ನಡೆದು ಹೋಗುತ್ತಿದ್ದ ಯುವತಿಯನ್ನು ಅಪ್ಪಿಹಿಡಿದು ಬಳಿಕ ಪರಾರಿಯಾದ ಯುವಕನ ಬಂಧನ

ಕುಂಬಳೆ: ನಡೆದುಹೋಗುತ್ತಿದ್ದ ಹದಿನೆಂಟರ ಹರೆಯದ  ಯುವತಿ ಯನ್ನು ಅಪ್ಪಿ ಹಿಡಿದು ಬಳಿಕ ಓಡಿ ಪರಾರಿಯಾದ ಯುವಕನನ್ನು ನಾಗರಿಕರು ಸೆರೆಹಿಡಿದು ಬುದ್ದಿ ಹೇಳಿ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ. ಕರ್ನಾಟಕದ ಸಕಲೇಶಪುರ ನಿವಾಸಿಯೂ ಕುಂಬಳೆ ಆರಿಕ್ಕಾಡಿ ಕಡವತ್ತ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶುಹೈಬ್ (25) ಎಂಬಾತನನ್ನು ಸೆರೆಹಿಡಿದು ನಾಗರಿಕರು ಕುಂಬಳೆ ಪೊಲೀಸರಿಗೆ  ಹಸ್ತಾಂತರಿಸಿದ್ದಾರೆ. ಈ ತಿಂಗಳ 24ರಂದು ಹಾಡಹಗಲೇ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕುಂಬಳೆ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದಳು. ಈ ವೇಳೆ ಅಲ್ಲಿಗೆ ತಲುಪಿದ …

ರಜಾ ದಿನದಂದು 13ರ ಬಾಲಕಿ, ಯುವಕ ಶಾಲಾ ಪರಿಸರದಲ್ಲಿ ಪತ್ತೆ: ನಾಗರಿಕರನ್ನು ಕಂಡು ಓಡಿಹೋದ ಯುವಕನ ವಿರುದ್ಧ ಪೋಕ್ಸೋ ಕೇಸು

ಮಂಜೇಶ್ವರ: ರಜಾ ದಿನದಂದು ಹದಿಮೂರರ ಹರೆಯದ ಶಾಲಾ ವಿದ್ಯಾರ್ಥಿನಿ ಯನ್ನು ಶಾಲಾ ಪರಿಸರಕ್ಕೆ ಬರಮಾಡಿಕೊಂಡು ಆಕೆಗೆ ಕಿರುಕುಳ ನೀಡಲು ಯತ್ನಿಸಿರು ವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಪರಿಸರದಲ್ಲಿ ನಿನ್ನೆ ಈ ಘಟನೆ ನಡೆದಿದೆ.  ಎಂಟನೇ ತರಗತಿ ವಿದ್ಯಾರ್ಥಿನಿಯಾದ ಹದಿಮೂರರ ಹರೆಯದ ಬಾಲಕಿ ಹಾಗೂ ೨೦ರ ಹರೆಯದ ಯುವಕನನ್ನು ಸ್ಥಳೀಯರು ಶಾಲಾ ಪರಿಸರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡಿರುವುದಾಗಿ ಹೇಳಲಾಗುತ್ತಿದೆ. …

ದೇಲಂಪಾಡಿ ನಿವಾಸಿ ಪಯ್ಯನ್ನೂರಿನಲ್ಲಿ ನೇಣು ಬಿಗಿದು ಸಾವು

ಮುಳ್ಳೇರಿಯ: ದೇಲಂಪಾಡಿ ಬಳಿಯ ನಿವಾಸಿ ಯುವಕನೋರ್ವ ಪಯ್ಯನ್ನೂ ರಿನಲ್ಲಿ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ದೇಲಂಪಾಡಿ ಉರ್ದು ಚೇಡಿಮೂಲೆ ನಿವಾಸಿ ಆರ್. ಧನಂಜಯನ್ (20) ಮೃತಪಟ್ಟ ವ್ಯಕ್ತಿ. ಈತ ಪಯ್ಯನ್ನೂರು ಮಾಗ್ನಂಮಾಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಪಯ್ಯನ್ನೂರು ಕೇಳೋತ್‌ನ ಕ್ವಾರ್ಟರ್ಸ್‌ನಲ್ಲಿ ಈ ತಿಂಗಳ 26ರಂದು ರಾತ್ರಿ  ಈತ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದಿ|ರವೀಂ ದ್ರನ್-ಶ್ರೀಮತಿ ದಂಪತಿಯ ಪುತ್ರನಾದ ಮೃತರು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ಗೋವಾದಲ್ಲಿ ಕೆಲಸಕ್ಕೆ ತೆರಳಿದ ಅಡೂರು ನಿವಾಸಿ ನಾಪತ್ತೆ

