ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಬದಿಯಡ್ಕ: ಬದಿಯಡ್ಕ ಎಕ್ಸೈಸ್ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿಷ್ಣು ಪಿ.ಆರ್.ರ ನೇತೃತ್ವದ ತಂಡ ಕಾಡಮನೆ ಎಂಬಲ್ಲಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ 3.78 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಡು ಕೇಸು ದಾಖಲಿಸಿಕೊಂಡಿದೆ.ಇದಕ್ಕೆ ಸಂಬಂಧಿಸಿ ಕಂಕಣ್ಣಾರ್ ಎಂಬಲ್ಲಿ ವಾಸಿಸುವವಿನಯ್ ಕುಮಾರ್ ಎನ್.ಪಿ. ಎಂಬಾತನನ್ನು ಬಂಧಿಸಲಾಗಿದೆ. ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಬಿಜೋಯ್ ಇ.ಕೆ., ಸಿಇಒಗಳಾದ ಶಾಲಿನಿ, ಲಿಜಿನ್ ಆರ್, ಟಿಪ್ಸನ್ ಟಿ.ಜಿ. ಮತ್ತು ಚಾಲಕ ಸಾಗರ್ ಎಂಬವರು …

ಕಾಡು ಹಂದಿ ಉಪಟಳ: ಜಿಲ್ಲೆಯಲ್ಲಿ 1071 ಮಂದಿಗೆ ಬಂದೂಕು ಲೈಸನ್ಸ್: ಗುಂಡಿಕ್ಕುವ ಎಂ. ಪ್ಯಾನಲ್‌ನಲ್ಲಿ ಹೆಸರು ನೋಂದಾಯಿಸಿದ್ದು 33 ಮಂದಿ ಮಾತ್ರ

ಕಾಸರಗೋಡು: ಉಪಟಳಕಾರಿ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆಯ ಅನುಮತಿ ಇದ್ದರೂ ಜಿಲ್ಲೆಯಲ್ಲಿ ಬಂದೂಕು ಲೈಸನ್ಸ್ ಹೊಂದಿರುವ ಹೆಚ್ಚಿನವರು ಅದಕ್ಕೆ ತಯಾರಾಗುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು1071 ಮಂದಿ ಬಂದೂಕು ಲೈಸನ್ಸ್ ಹೊಂದಿದ್ದಾರೆ. ಈ ಪೈಕಿ ಕೇವಲ 33 ಮಂದಿ ಮಾತ್ರವೇ ಅರಣ್ಯ ಇಲಾಖೆಯ ಎಂ. ಪ್ಯಾನಲ್‌ನಲ್ಲಿ ಹೆಸರು ನೋಂದಾ ಯಿಸಿದ್ದಾರೆ. ಜಿಲ್ಲಾಡಳಿತೆಯ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1071 ಮಂದಿ ಬಂದೂಕು ಲೈಸನ್ಸ್ ಹೊಂದಿದ್ದು, ಅದರಲ್ಲ್ಲಿ 946 ಮಂದಿ ತಮ್ಮ ಬಂದೂಕು ಲೈಸನ್ಸ್ ನವೀಕರಿಸಿದ್ದಾರೆ. ಬಾಕಿ ಉಳಿದವರ ಲೈಸನ್ಸ್ …

ಫಿಟ್ನೆಸ್ ಸರ್ಟಿಫಿಕೇಟ್ ಇರುವ ಶಾಲಾ ಕಟ್ಟಡ ಅಪಾಯ ಭೀತಿಯಲ್ಲಿ : ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಏಳು ತರಗತಿಗಳಿಂದ ಮಕ್ಕಳ ತೆರವು

