ಫೈಬರ್ ದೋಣಿಗಳು ಢಿಕ್ಕಿ ಹೊಡೆದು ಓರ್ವ ಮೃತ್ಯು: ಹಲವರಿಗೆ ಗಾಯ

ಹೊಸದುರ್ಗ: ತೃಕರಿಪುರ ಕರಾವಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಫೈಬರ್ ದೋಣಿಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿ ದ್ದಾರೆ. ಹಲವರಿಗೆ ಗಾಯವುಂ ಟಾಗಿದೆ. ಕಾಞಂಗಾಡ್ ಪುಂಜಾವಿ ಕಡಪ್ಪುರ ನಿವಾಸಿ ಹರಿದಾಸನ್ (57) ಮೃತಪಟ್ಟವರು. ಗಾಯ ಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದು ಪೊಲೀಸರು ಹಾಗೂ ಕರಾವಳಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮೃತರು ಪತ್ನಿ ಸತ್ಯವತಿ, ಮಕ್ಕಳಾದ ಅರ್ಜುನ್, ಅರುಣ್, ಆದರ್ಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗಾಂಜಾ ಸಹಿತ ಓರ್ವ ಸೆರೆ

 ಮಂಜೇಶ್ವರ: ಗಾಂಜಾ ಕೈವಶವಿರಿಸಿಕೊಂಡ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕನ್ಯಾನ ಮಿತ್ತನಡ್ಕ ಕರೋಪಾಡಿಯ ಮೊಹಮ್ಮದ್ ಸಜಾಫ್ (28) ಎಂಬಾತನನ್ನು ಮಂಜೇಶ್ವರ ಎಸ್‌ಐ ರತೀಶ್ ಸೆರೆಹಿಡಿದಿದ್ದಾರೆ. ಆರೋಪಿಯ ಕೈಯಿಂದ 08.70 ಗ್ರಾಂ ಗಾಂಜಾ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಗುವೆದಪಡ್ಪು ಬಸ್ ತಂಗುದಾಣ ಬಳಿ ನಿಂತಿದ್ದ ಈತನ ಕೈಯಲ್ಲಿ ಗಾಂಜಾ ಪತ್ತೆಯಾಗಿತ್ತು.

ಪ್ಲಸ್ ವನ್ ವಿದ್ಯಾರ್ಥಿನಿಗೆ ಪ್ಲಸ್ ಟು ವಿದ್ಯಾರ್ಥಿನಿಯರಿಂದ ಹಲ್ಲೆ, ಬೆದರಿಕೆ: ಕೇಸು ದಾಖಲು

ಮಂಜೇಶ್ವರ: ಪ್ಲಸ್‌ವನ್ ವಿದ್ಯಾರ್ಥಿನಿಗೆ ಬಸ್ ಸ್ಟಾಪ್‌ನಲ್ಲಿ ಪ್ಲಸ್ ಟು ವಿದ್ಯಾರ್ಥಿನಿಯರು ಹಲ್ಲೆಗೈದ ಬಗ್ಗೆ ದೂರಲಾಗಿದೆ.  ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿಗೆ ಅದೇ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯರು ಮುಖಕ್ಕೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಇತ್ತೀಚೆಗೆ ಶಾಲೆ ಬಿಟ್ಟು ನಯಬಜಾರ್‌ನ ಬಸ್‌ಸ್ಟಾಪ್‌ಗೆ ತಲುಪಿದಾಗ ವಿದ್ಯಾರ್ಥಿನಿಯರು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ಗಾಯಗೊಂಡ ವಿದ್ಯಾರ್ಥಿನಿ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ ವಿದ್ಯಾರ್ಥಿನಿಯರು ಬೆದರಿಕೆಯೊಡ್ಡಿರುವುದಾಗಿಯೂ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಹುಟ್ಟೂರಿಗೆ ಬಂದು ಸೇರಿದ ಜನನಾಯಕ ವಿ.ಎಸ್. ಪಾರ್ಥಿವ ಶರೀರ