ಮುಳ್ಳೇರಿಯ: ಗೋವಾದ ರಬ್ಬರ್ ತೋಟದಲ್ಲಿ ಕೆಲಸಕ್ಕೆಂದು ತೆರಳಿದ ಅಡೂರು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಅಡೂರು ನಾಗತ್ತುಮೂಲೆ ನಿವಾಸಿ ಕಣ್ಣನ್ ಎಂಬವರ ಪುತ್ರ ಮರುವನ್ (45) ನಾಪತ್ತೆಯಾದ ವ್ಯಕ್ತಿ.  ಈ ತಿಂಗಳ 17ರಂದು ಇತರ ಏಳು ಮಂದಿಯೊಂದಿಗೆ ಮರುವನ್ ಗೋವಾಕ್ಕೆ ಕೆಲಸಕ್ಕೆಂದು ತೆರಳಿದ್ದರು. ಈ ಮಧ್ಯೆ ಓರ್ವನಿಗೆ ಇತ್ತೀಚೆಗೆ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಆತನನ್ನು ಕರೆದುಕೊಂಡು ಮರುವನ್  ಗೋವಾದಿಂದ ಊರಿಗೆ  ಹೊರಟಿದ್ದರು. ಈ ವೇಳೆ ಮಡ್ಗೋವಾಕ್ಕೆ ತಲುಪಿದಾಗ ಮರುವನ್ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.  ಅವರ ಜತೆಗಿದ್ದ ವ್ಯಕ್ತಿ  ಊರಿಗೆ ತಲುಪಿದ …

ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಲಾಟರಿ ಏಜೆಂಟ್ ನಿಧನ

ನೀರ್ಚಾಲು: ಕೊಲ್ಲಂಗಾನದ ಕ್ವಾರ್ಟರ್ಸ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಲಾಟರಿ ಏಜೆಂಟ್ ಮೃತಪಟ್ಟರು. ಪಾಲಕ್ಕಾಡ್ ಪತ್ತಿಪಾಲಂ ನಿವಾಸಿ ಎನ್.ಟಿ. ಪ್ರಕಾಶನ್ (67) ಮೃತ ವ್ಯಕ್ತಿ. 12 ವರ್ಷಗಳಿಂದ ಕೊಲ್ಲಂಗಾನದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಇವರು ಲಾಟರಿ ಮಾರಾಟ ನಡೆಸುತ್ತ್ತಿದ್ದರು.  ಕೆಲವು ತಿಂಗಳಿಂದ ಮಧುಮೇಹ ಸಂಬಂಧ ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ಇವರು ಕ್ವಾರ್ಟರ್ಸ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಸ್ನೇಹಿತರು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರು. ರಾತ್ರಿ ವೇಳೆ ಪ್ರಕಾಶನ್ ನಿಧನಹೊಂದಿದರು.  ಮೃತರು ಪತ್ನಿ ವತ್ಸಲ, ಪುತ್ರ ಪ್ರಸಾದ್, ಸಹೋದರ ರಾದ …

ಮತಾಂತರ, ಮಾನವ ಕಳ್ಳ ಸಾಗಾಟದ ಆರೋಪದಂತೆ ಫತ್ತೀಸ್‌ಘಡ್‌ನಲ್ಲಿ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರ ಸೆರೆ; ಕೇರಳದ ಸಂಸದರಿಂದ ಸಂಸತ್‌ನಲ್ಲಿ ಪ್ರತಿಭಟನೆ