ಕುಂಬಳೆ: ತೀವ್ರಗೊಂಡ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ ಏರ್ಪಡಿಸುವ ಅಂಗವಾಗಿ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ  ಹೆಂಚು ಹಾಸಿದ ಕಟ್ಟಡಗಳಿಂದ ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿ ಗಳು ತಾತ್ಕಾಲಿಕವಾಗಿ ತೆರವುಗೊಳಿಸಿದ್ದಾರೆ. ಏಳು ತರಗತಿ ಕೊಠಡಿಗಳಿರುವ ಕಟ್ಟಡಕ್ಕೆ ಹೆಂಚು ಹಾಸಲಾಗಿದೆ. ಈ ಕಟ್ಟಡದಲ್ಲಿ  ಭದ್ರತಾ ಸಮಸ್ಯೆ ಇರುವುದರಿಂದ  ಆ ತರಗತಿಗಳಿಂದ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಕಟ್ಟಡಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇದೆ. ಆದರೆ ಮಳೆ ಸುರಿಯುವ ವೇಳೆ ಕಟ್ಟಡ ಅಪಾ ಯಕ್ಕೀಡಾಗುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಆದ್ದರಿಂದ …

ಏಣಿಯರ್ಪು ಲೈಫ್ ಹೌಸ್ ವಿಲ್ಲಾದ ಸ್ಥಳ ಸ್ವಾಧೀನಪಡಿಸಲು ವ್ಯಕ್ತಿ ಯತ್ನ: ಪ್ರತಿಭಟಿಸಿ ಬೇಳ ವಿಲ್ಲೇಜ್‌ಗೆ 25ರಂದು ಕ್ರಿಯಾಸಮಿತಿಯಿಂದ ಮಾರ್ಚ್

ನೀರ್ಚಾಲು: ಏಣಿಯರ್ಪು ಲೈಫ್ ಹೌಸ್ ವಿಲ್ಲಾಕ್ಕಿರುವ ರಸ್ತೆ ಹಾಗೂ ಇಲ್ಲಿನ ಸ್ಥಳವನ್ನು ವ್ಯಕ್ತಿಯೋರ್ವ ವಶಪಡಿಸಲು ಯತ್ನಿಸುತ್ತಿದ್ದು, ಬಡವರಿಗೆ ಸರಕಾರ ನೀಡಿದ ಮನೆ ನಷ್ಟವಾಗುವ ಭೀತಿ ಇದೆ ಎಂದು ಆರೋಪಿಸಿ ವಿಲ್ಲಾದಲ್ಲಿ ವಾಸಿಸುವವರು ಕ್ರಿಯಾ ಸಮಿತಿ ರೂಪೀಕರಿಸಿ ಬೇಳ ವಿಲ್ಲೇಜ್ ಕಚೇರಿಗೆ ಮಾರ್ಚ್ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ತಿಂಗಳ 25ರಂದು ಬೆಳಿಗ್ಗೆ 10 ಗಂಟೆಗೆ ಮಧೂರು ರಸ್ತೆಯಿಂದ ಮಾರ್ಚ್ ಆರಂಭಿಸಲು ತೀರ್ಮಾನಿಸಲಾಗಿದೆ. ಬಡ ಕುಟುಂಬಗಳಿಗಾಗಿ ಸರಕಾರ ನೀಡಿದ ಸ್ಥಳವನ್ನು ಖಚಿತಪಡಿಸಬೇಕೆಂದು ಆಗ್ರಹಿಸಿ ಮಾರ್ಚ್ ಹಮ್ಮಿಕೊಳ್ಳಲಾಗಿದೆ. 2014ರಲ್ಲಿ ಸರಕಾರ …

ಗಿಳಿವಿಂಡುನಲ್ಲಿ ಕಾವ್ಯ ಸಂಸ್ಕೃತಿಯಾನ 27ರಂದು

ಮಂಜೇಶ್ವರ: ಬೆಂಗಳೂರಿನ ರಂಗಮAಡಲ ಹಾಗೂ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಜು.27 ರಂದು ಬೆಳಿಗ್ಗೆ 10ರಿಂದ ಗಿಳಿವಿಂಡು ಆವರಣದಲ್ಲಿ ಕಾವ್ಯ ಸಂಸ್ಕೃತಿ ಯಾನ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸರ್ವಾಧ್ಯಕ್ಷತೆ ವಹಿಸುವರು. ಕವಯಿತ್ರಿ ಡಾ.ಕೆ.ವಿ.ಸಿಂಧು ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್, ಎಡಿಎಂ ಅಖಿಲ್ ಪಿ., ಕೆ.ವಿ.ಕುಂಞÂ ರಾಮನ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಗೋವಿಂದ ಪೈ …

