ಕೊಲ್ಲಂನಲ್ಲಿ ಪತಿ ಇರಿದು ಕೊಲೆಗೈದ ಯುವತಿಯ ಮೃತದೇಹ ಬಂದಡ್ಕಕ್ಕೆ ತಲುಪಿಸಿ ಅಂತ್ಯಕ್ರಿಯೆ

ಕಾಸರಗೋಡು: ಕೊಲ್ಲಂ ಕಲ್ಲುವಾದುಕ್ಕಲ್‌ನಲ್ಲಿ ಪತಿಯಿಂದ ಹತ್ಯೆಗೀಡಾದ ಯುವತಿಯ ಮೃತದೇಹವನ್ನು ಬಂದಡ್ಕದ ಮನೆಗೆ ತಲುಪಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ರತಿ ಅಲಿಯಾಸ್ ರೇವತಿ (39)ರ ಮೃತದೇಹವನ್ನು ಇಂದು ಬೆಳಿಗ್ಗೆ ಬಂದಡ್ಕ ಪೇಟೆ ಸಮೀಪದ ಮನೆಗೆ ತರಲಾಗಿದೆ. ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತರುವಾಗ ಈಕೆಯ ಮಕ್ಕಳಾದ ಜೆ. ಬಿಜಿನ್, ಆರ್. ಎಜಿನ್ ಜೊತೆಗಿದ್ದರು. ಗುರುವಾರ ರಾತ್ರಿ 11 ಗಂಟೆ ವೇಳೆ ರತಿ ರಲ್ಲುವಾದುಕ್ಕಲ್ ತಾನಿಮುಖ್ ಸಮೀಪದ ಶಾನವಾಸ್ ಮಂಜಿಲ್‌ನಲ್ಲಿ ಕೊಲೆಗೀಡಾಗಿದ್ದರು. ಆ ಮನೆಯ ಮಾಲಕನಿಗೆ ಶುಶ್ರೂಷೆ ನೀಡಲು ರತಿ …

ಕಾರುಗಳಲ್ಲಿ ಸಾಗಿಸುತ್ತಿದ್ದ 123 ಕಿಲೋ ಗಾಂಜಾ ವಶ: ದೇಲಂಪಾಡಿ ನಿವಾಸಿಗಳಾದ ಮೂವರ ಸೆರೆ

ಕಾಸರಗೋಡು: ಆಂಧ್ರಪ್ರದೇಶ ದಿಂದ  ಕಾರುಗಳಲ್ಲಿ ಕಾಸರಗೋಡು ಭಾಗಕ್ಕೆ ಸಾಗಿಸುತ್ತಿದ್ದ 123 ಕಿಲೋ ಗಾಂಜಾವನ್ನು ಕರ್ನಾಟಕ ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ದೇಲಂಪಾಡಿ ನಿವಾಸಿಗಳಾದ ಮೂವರನ್ನು ಬಂಧಿಸಿದ್ದಾರೆ. ದೇಲಂಪಾಡಿ  ಅಡೂರು ಉರ್ಡೂರಿನ ಎಂ.ಕೆ. ಮಸೂದ್ (45), ದೇಲಂಪಾಡಿ ಚಂದಮೂ ಲೆಯ ಮುಹಮ್ಮದ್ ಆಶಿಕ್ (24), ದೇಲಂಪಾಡಿಯ ಸುಬೈರ್ (30) ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಮೊನ್ನೆ ಸಂಜೆ   ಮೂಡಬಿದ್ರೆ ಸಮೀಪದ ಕಾಂತಾವರದಲ್ಲಿ ಮಂಗಳೂರು ಸಿಟಿ ಕ್ರೈಂ ಬ್ರಾಂಚ್ ನಡೆಸಿದ ವಾಹನ ತಪಾಸಣೆ ವೇಳೆ  ಗಾಂಜಾ ಸಾಗಾಟ ಪತ್ತೆಹಚ್ಚಲಾಗಿದೆ.   ಪೊಲೀಸರು  …

ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ಬೈಗುಳ, ಕೊಲೆ ಬೆದರಿಕೆ: ಮಂಜೇಶ್ವರ ಠಾಣೆಯಲ್ಲಿ 2 ಕೇಸು ದಾಖಲು

ವರ್ಕಾಡಿ: ಕುಟುಂಬಶ್ರೀ ಸಾಲಕ್ಕೆ ಸಂಬಂಧಿಸಿದ ವಿವಾದದಲ್ಲಿ  ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ಸಿಡಿಎಸ್ ಚೆಯರ್ ಪರ್ಸನ್ ಹಾಗೂ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರ ಮಧ್ಯೆ ಅಸಭ್ಯ ಬೈಗುಳ, ಕೊಲೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಘಟನೆಯಲ್ಲಿ ಮಂಜೇಶ್ವರ ಪೊಲೀಸರು ಎರಡು ಕೇಸುಗಳನ್ನು ದಾಖಲಿಸಿದ್ದಾರೆ. ವರ್ಕಾಡಿ ಪಂಚಾಯತ್ ಸಿಡಿಎಸ್ ಕಚೇರಿಯಲ್ಲಿ ನಿನ್ನೆ ಕೇಸಿಗೆ ಆಸ್ಪದವಾದ ಘಟನೆ ಸಂಭವಿಸಿದೆ. ಸಿಡಿಎಸ್ ಚೆಯರ್ ಪರ್ಸನ್ ವಿಜಯಲಕ್ಷ್ಮಿಯ ದೂರಿನಂತೆ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪಾವೂರಿನ ರಾಜ್‌ಕುಮಾರ್ ಶೆಟ್ಟಿ, ರಕ್ಷಣ್ ಅಡೆಕಳ, ಭಾಸ್ಕರ …

ಮುಟ್ಟತ್ತೋಡಿ ನಿವಾಸಿ ನಾಪತ್ತೆ-ದೂರು

ಮಂಜೇಶ್ವರ: ಕಾಸರಗೋಡು ನಾಯಮ್ಮಾರಮೂಲೆ ಬಳಿಯ ಮುಟ್ಟತ್ತೋಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಮೊಹಮ್ಮದ್ ಅನೀಫ್ (42) ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೊಹ ಮ್ಮದ್ ಅನೀಫ್‌ರ ಸಹೋದರಿ ಸಣ್ಣಡ್ಕ ನಿವಾಸಿ ಅಪ್ಸ ಅಬೂಬಕರ್ ನೀಡಿದ ದೂರಿನಂತೆ  ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ಮೊಹಮ್ಮದ್ ಅನೀಫ್ ಸಹೋದರಿ ಅಪ್ಸ ಅಬೂಬಕರ್‌ರ ಮನೆಗೆ ಇತ್ತೀಚೆಗೆ ಬಂದಿದ್ದು, ಬಳಿಕ ಜುಲೈ 31ರಂದು ಮಂಗಳೂರಿನಲ್ಲಿ ಕೆಲಸಕ್ಕೆಂದು ತೆರಳಿದ್ದಾರೆ.  ಆದರೆ ಅನಂತರ ಅವರು ನಾಪತ್ತೆಯಾಗಿದ್ದು, ವಿವಿಧೆಡೆ  ಹುಡುಕಾಡಿದರೂ ಪತ್ತೆಹಚ್ಚಲಾಗಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ನಕಲಿ ಚಿನ್ನಾಭರಣ ಅಡವಿರಿಸಿ ವಂಚನೆ ಯತ್ನ: ಇಬ್ಬರು ಸೆರೆ