ನವದೆಹಲಿ: ಮತಾಂತರಗೊಳಿಸ ಲೆತ್ನ ಹಾಗೂ ಮಾನವ ಕಳ್ಳ ಸಾಗಾಟದ ಆರೋಪದಂತೆ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರನ್ನು ಛತ್ತೀಸ್‌ಘಡ್‌ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿ  ನ್ಯಾಯಾಂಗ ಬಂಧನದಲ್ಲಿರಿಸಿರುವುದನ್ನು ಪ್ರತಿಭಟಿಸಿ ಕೇರಳದ ಸಂಸದರು ಇಂದು ಬೆಳಿಗ್ಗೆ ಸಂಸತ್‌ನ ಹೊರಗೆ ತೀವ್ರ ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಸದನದ ಇಂದಿನ ಎಲ್ಲಾ ಕಲಾಪಗಳನ್ನು ಬದಿಗಿರಿಸಿ ಕ್ರೈಸ್ತ ಭಗಿನಿಯರ ಬಂಧನದ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಇಂಡಿಯಾ ಒಕ್ಕೂಟದ ಕೇ ರಳದ ಸಂಸದರು ಮತ್ತು ಸಿಪಿಎಂ ಸಂಸದರು ಸಂಸತ್‌ನಲ್ಲಿ ಇಂದು ತುರ್ತು ಗೊತ್ತುವಳಿ ಮಂಡಿಸಿದ್ದಾರೆ. …

ರೌದ್ರಾವತಾರ ತಾಳಿದ ಕಡಲ್ಕೊರೆತ: ಮಣಿಮುಂಡ, ಶಾರದಾ ನಗರ ಸಹಿತ ವಿವಿಧ ತೀರ ಪ್ರದೇಶದ ಜನರು ಆತಂಕದಲ್ಲಿ; ಮನೆ, ರಸ್ತೆ ನೀರು ಪಾಲಾಗಿ ಬದುಕು ಸಂಕಷ್ಟ

ಉಪ್ಪಳ: ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪುರ, ಪೆರಿಂಗಾಡಿ ವರೆಗಿನ ಸುಮಾರು ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಇಲ್ಲಿ ಮೂರು ವರ್ಷದ ಹಿಂದೆ ನಿರ್ಮಿಸಿದ ತಡೆಗೋಡೆ ಸಮುದ್ರ ಪಾಲಾಗಿದೆ. 2018ರಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 4.99 ಕೋಟಿ ರೂ. ವ್ಯಯಿಸಿ ನಿರ್ಮಿಸಲಾದ ಕುರ್ಚಿಪಳ್ಳ-ಮಣಿಮುಂಡ ರಸ್ತೆಯೂ ಸಂಪೂರ್ಣ ಸಮುದ್ರ ಪಾಲಾಗಿದೆ. ಇದರ ಜೊತೆಯಲ್ಲಿ ನಬಾರ್ಡ್‌ನ ಸಹಾಯದಿಂದ ನಿರ್ಮಿಸಿದ ಹನುಮಾನ್ ನಗರ ರಸ್ತೆಯೂ ನೀರು ಪಾಲಾಗಿದೆ. ಸುಮಾರು ೪೦೦ಕ್ಕೂ ಮೀನು ಕಾರ್ಮಿಕರ ಕುಟುಂಬಗಳು ಈ ಪರಿಸರದಲ್ಲಿದ್ದು, …

ಎಂಡಿಎಂಎ ಉಪಯೋಗಿಸುತ್ತಿದ್ದ ಮೂರು ಮಂದಿ ಸೆರೆ

ಮಂಜೇಶ್ವರ: ಎಂಡಿಎಂಎ ಉಪಯೋಗಿಸುತ್ತಿದ್ದ ಮೂರು ಮಂದಿಯನ್ನು ಶನಿವಾರ ಮಂಜೇಶ್ವರ ಪೊಲೀಸರು ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಶನಿವಾರ ಬೆಳಿಗ್ಗೆ ಹೊಸಂಗಡಿ ಬಸ್ ತಂಗುದಾಣದ ಬಳಿಯಿಂದ ಗುಡ್ಡೆ ಮಠ ನಿವಾಸಿ ಶರತ್ (32), ಮಧ್ಯಾಹ್ನ ಕುಂಜತ್ತೂರು ಬಸ್ ತಂಗುದಾಣ ಬಳಿಯಿಂದ ಕಾಡಿಯಾರ್ ನಿವಾಸಿ ಹನೀಫ್ ಎ. (42), ತಲಪಾಡಿ ಬಸ್ ತಂಗುದಾಣ ಬಳಿಯಿಂದ ಮಂಜೇಶ್ವರ ವಲಿಯವಳಪ್ ಬದರಿಯ ಮಸೀದಿ ಬಳಿಯ ಮೊಹಮ್ಮದ್ ಅಲಿಯಾಸ್ ಪಲ್ಲಕಳಂ (40)ನನ್ನು ಸೆರೆ ಹಿಡಿದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಇವ ರಿಂದ ಎಂಡಿಎಂಎ ಉಪಯೋಗಿಸುತ್ತಿದ್ದ …