ಆಲಪ್ಪುಳ: ಅಗಲಿದ ಮಾಜಿ ಮುಖ್ಯಮಂತ್ರಿ, ಸಿಪಿಎಂನ ಹಿರಿಯ ನೇತಾರ ಹಾಗೂ ಜನನಾಯಕರೂ ಆಗಿರುವ  ವಿ.ಎಸ್. ಅಚ್ಯುತಾನಂದನ್‌ರ ಪಾರ್ಥಿವ ಶರೀರವನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಿರುವನಂತಪು ರದಿಂದ ಮೆರವಣಿಗೆ ಮೂಲಕ ಹುಟ್ಟೂರಾದ ಆಲಪ್ಪುಳಕ್ಕೆ ಇಂದು ಬೆಳಿಗ್ಗೆ 7.30ಕ್ಕೆ ತಲುಪಿಸಲಾಯಿತು. ಆಲಪ್ಪುಳ ಜಿಲ್ಲೆಯ ಕಾಯಂಕುಳಕ್ಕೆ  ಪಾರ್ಥಿವ ಶರೀರ ತಲುಪಿದಾಗ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ  ಜನಪ್ರವಾಹವೇ ರಸ್ತೆಯುದ್ದಕ್ಕೂ ಹರಿದುಬಂದು ಅಗಲಿದ ನಾಯಕನಿಗೆ ಮುಗಿಲುಮುಟ್ಟುವ ಘೋಷಣೆ ಮೊಳಗಿಸುತ್ತಾ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 9.30ಕ್ಕೆ ವಿ.ಎಸ್.ರ ಹುಟ್ಟೂರಾದ ಪುನ್ನಪ್ರಕ್ಕೆ ತಲುಪಿಸಲು …

ವಳಯಂ ಉಸ್ತಾದ್ ನಿಧನ

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಬಳಿಯ ಬತ್ತೇರಿಯಲ್ಲಿ ವಾಸಿಸುವ ಹಾಜಿ ಹಸೈನಾರ್ ಮುಸ್ಲಿಯಾರ್ ಯಾನೆ ವಳಯಂ ಉಸ್ತಾದ್ (54) ನಿಧನಹೊಂದಿದರು. ಇಂದು ಮುಂಜಾನೆ 1.30ರ ವೇಳೆ ಎದೆನೋವು ಕಾಣಿಸಿಕೊಂಡ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಕುಂಬಳೆ ಮುನೀರುಲ್ ಇಸ್ಲಾಂ ಮದ್ರಸಾದ ಅಧ್ಯಾಪಕನೂ, ನಾಟಿ ವೈದ್ಯನೂ ಆಗಿದ್ದರು. ಮೃತರು ಪತ್ನಿ ಸುಹರಾ, ಮಕ್ಕಳಾದ ಸಲ್ಮಾನ್ ವಾಫಿ, ಮೊಹಮ್ಮದ್ ಲಿಹಾವುದ್ದೀನ್, ಜಶ್ವಾನ್ ರಾಸಿ ಇಮಾಮಿ, ಮೊಯ್ನುದ್ದೀನ್ ಶಾಕಿರ್, ಖದೀಜತ್ ಕುಬ್ರ, ಆಯಿಶತ್ ಫಾಯಿಸ, ಬಲ್ಕೀಸತ್ ತಹ್‌ಸಿನ, ಸೈನಬತ್ …

