆರ್. ಸುನಿಲ್, ಲೋಕೇಶ್ ನೋಂಡಾ, ಗುರುಪ್ರ ಸಾದ್, ಸಜೀವನ್, ಮನುಲಾಲ್ ಮೇಲತ್ತ್, ಸಾಗರ್ ಚಾತಮತ್ತ್, ಶ್ರೀಧರನ್, ಪ್ರದೀಪ್ ಕುಟ್ಟಕಣಿ, ಪ್ರಮೀಳಾ ಮಜಲ್, ರಮೇಶನ್, …