ಕಡಿದು ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ರಾಜ್ಯದ ಮೂರೆಡೆಗಳಲ್ಲಾಗಿ ವಿದ್ಯಾರ್ಥಿ ಸೇರಿ ಮೂವರು ಮೃತ್ಯು

ಕಾಸರಗೋಡು: ಕಡಿದು ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ವಿವಿಧೆಡೆಗಳಲ್ಲಿ ಮೂರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಮಲಪ್ಪುರಂ ವಂಙಾರ ಎಂಬಲ್ಲಿ ಸ್ನೇಹಿತರ ಜೊತೆ ನಿನ್ನೆ ಸಂಜೆ ಸ್ನಾನಕ್ಕೆಂದು ತೋಡಿನ ನೀರಿಗಿಳಿದ ಅಲ್ಲಿನ ನಿವಾಸಿ ವಿದ್ಯಾರ್ಥಿ ಅಬ್ದುಲ್ ವದೂದ್ (17) ಅಲ್ಲೇ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ದಾರುಣವಾಗಿ ಸಾವನ್ನಪ್ಪಿದನು. ಮೃತನು ವಂಙಾರ ಇಹ್‌ಸಾನ್ ಇಂಗ್ಲಿಷ್ ಮಾಧ್ಯಮ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಇದೇ ರೀತಿ ತಿರುವನಂತಪುರ ಆಟಿಂಗಾಲ್‌ನ ಅಲಂಕೋಡ್ ಕುರುವಿಳ …

ಸಮುದ್ರದಲ್ಲಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಕಾಸರಗೋಡು: ಸ್ನೇಹಿತರೊಂದಿಗೆ ಸಮುದ್ರಕ್ಕಿಳಿದ ವೇಳೆ ಅಲೆಗೆ ಸಿಲುಕಿ ನಾಪತ್ತೆಯಾದ ವಲಸೆ ಕಾರ್ಮಿಕನ ಮೃತದೇಹ ಕಣ್ಣೂರು ಬಳಿಯ ಪಳಯಂಗಾಡಿ ಮಾಟೂಲ್ ಬೀಚ್‌ನಲ್ಲಿ ನಿನ್ನೆ ಪತ್ತೆಯಾಗಿದೆ. ಉತ್ತರ ಪ್ರದೇಶದ ಬೂಲ್ ಬುಳಿಯಾವೂರ್ ಕಾನೋಜ್‌ನ ರಾಣಾ ಅಲಿಯಾಸ್ ಜೈವೀರ್ ಸಿಂಗ್ (23) ಸಾವನ್ನಪ್ಪಿದ ಯುವಕ. ಈತ ಜುಲೈ ೨೩ರಂದು ತನ್ನ ನಾಲ್ವರು ಸ್ನೇಹಿತರೊಂದಿಗೆ ಕಾಸರಗೋಡು ನೆಲ್ಲಿಕುಂಜೆ ಬೀಟ್‌ನಲ್ಲಿ ಸಮುದ್ರಕ್ಕಿಳಿದಿದ್ದನು. ಆ ವೇಳೆ ಬಂದ ಆಳೆತ್ತರದ ಅಲೆಯಲ್ಲಿ ಸಿಲುಕಿ ಆತ ನಾಪತ್ತೆಯಾಗಿದ್ದನು. ವಿಷಯ ತಿಳಿದ ಕಾಸರಗೋಡು ಕರಾವಳಿ ಪೊಲೀಸರು ಮತ್ತು ಅಗ್ನಿಶಾಮಕ ದಳ …