ಕಾಸರಗೋಡು: ತೃಕರಿಪುರದಲ್ಲಿ ನಕಲಿ ಚಿನ್ನಾಭರಣವನ್ನು ಅಡವಿಟ್ಟು ಹಣ ಪಡೆಯಲು ಯತ್ನ ನಡೆದಿದೆ. ಈ ಘಟನೆಯಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ತೃಕರಿಪುರ ಆಯಿಟ್ಟಿ ನಿವಾಸಿ ಜಾಫರ್‌ಖಾನ್, ಆಯಿಟ್ಟಿ ಹೌಸ್‌ನ ಮುನಿರುದ್ದೀನ್ ಎಂಬಿವರನ್ನು ಚಂದೇರ ಎಸ್‌ಐ ವಿ. ಜಿಯೋಸದಾನಂದನ್ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ.  ನಿನ್ನೆ ಸಂಜೆ ತೃಕರಿಪುರ ಫಾರ್ಮರ್ಸ್ ಬ್ಯಾಂಕ್‌ನಲ್ಲಿ ಘಟನೆ ನಡೆದಿದೆ. ಬ್ಯಾಂಕ್‌ನ ವ್ಯವಹಾರ ಸಮಯ ಕೊನೆಗೊಳ್ಳುವುದಕ್ಕಿಂತ ಸ್ವಲ್ಪ ಮುಂಚೆ ತಲುಪಿದ ಆರೋಪಿಗಳು 24.900 ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡವಿರಿಸಲು ಯತ್ನಿಸಿದ್ದರು. ಬ್ಯಾಂಕ್ ಎಂಡಿ ನೋರ್ತ್ ತೃಕರಿಪುರ, …

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರ್ಥಿಕ ವಂಚನೆ ನಡೆಸಿದ ಯುವತಿ ಸೆರೆ

ಕಾಸರಗೋಡು: ಆರ್ಥಿಕ ವಂಚನೆ ಪ್ರಕರಣದಲ್ಲಿ ನ್ಯಾಯಾಲ ಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ ಯುವತಿಯನ್ನು ಪೊಲೀ ಸರು ಬಂಧಿಸಿದ್ದಾರೆ. ಕೋಟಯಂ ಐಮಾನಂ ಅಂಬಾಡಿಕವಳ ನಿವಾಸಿ ವೃಂದಾ ರಾಜೇಶ್‌ಳನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಇವಳ ವಿರುದ್ಧ ಅಂಬಲತ್ತರ ಠಾಣೆಯಲ್ಲಿ 49 ಪ್ರಕರಣಗಳು ಜ್ಯಾರಿಯಲ್ಲಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಗಳಲ್ಲಿ 100ರಷ್ಟು ಪ್ರಕರಣಗಳು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಯ್ಯನ್ನೂರಿನಲ್ಲಿ ಅಡಗಿ ವಾಸಿಸುತ್ತಿದ್ದ ಈಕೆಯನ್ನು ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಸಿಖ್‌ಟೆಕ್ ಎಂಬ ಹೆಸರಲ್ಲಿ ಚಿಟ್ಟಿ ಕಂಪೆನಿ …

ರಾಜ್ಯಸಭೆಯಲ್ಲಿ ಮತ್ತೆ 100 ಸದಸ್ಯರ ಬಲ ದಾಟಿದ ಬಿಜೆಪಿ

ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ. 9ರಂದು ಚುನಾವಣೆ ನಡೆಯಲಿರು ವಂತೆಯೇ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಬಲ ಮತ್ತೆ 100 ದಾಟಿದೆ.ರಾಜ್ಯಸಭೆಯಲ್ಲಿ ಬಿಜೆಪಿಸದಸ್ಯರ ಬಲ 100ರ ಗಡಿ ದಾಟುತ್ತಿರುವುದು 2022ರ ನಂತರ ಇದೇ ಮೊದಲ ಬಾರಿಯಾಗಿದೆ. ಕೇರಳದಿಂದ ಸಿ. ಸದಾನಂದನ್ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶಗೊಂಡು ಅವರು ಪ್ರಮಾಣವಚನ ಸ್ವೀಕರಸುವ ಮೂಲಕ ಬಿಜೆಪಿಯ ಸದಸ್ಯರ ಸಂಖ್ಯೆ ಈಗ 102ಕ್ಕೇರಿದೆ. 2022ರಲ್ಲಿ 13 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದ ಬಳಿಕ ರಾಜ್ಯ ಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 97ರಿಂದ 101ಕ್ಕೇರಿತ್ತು. ಅನಂತರ …