ವಿ.ಎಸ್. ವಿರುದ್ಧ ಅವಹೇಳನ ಸಂದೇಶ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ರ ವಿರುದ್ಧ ವಾಟ್ಸಪ್ ನಲ್ಲಿ ಸ್ಟೇಟಸ್, ಸಂದೇಶ ಹಾಕಿದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ.   ಪಳ್ಳಿಕೆರೆ ತೊಟ್ಟಿ ನಿವಾಸಿ ಪೈಸಕ್ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ವಿ.ಎಸ್. ಅಚ್ಯುತಾನಂದನ್‌ರ ಫೊಟೋದ ಕೆಳಗೆ ಕೋಮುವಾದಿ ಎಂಬ ಅಡಿಬರಹದೊಂ ದಿಗೆ ಸ್ಟೇಟಸ್ ಹಾಕಲಾಗಿತ್ತು. ಇದರಿಂದ ಗಲಾಟೆ ಎಬ್ಬಿಸಲು ಆರೋಪಿ ಯತ್ನಿಸಿ ದ್ದಾನೆಂದು ಕೇಸು ದಾಖಲಿಸಲಾಗಿದೆ. ವಿದೇಶ ನಂಬ್ರದಲ್ಲಿರುವ ವಾಟ್ಸಪ್‌ನಲ್ಲಿ ಈತ ಸ್ಟೇಟಸ್ ಹಾಕಿದ್ದನು. ಸ್ಪೆಷಲ್ ಬ್ರಾಂಚ್‌ನ ವರದಿ ಹಿನ್ನೆಲೆಯಲ್ಲಿ …

ಮಾದಕದ್ರವ್ಯ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪ್ರಿವೆನ್ಶನ್ ಆಫ್ ಇಲ್ಲೀಗಲ್ ಟ್ರಾಫಿಕ್ ಆಫ್ ನರ್ಕೋಟಿಕ್ ಡ್ರಗ್ಸ್ (ಪಿಟ್ ಎನ್‌ಡಿಪಿಎಸ್) ಪ್ರಕಾರ ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್ ಬಂಧಿಸಿದ್ದಾರೆ. ಮುಟ್ಟತ್ತೋಡಿಗೆ ಸಮೀಪದ ಹಿದಾಯತ್‌ನಗರ ಚಟ್ಟುಂಗುಳಿ ನಿವಾಸಿ ಮೊಹಮ್ಮದ್ ಸಲೀಲ್ (40) ಬಂಧಿತ ಆರೋಪಿ. ಈತನ ವಿರುದ್ಧ ವಿದ್ಯಾನಗರ ಮತ್ತು ಬದಿಯಡ್ಕ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಟ್ ಎನ್‌ಡಿಪಿಎಸ್ ಪ್ರಕಾರ ಬಂಧಿಸಲಾಗುವ ಆರೋಪಿ ಗಳನ್ನು ಯಾವುದೇ ರೀತಿಯ ವಿಚಾರ ಣೆಯೂ ಇಲ್ಲದೆ …

ಕುಸಿದು ಬಿದ್ದ ನೂರಾರು ವರ್ಷಗಳ ಹಳೆಯ ಆಲದ ಮರ: ಕಾರಿಗೆ ಹಾನಿ

ಹೊಸದುರ್ಗ:  ಕಾಞಂಗಾಡ್ ಟಿ.ಬಿ ರಸ್ತೆ ಬದಿಯಲ್ಲಿ ನೂರಾರು ವರ್ಷ ಹಳೆಯದಾದ ಆಲದಮರ  ಕುಸಿದು ಬಿದ್ದಿದೆ. ದಾರಿಹೋಕರಿಗೆ ನೆರಳು, ಹಕ್ಕಿಗಳಿಗೆ ಆಶ್ರಯ ನೀಡುತ್ತಿದ್ದ ಈ ಮರ ಬುಡ ಸಮೇತ ಕುಸಿದು ಬಿದ್ದಿದೆ. ಇಂದು ಮುಂಜಾನೆ ಘಟನೆ ಸಂಭವಿಸಿದ ಕಾರಣ ಅಪಾಯ ಉಂಟಾಗಲಿಲ್ಲ. ಆದರೆ  ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರದ ರೆಂಬೆಗಳು ಬಿದ್ದು ಹಾನಿಯುಂಟಾಗಿದೆ. ಮುಂಜಾನೆ ಯಿಂದ ರಾತ್ರಿವರೆಗೆ ಬಹಳ ಜನಸಂದಣಿ ಹಾಗೂ ವಾಹನದಟ್ಟಣೆ ಇರುವಂತಹ ಬೇಕಲ ಇಂಟರ್‌ನೇ ಶನಲ್ ಹೋಟೆಲ್ ಮುಂಭಾಗದ ಲ್ಲಿದ್ದ ಮರವಾಗಿತ್ತು ಇದು.

