ಶೇಣಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಶೇಣಿ ಶಾಲೆ ಸಮೀಪ ಯುವಕನನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಾಡೂರು ಸಂತಡ್ಕದ ದಿ| ರಾಮನಾಯ್ಕ- ಸೀತ ದಂಪತಿ ಪುತ್ರ ಐತ್ತಪ್ಪ (46) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಶೇಣಿ ಶಾಲೆಯ ಸಮೀಪ ಕಾಲನಿಯಲ್ಲಿ ಐತ್ತಪ್ಪರ ಮೃತದೇಹ ಪತ್ತೆಯಾಗಿರುವುದಾಗಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಜುಲೈ 11ರಂದು ರಾತ್ರಿ 10 ಗಂಟೆ ಹಾಗೂ 13ರಂದು ಸಂಜೆಯ ಮಧ್ಯೆ ಇವರ ಸಾವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹದ ಮಹಜರು ನಡೆಸಿದ ಬಳಿಕ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಅಪಘಾತ : ಕಾರು ಭದ್ರತಾಗೋಡೆಗೆ ಬಡಿದು ನಾಲ್ಕು ಮಂದಿಗೆ ಗಾಯ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು ಭದ್ರತಾ ಗೋಡೆಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸಹಿತ ನಾಲ್ಕು ಮಂದಿ ಗಾಯ ಗೊಂಡಿದ್ದಾರೆ. ಈ ಪೈಕಿ ಒಬ್ಬ ಸ್ಥಿತಿ ಗಂಭೀರವಾಗಿದ್ದು, ಇದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇತರ ಮೂವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಣ್ಣೂರು ಇರಿಕ್ಕೂರ್ ನಿವಾಸಿಗಳಾದ ಅಬ್ದುಲ್ ನಾಸರ್, ನುಸ್ರತ್, ಅಯ್ಯೂಬ್, ಜಾಫರ್ ಎಂಬಿವರು ಗಾಯಗೊಂಡವರಾಗಿದ್ದಾರೆ. ಈ ಪೈಕಿ ಅಬ್ದಲ್ ನಾಸರ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಇತರ ಮೂವರನ್ನು ಕುಂಬಳೆ ಜಿಲ್ಲಾ …

ನಾಯಿ ಅಡ್ಡ ಓಡಿ ಸಂಭವಿಸಿದ ಅಪಘಾತ: ಆಟೋಚಾಲಕನ ನಿಧನದಿಂದ ನಾಡಿನಲ್ಲಿ ಶೋಕಸಾಗರ

ಪೆರ್ಲ: ರಸ್ತೆಗೆ ಅಡ್ಡವಾಗಿ ನಾಯಿ ಓಡಿದ ಪರಿಣಾಮ ಆಟೋರಿಕ್ಷಾ ಮಗುಚಿ ಚಾಲಕ ಮೃತಪಟ್ಟ ಘಟನೆ ಪೆರ್ಲ ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ ಸೃಷ್ಟಿಸಿದೆ. ಶನಿವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಪೆರ್ಲ ಬಳಿಯ ಪಡ್ರೆ ಬದಿಯಾರು ನಿವಾಸಿ ಬಿ. ಪ್ರವೀಣ (31) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪ್ರವೀಣರ ಆಟೋರಿಕ್ಷಾ ಉಕ್ಕಿ ನಡ್ಕ ಮೆಡಿಕಲ್ ಕಾಲೇಜು ಮುಂಭಾಗಕ್ಕೆ ತಲುಪಿದಾಗ ನಾಯಿಯೊಂದು ದಿಢೀರ್ ಅಡ್ಡ ಬಂದಿತ್ತು. ಈ ವೇಳೆ ಆಟೋರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಪ್ರವೀಣ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು …

ಜ್ವರ ತಗಲಿ ಸಾವನ್ನಪ್ಪಿದ ಮಹಿಳೆಯಲ್ಲಿ ವೈರಸ್ ಸೋಂಕು ಪತ್ತೆ: ರಾಜ್ಯದಲ್ಲಿ ಮತ್ತೆ ನಿಫಾ ಭೀತಿ ; 6 ಜಿಲ್ಲೆಗಳಲ್ಲಿ ಜಾಗ್ರತಾ ನಿರ್ದೇಶ