ರೈಲಿನಲ್ಲಿ ಕಾಲೇಜು ಪ್ರಾಧ್ಯಾಪಕರ ಮೇಲೆ ಹಲ್ಲೆ ಇಬ್ಬರು ವಿದ್ಯಾರ್ಥಿಗಳು ಸೆರೆ

ಕಾಸರಗೋಡು:  ಕಳೆದ ತಿಂಗಳ 28ರಂದು ಸಂಜೆ ಮಂಗಳೂರಿನಿಂದ ಕಣ್ಣೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂ ಜರ್ ರೈಲಿನಲ್ಲಿ  ಪ್ರಯಾಣಿಸು ತ್ತಿದ್ದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಬಳಿಯ ನಿವಾಸಿ  ಕೆ. ಸಾಜನ್ (48)ರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾದ ಇಬ್ಬರು ವಿದ್ಯಾರ್ಥಿಗಳನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಎಂ.ಕೆ. ಪ್ರಕಾಶನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪಾಲಕುನ್ನು ತಿರುವಕ್ಕೋಳಿ ಹೌಸ್‌ನ ಪಿ.ಎ. ಮೊಹಮ್ಮದ್  ಜಸಿ (20) ಮತ್ತು …

ರೈಲುಗಳಲ್ಲಿ ರ‍್ಯಾಗಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ನಿರ್ಧಾರ

ಕಾಸರಗೋಡು: ಶಾಲೆಗಳಲ್ಲಿ ಹಾಗೂ ರೈಲುಗಳಲ್ಲಿ ತೀವ್ರಗೊಂ ಡಿರುವ ರ‍್ಯಾಗಿಂಗ್ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸ ಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರ್.ಪಿ.ಎಫ್, ಕೇರಳ ರೈಲ್ವೇ ಪೊಲೀಸ್, ಜಿಲ್ಲಾ ಅಡಿಶನಲ್ ಎಸ್ಪಿ ದೇವದಾಸನ್ ಸಿ.ಎಂ, ಜಿಲ್ಲಾ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಅನಿಲ್ ಕುಮಾರ್ ಎ, ಆರ್‌ಪಿಎಫ್ ಇನ್‌ಸ್ಪೆಕ್ಟರ್, ಕೇರಳ ರೈಲ್ವೇ ಪೊಲೀಸ್ …

ಕೇಂದ್ರ ಸರಕಾರದ ಹೆಲ್ತ್ ಸ್ಕೀಂ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲೂ ಲಭ್ಯ

ಕಾಸರಗೋಡು: ಕೇಂದ್ರ ಸರಕಾರದ ಹೆಲ್ತ್ ಸ್ಕೀಂ ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಲಭ್ಯವಾಗಲಿದೆ. ಕೇಂದ್ರ ಸರಕಾರಿ ನೌಕರರಿಗೂ, ನಿವೃತ್ತ ನೌಕರರಿಗೂ, ಅವರ ಆಶ್ರಿತರಿಗೂ ಚಿಕಿತ್ಸಾ ಸಹಾಯ ಯೋಜನೆಯಾದ ಸೆಂಟ್ರಲ್ ಗವರ್‌ಮೆಂಟ್ ಹೆಲ್ತ್ ಸ್ಕೀಂ ಈ ತಿಂಗಳ 1ರಿಂದ ತಲ ಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಆರಂಭಗೊಂಡಿದೆ. ಈ ಬಗ್ಗೆ ಒಪ್ಪಂದ ಪತ್ರದಲ್ಲಿ ಕ್ಯಾನ್ಸರ್ ಸೆಂಟರ್‌ನ ಡಾ| ಸತೀಶನ್ ಬಿ. ಹಾಗೂ ಸಿ.ಜಿ.ಎಚ್.ಎಸ್‌ನ ಹೆಚ್ಚುವರಿ ನಿರ್ದೇಶಕ ಡಾ| ನಿತಿನ್ ಸಹಿ ಹಾಕಿದ್ದಾರೆ. ಯೋಜನೆ ಪ್ರಕಾರ ನಿವೃತ್ತ ನೌಕರರಿಗೂ, ಅವರ …