ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಹಿಂತಿರುಗಿಸಿದ ಸೈಬರ್ ಪೊಲೀಸ್

ಕಾಸರಗೋಡು: ವಿವಿಧ ಸನ್ನಿವೇಶಗಳಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಕಾಸರಗೋಡು ಸೈಬರ್ ಪೊಲೀಸರು ಹಿಂತಿರುಗಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ಸಿ.ಎಂ. ದೇವದಾಸನ್, ಡಿವೈಎಸ್‌ಪಿ ಟಿ. ಉತ್ತಮ್‌ದಾಸ್ ಎಂಬಿವರ ಉಪಸ್ಥಿತಿಯಲ್ಲಿ ಕಳೆದು ಹೋಗಿದ್ದ ಆರು ಮೊಬೈಲ್ ಫೋನ್‌ಗಳನ್ನು ವಾಪಸು ನೀಡಲಾಗಿದೆ. ಕಳೆದು ಹೋದವುಗಳಲ್ಲಿ ಅನ್ಯರಾಜ್ಯದವರ ಮೊಬೈಲ್ ಫೋನ್‌ಗಳು  ಹೆಚ್ಚಾ ಗಿತ್ತು. ಸೆಕೆಂಡ್ ಹ್ಯಾಂಡ್ ಮೊಬೈಲ್‌ಗಳು ಇವುಗಳಲ್ಲಿ ಒಳಗೊಂಡಿತ್ತು. ಸೈಬರ್ ಪೊಲೀಸ್ ಠಾಣೆಯ ಎಸ್‌ಐ ಪಿ.ಕೆ. ಅಜಿತ್, ಸಿವಿಲ್ ಪೊಲೀಸ್ ಆಫೀಸರ್ ವಿ. ಸಜೇಶ್ ಎಂಬಿವರ ತಂಡ ಮೊಬೈಲ್‌ಗಳನ್ನು ಪತ್ತೆಹಚ್ಚಿದೆ.

ನಾರಂಪಾಡಿಯಲ್ಲಿ ಬಿಎಂಎಸ್ ಸ್ಥಾಪಕ ದಿನಾಚರಣೆ

ಬದಿಯಡ್ಕ: ಬಿಎಂಎಸ್ 7೦ನೇ ಸ್ಥಾಪನಾ ದಿನದ ಅಂಗವಾಗಿ ನಾರಂಪಾಡಿ ಯೂನಿಟ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯ ಕ್ರಮದಲ್ಲಿ ಹಿರಿಯ ಕಾರ್ಯಕರ್ತ ಮಹಾಲಿಂಗ ಪಾಟಾಳಿ ಧ್ವಜಾ ರೋಹಣ ನಡೆಸಿದರು. ಬಿಎಂಎಸ್ ಮುಳ್ಳೇರಿಯ ವಲಯ ಕಾರ್ಯದರ್ಶಿ ಸದಾಶಿವ ಮಾತನಾಡಿದರು. ಬಿಜೆಪಿ ಬದಿಯಡ್ಕ ಮಂಡಲ  ಅಧ್ಯಕ್ಷ ಗೋಪಾಲಕೃಷ್ಣ ಎಂ, ಹರೀಶ್ ನಾರಂಪಾಡಿ, ರವೀಂದ್ರ ಪಾವೂರು, ಗಿರೀಶ್ ಮುಂಡೋಳುಮೂಲೆ, ಸುರೇಶ್ ಮುಂಡೋಳುಮೂಲೆ, ಸತ್ಯನಾರಾಯಣ ಭಟ್, ಉದಯ ನೆಲ್ಯಡ್ಕ, ಗಿರೀಶ್ ರೈ ನಾರಂಪಾಡಿ ಉಪಸ್ಥಿತರಿದ್ದರು.

ವರ್ಕಾಡಿ ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘ ಮಹಾಸಭೆ, ನೂತನ ಸಮಿತಿ ರಚನೆ

ವರ್ಕಾಡಿ: ಬಿಲ್ಲವ ಸಮಾಜ ಸುಧಾರಕ ಸೇವಾ ಸಂಘದ ಮಹಾಸಭೆ ವರ್ಕಾಡಿ ಶ್ರೀ ನಾರಾಯಣ ಗುರು ಮಂ ದಿರದಲ್ಲಿ ನಡೆಯಿತು. ಅಧ್ಯಕ್ಷ ಪ್ರಭಾಕರ ಪೂಜಾರಿ ಪಾವಳ ಅಧ್ಯಕ್ಷತೆ ವಹಿಸಿ ದ್ದರು. ಗೌರವಾಧ್ಯಕ್ಷರಾದ ಬಂಟಪ್ಪ ಪೂಜಾರಿ ಕಳಿಯೂರು, ರವೀಂದ್ರ ಪೂಜಾರಿ ಕಳಿಯೂರು, ಜನಾರ್ದನ ಪೂ ಜಾರಿ ಕಳಿಯೂರು ಉಪಸ್ಥಿತರಿದ್ದರು.ನೂತನ ಸಮಿತಿಯನ್ನು ರಚಿಸಲಾ ಯಿತು. ಅಧ್ಯಕ್ಷರಾಗಿ ಭುಜಂಗ ಪೂಜಾರಿ ಕಡಂಬಾರ್, ಕಾರ್ಯದರ್ಶಿ ಯಾಗಿ ಪೂರ್ಣಿಮÁ ಬೇರಿಂಜ, ಕೋಶಾಧಿಕಾರಿಯಾಗಿ ನವೀನ್ ಪೂಜಾರಿ ಮಡ್ವ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಬಂಟಪ್ಪ ಪೂಜಾರಿ ಕಳಿಯೂರು, ಉಪಾಧ್ಯಕ್ಷರಾಗಿ ಪದ್ಮ …