ಪತಿಯನ್ನು ಕೊಲೆಗೈದು ಹೂತುಹಾಕಿದ ಯುವತಿ: ಆರೋಪಿಗಳಿಗಾಗಿ ಶೋಧ

ಮುಂಬೈ: ಪ್ರಿಯತಮನ ಸಹಾಯದಿಂದ ಪತಿಯನ್ನು ಕೊಲೆಗೈದು ಮನೆಯೊಳಗೆ ಹೂತುಹಾಕಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ  ನಡೆದಿದೆ. ವಿಜಯ್ ಚೌಹಾಣ್ ಎಂಬ ೩೫ರ ಹರೆಯದ ಪತಿಯನ್ನು 28ರ ಹರೆಯದ ಪತ್ನಿ ಕೋಮಲ್ ನೆರೆಮನೆಯ ನಿವಾಸಿ ಹಾಗೂ ಪ್ರಿಯತಮನಾದ ಮೋನು ಜೊತೆ ಸೇರಿ ಕೊಲೆಗೈದು ಮನೆಯೊಳಗೆ ದಫನ ನಡೆಸಿರುವುದು. ಅದರ ಬಳಿಕ ಕೋಮಲ್ ಹಾಗೂ ಪ್ರಿಯತಮ ಪರಾರಿಯಾಗಿದ್ದಾರೆ. ಮುಂಬೈಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ನಳಸೋಪಾರ ಈಸ್ಟ್ ಗಡ್ಗಪದದಲ್ಲಿ ವಿಜಯ್ ಹಾಗೂ ಕೋಮಲ್ ವಾಸಿಸುತ್ತಿದ್ದರು. ಎರಡು ವಾರಕ್ಕೂ ಹೆಚ್ಚಾಗಿ ವಿಜಯ್ …

ಕಾಪಾ ಕೇಸು: ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಿ ಸೆರೆ

ಕಾಸರಗೋಡು: ಕಾಪಾ ಕಾನೂನು ಪ್ರಕಾರ ಗಡಿಪಾರು ಮಾಡಿದ ಬಳಿಕ ಅದರ ನಿಬಂಧನೆಗಳನ್ನು ಉಲ್ಲಂಘಿಸಿ ಊರಿಗೆ ಬಂದ ಆರೋ ಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪಳ್ಳಿಕೆರೆ ತಾಯಲ್ ಮವ್ವಲ್ ಹದ್ದಾದ್‌ನಗರದ ಅಶ್ರಫ್ ಅಲಿಯಾಸ್ ಕತ್ತಿ ಅಶ್ರಫ್ (43) ಬಂಧಿತ ಆರೋಪಿ. ಈತ ಮಾದಕದ್ರವ್ಯ, ಹಲ್ಲೆ ಇತ್ಯಾದಿ ನಾಲ್ಕರಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಕಳೆದ ಡಿಸೆಂಬರ್‌ನಲ್ಲಿ ಕಾಪಾ ಕಾನೂನು ಹೇರಿ ಊರಿನಿಂದ ಗಡಿಪಾರು ಮಾಡಲಾಗಿತ್ತು. ಅದರ ನಿಬಂಧನೆಗಳನ್ನು ಉಲ್ಲಂಘಿಸಿ ಆತ ಊರಿಗೆ ಬಂದಿದ್ದನು. ಆ ಬಗ್ಗೆ …