ತಿರುವನಂತಪುರ: ರಾಜ್ಯದಲ್ಲಿ ಮತ್ತೆ ನಿಫಾ ವೈರಸ್ ಪತ್ತೆಯಾಗಿದ್ದು, ಅದರಿಂದಾಗಿ ಪಾಲಕ್ಕಾಡ್, ಮಲ ಪ್ಪುರಂ, ಕಲ್ಲಿಕೋಟೆ, ಕಣ್ಣೂರು, ವಯನಾಡು ಮತ್ತು ತೃಶೂರು ಜಿಲ್ಲೆಗಳಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ಯಿಂದ ಇರುವಂತೆ ಜಾಗ್ರತಾ ಮಾರ್ಗ ಸೂಚಿ ಹೊರಡಿಸಿದೆ. ನಿಫಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವರದಿ ಮಾಡುವಂತೆಯೂ ಎಲ್ಲಾ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನಿರ್ದೇಶ ನೀಡಿದೆ. ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್‌ಕ್ಕಾಡ್ ಕೂಮಾರಂ ಪುತ್ತೂರು ಚಂಗಲೀರಿ ನಿವಾಸಿಯಾದ 57ರ ಮಹಿಳೆ ಜ್ವರದಿಂದ ಬಳಲುತ್ತಿದ್ದರು. ಅವರನ್ನು ವಾರದ ಹಿಂದೆ ಮಣ್ಣಾರ್‌ಕರಾಡ್ ಆಸ್ಪತ್ರೆಯಲ್ಲಿ …

ಯುವಕನನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣ : ಪ್ರಧಾನ ಆರೋಪಿ ಸೆರೆ

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿದ ಪ್ರಕರಣದ ಪ್ರಧಾನ ಆರೋಪಿಯನ್ನು ಮೇಲ್ಪ ರಂಬ ಪೊಲೀಸರು ಬಂಧಿಸಿದ್ದಾರೆ. ಚೆರುವತ್ತೂರು ರೈಲು ನಿಲ್ದಾಣ ಬಳಿ ನಿವಾಸಿ ಸುಹೈಲ್ (28) ಬಂಧಿತ ಆರೋಪಿ. ಕಳೆದ ಅಕ್ಟೋಬರ್ 25ರಂದು ಮಧ್ಯಾಹ್ನ ಕುನ್ನಾರಂ ಸೂಪರ್ ಮಾರ್ಕೆಟ್ ಬಳಿ ನಿಂತಿದ್ದ ಅರ್ಶಾದ್ (27) ಎಂಬವರನ್ನು ಬಲವಂತವಾಗಿ ಕಾರಿಗೇರಿಸಿ ಅಪ ಹರಿಸಿಕೊಂಡು ಹೋಗಿ ಮರುದಿನ ಅವರನ್ನು ವಯನಾಡಿನಲ್ಲಿ ಉಪೇ ಕ್ಷಿಸಿ ಅಪಹರಣಗಾರರು ತಪ್ಪಿಸಿಕೊಂ ಡಿದ್ದರು. ಬಂಧಿತ ಸುಹೈಲ್ ಈ ತಂಡದ ಪ್ರಧಾನ ಆರೋಪಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಾದಕಪದಾರ್ಥ ಮಾರಾಟ ಮಾಡಿದ ವ್ಯಸನ ಮುಕ್ತ ಕೇಂದ್ರದ ನೌಕರ ಸೆರೆ

ತೃಶೂರ್: ಮಾದಕವ್ಯಸನಿ ಗಳನ್ನು ಚಿಕಿತ್ಸೆ ನೀಡಿ ಅದರಿಂದ ಮುಕ್ತಗೊಳಿಸುವ  ಕೇಂದ್ರದ ನೌಕರ ಮಾದಕಪದಾರ್ಥ ಸಹಿತ ಪೊಲೀ ಸರ ವಶವಾಗಿದ್ದಾನೆ. ತೃಶೂರು ಕೊರಟ್ಟಿ ಚಿತ್ತಾರಿಕ್ಕಲ್ ನಿವಾಸಿ  ವಿವೇಕ್ ಶಿವದಾಸ್ ಸೆರೆಯಾದ ವ್ಯಕ್ತಿ. ಪೊಲೀಸ್ ಪಟ್ರೋಲಿಂಗ್ ಮಧ್ಯೆ 4.5 ಗ್ರಾಮ ಮೆಥಾಫೆಟಾ ಮಿನ್ ಸಹಿತ ಈತನನ್ನು ಸೆರೆಹಿಡಿ ಯಲಾಗಿದೆ. ಈತ ಕರುಕುಟ್ಟಿ ಎಂಬ ಲ್ಲಿನ ಖಾಸಗಿ ವ್ಯಸನಮುಕ್ತ ಕೇಂದ್ರದ ನೌಕರನಾಗಿದ್ದಾನೆ. ಸಂಸ್ಥೆಯ ಅಧಿಕಾರಿಗಳು ತಿಳಿಯದಂತೆ ಈತ ಇಲ್ಲಿಗೆ ತಲುಪುವ ಮಾದಕವ್ಯಸನಿ ಗಳಿಗೆ  ಮಾದಕ ಪದಾರ್ಥವನ್ನು ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. …