ವಿ.ಎಸ್. ನಿಧನ: ಮೀಯಪದವುನಲ್ಲಿ ಸರ್ವಪಕ್ಷ ಸಂತಾಪ ಸಭೆ

ಮೀಂಜ: ನಿಧಾನರಾದ ಕೇರಳದ ಮಾಜಿ ಮುಖ್ಯ ಮಂತ್ರಿ, ಸಿಪಿಎಂ ಹಿರಿಯ ನೇತಾರ ವಿ ಎಸ್ ಅಚ್ಯುತಾನಂದನ್‌ರ ನಿಧನಕ್ಕೆ ಸಿಪಿಎಂ ಮೀಂಜ ಫಸ್ಟ್ ಮತ್ತು ಸೆಕೆಂಡ್ ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಮೀಯಪದವಿನಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು. ಸಿಪಿಎಂ ಹಿರಿಯ ನೇತಾರ ಬಿ ಸದಾಶಿವ ರೈ ಅಧ್ಯಕ್ಷತೆ ವಹಿಸಿದರು. ಸಿಪಿಎಂ ನೇತಾರ ಕೆ ಆರ್ ಜಯಾನಂದ, ಸಿಪಿಐ ನೇತಾರ ರಾಮಕೃಷ್ಣ ಕಡಂಬಾರ್, ಬಿಜೆಪಿ ನೇತಾರ, ಬ್ಲಾಕ್ ಪಂಚಾಯತ್ ಸದಸ್ಯ ಕೆ ವಿ ರಾಧಾಕೃಷ್ಣ, ಕಾಂಗ್ರೆಸ್ ನೇತಾರ ದಾಮೋದರ, ಮಾಣಿ …

ಪೈವಳಿಕೆ ಪಂ.ನಲ್ಲಿ ಎಡ-ಬಲ ರಾಜಕೀಯ ಒಪ್ಪಂದವೆಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರ-ಸಿಪಿಎಂ

ಪೈವಳಿಕೆ: ಪಂಚಾಯತ್‌ನಲ್ಲಿ ಎಡರಂಗ ಹಾಗೂ ಐಕ್ಯರಂಗ ಮಧ್ಯೆ ಒಪ್ಪಂದ ರಾಜಕೀಯ ಆಡಳಿತ ನಡೆಯುತ್ತಿದೆ ಎಂದು ಬಿಜೆಪಿ ಆರೋಪ ಸತ್ಯಕ್ಕೆ ದೂರವೆಂದು ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಪೈವಳಿಕೆ ಪಂಚಾಯತ್ ಆಡಳಿತ ಮಂಡಳಿ ತೀರ್ಮಾನಿಸಿದ ಎಲ್ಲಾ ಜನಪರ ಕಾರ್ಯಗಳು ಸರಕಾರ ನಿರ್ದೇಶಿಸಿದ ಎಲ್ಲಾ ಕಾರ್ಯಗಳು ಸಕಾಲದಲ್ಲಿ ನಡೆಯುತ್ತಿದೆ. ಹಸಿರುಕ್ರಿಯಾ ಸೇನೆಯ ಸದಸ್ಯೆಯರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅಸತ್ಯ ಆರೋಪಗಳನ್ನು ಬಿಜೆಪಿ ಹೊರಿಸಿ ನಾಟಕವಾಡುತ್ತಿದೆಯೆಂದು …

ನಿವೃತ್ತ ಅಂಚೆ ಉದ್ಯೋಗಿ ನಿಧನ

ಕುಂಬಳೆ: ನಾಯ್ಕಾಪು ರಾಮೇಶ್ವರ ನಗರದ ಮಹಾಲಿಂಗ ಶೆಟ್ಟಿ (95) ನಿಧನ ಹೊಂದಿದರು.  ಇವರು  ಅಂಚೆ  ಇಲಾ ಖೆಯಲ್ಲಿ  ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.  ಅಲ್ಲದೆ ನಾಯ್ಕಾಪು ಶ್ರೀ ಗಣೇಶ ಭಜನಾ ಮಂದಿರದ ಸಕ್ರಿಯ ಕಾರ್ಯ ಕರ್ತನಾಗಿದ್ದರು. ಮೃತರು ಪತ್ನಿ ಕಮಲ, ಮಕ್ಕಳಾದ ಶಿವರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಶ್ರೀಧರ ಶೆಟ್ಟಿ, ಶ್ರೀಕೃಷ್ಣ ಶೆಟ್ಟಿ, ಸೊಸೆಯಂದಿರಾದ ಸುಜಾತ, ಶೈಲ, ನಯನ, ವೃಂದ, ನಳಿನಾಕ್ಷಿ, ಸಹೋದರ ನಾರಾಯಣ ಶೆಟ್ಟಿ ನೀರ್ಚಾಲು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಪೋಸ್ಟ್ ಮಿಸ್ಟ್ರಸ್ ನಿಧನ

ಪೆರ್ಲ: ಮಣಿಯಂಪಾರೆ ನೆಕ್ಕರೆಪದವಿನ ಪಿ. ಕುಂಞಿ ಕಣ್ಣ ಮಾಸ್ತ ರ್‌ರ ಪತ್ನಿ ಪಿ. ಲಕ್ಷ್ಮಿ ನಿಧನಹೊಂ ದಿದರು. ಇವರು ಕಾಸರಗೋಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಿಸ್ಟ್ರಸ್ ಆಗಿ ನಿವೃತ್ತರಾಗಿದ್ದರು. ವಿದ್ಯಾನಗರ, ತಳಂಗರೆ, ಚೆರ್ಕಳ, ಕುಂಬಳೆ, ಬಂದ್ಯೋಡು, ಪೆರ್ಲ ಎಂಬಿಡೆಗಳ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಆಶಾ ಕೆ.ಎಲ್ (ಉಪನ್ಯಾಸಕಿ), ಅಭಿಲಾಷ್ ಪಿ.ಕೆ (ಎನ್.ಜಿ), ಸೊಸೆ ದಿವ್ಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ

ಕಾಸರಗೋಡು: ಮಾಯಿಪ್ಪಾಡಿ  ಶಿರಿಬಾಗಿಲು ಶ್ರೀಕೃಷ್ಣ ನಿವಾಸ್‌ನ ಗೋಪಾಲಕೃಷ್ಣ ಆಚಾರ್ಯ (58) ನಿಧನ ಹೊಂದಿದರು. ದಿ| ಪುರೋಹಿತ ಜನಾರ್ದನ ಆಚಾರ್ಯರ ಪುತ್ರನಾದ ಮೃತರು ತಾಯಿ ಸರಸ್ವತಿ, ಪತ್ನಿ ಯಶೋಧ, ಮಕ್ಕಳಾದ ಮಧುರಾಜ್, ಪ್ರಶಾಂತಿ, ಸಿಂಧೂರ,  ಅಳಿಯಂದಿರಾದ ಹರಿಪ್ರಸಾದ್, ಮಿಥುನ್, ಸಹೋದರ-ಸಹೋದರಿಯರಾದ ಗಂಗಾಧರ, ಪಾಂಡುರಂಗ, ಅನಂತಪದ್ಮನಾಭ, ವಸಂತ, ಉದಯಶಂಕರ್, ಹರೀಶ್ ಕುಮಾರ್, ನವೀನ್‌ಚಂದ್ರ, ವೇದಾವತಿ, ಚಂದ್ರಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.