ವಿತರಣೆಗಾಗಿ ಮನೆ ಬಳಿ ದಾಸ್ತಾನು ಇರಿಸಲಾಗಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ಪತ್ತೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಿಗೆ ವಿತರಿಸಲೆಂದು ಮನೆ ಹಿಂದಿನ ಶೆಡ್‌ನಲ್ಲಿ ದಾಸ್ತಾನು ಇರಿಸಲಾಗಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ನಗರದ ಬೀರಂತಬೈಲಿನಲ್ಲಿ ವಾಸಿಸುತ್ತಿರುವ ಪಿ. ರಮಾನಂದ ಚೌದರಿ (35) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಮಾನಂದ ಚೌದರಿಯ ತಂದೆ  ಮುನ್ನಾ ಚೌದರಿ (56)ರನ್ನು ನಿನ್ನೆ ಬೆಳಿಗ್ಗೆ ನಗರದ ಹಳೇ ಬಸ್ ನಿಲ್ದಾಣ ಪರಿಸರದಿಂದ ೨೪೦ ಪ್ಯಾಕೆಟ್ ತಂಬಾಕು ಉತ್ಪನ್ನಗಳ ಸಹಿತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರು ಅವರನ್ನು …

ಕಾಂಗ್ರೆಸ್‌ನ ಹೋರಾಟ ಸಂಗಮ ಆರಂಭ: ಕೆಪಿಸಿಸಿ ಅಧ್ಯಕ್ಷರಿಂದ ಉದ್ಘಾಟನೆ

ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನದ್ರೋಹ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಅಂತಹ ನೀತಿಗಳನ್ನು ಪ್ರತಿಭಟಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಹೋರಾಟ ಸಂಗಮ ಕಾರ್ಯಕ್ರಮ ಆರಂಭಗೊಂಡಿತು. ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಶಾಸಕ ಸಣ್ಣಿ ಜೋಸೆಫ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.  ಕಾಸರಗೋಡು ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ವಹಿಸಿದರು. ಕಾಂಗ್ರೆಸ್‌ನ ರಾಜ್ಯ ಕಾರ್ಯನಿರ್ವಹಣಾಧ್ಯಕ್ಷ ಎ.ಪಿ. ಅನಿಲ್ ಕುಮಾರ್, ಯುಡಿಎಫ್ ರಾಜ್ಯ ಸಂಚಾಲಕ …

ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು: ಹೊಂಡ ಮುಚ್ಚುವ ಕೆಲಸ ಆರಂಭ

ಬದಿಯಡ್ಕ: ಹೊಂಡಗಳು ಸೃಷ್ಟಿಯಾಗಿ ಶೋಚನೀಯಾವಸ್ಥೆ ಯಲ್ಲಿರುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯಲ್ಲಿ ದುರಸ್ತಿಗೆ ಸರಕಾರ ಹಣ ಮಂಜೂರು ಮಾಡಿದೆ. ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಲು ೬ ಲಕ್ಷ ರೂಪಾಯಿ ಹಾಗೂ ಪುನರ್ ನಿರ್ಮಾಣಕ್ಕೆ ೩೫ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದೀಗ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿ ರುವ ಹೊಂಡಗಳನ್ನು ಶೀಘ್ರ ಮುಚ್ಚಲು ತೀರ್ಮಾನಿಸಲಾಗಿದೆ. ಮಳೆಗಾಲ ಕೊನೆಗೊಂಡ ಬಳಿಕ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿ ಆರಂಭಿಸಲಾ ಗುವುದು. ಇದರಂತೆ ರಸ್ತೆಯ ಹೊಂಡ ಮುಚ್ಚುವ ಕೆಲಸ ಇಂದು ಆರಂಭಗೊಂಡಿದೆ. ಚೆರ್ಕಳ-ಕಲ್ಲಡ್ಕ ರಾಜ್ಯ …

ಗಾಂಜಾ ಸಹಿತ ಓರ್ವ ಸೆರೆ

ಮಂಜೇಶ್ವರ: ಗಾಂಜಾ ಕೈವಶವಿರಿಸಿಕೊಂಡಿದ್ದ ಅನ್ಯರಾಜ್ಯ ಕಾರ್ಮಿಕನನ್ನು ಮಂಜೇಶ್ವರ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ನಿವಾಸಿಯೂ ಕಡಂಬಾರ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರಬೇಂದರ್ ಸಿಂಗ್ (25) ಎಂಬಾತ ಬಂಧಿತ ಆರೋಪಿ. ಈತನ ಕೈಯಿಂದ 12.49 ಗ್ರಾಂ ಗಾಂಜಾ ವಶಪಡಿಸಲಾಗಿದೆ. ನಿನ್ನೆ ಸಂಜೆ ಕಡಂಬಾರ್ ಒಳರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ರಬೇಂದರ್ ಸಿಂಗ್‌ನನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ.