ಕಟ್ಟಡದಿಂದ ಕೆಳಕ್ಕೆ ದೂಡಿ ಹಾಕಿ ಗಂಭೀರ ಗಾಯಗೊಂಡಿದ್ದ ವ್ಯಾಪಾರಿ ಸಾವು: ಗುತ್ತಿಗೆದಾರ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಕಟ್ಟಡದಿಂದ ಕೆಳಗ್ಗೆ ದೂಡಿ ಹಾಕಿದ ಪರಿಣಾಮ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಸದುರ್ಗ ವೆಳ್ಳಿಕೋತ್ತ್ ಪೇರಳ ನಿವಾಸಿ ಹಾಗೂ ವ್ಯಾಪಾರಿಯೂ ಆಗಿರುವ ರೋಯ್ ಜೋಸೆಫ್ ಎಳುಪ್ಲಾಕ್ಕಲ್ (45) ಸಾವನ್ನಪ್ಪಿದ ವ್ಯಕ್ತಿ. ಮಾವುಂಗಾಲ್ ಮೂಲಕಂಡದಲ್ಲಿ ರೋಯ್ ಜೋಸೆಫ್ ಹೊಸದಾಗಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸುತ್ತಿದ್ದು, ಆಗಸ್ಟ್ ೩ರಂದು ಅವರನ್ನು ಮಧ್ಯಾಹ್ನ ಸುಮಾರು 1.30ರ ವೇಳೆ ರೋಯ್ ಜೋಸೆಫ್‌ರನ್ನು ಆ ಕಟ್ಟಡದ ಮೂರನೇ ಅಂತಸ್ತಿನಿಂದ ಕೆಳಗೆ ದೂಡಿ ಹಾಕಲಾಗಿತ್ತು. ಅದರಿಂದ …

ಮಾದಕವಸ್ತು ಕೈವಶವಿರಿಸಿದ್ದ ವ್ಯಕ್ತಿ ಸೆರೆ

ಕುಂಬಳೆ: ಮಾದಕವಸ್ತುವಾದ ಎಂಡಿಎಂಎ ಕೈವಶವಿರಿಸಿಕೊಂಡಿದ್ದ ಓರ್ವನನ್ನುಕುಂಬಳೆ ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದ ತಂಡ ಬಂಧಿಸಿದೆ. ಉಪ್ಪಳ ಮಣಿಮುಂಡ ನಿವಾಸಿ ಮುಹಮ್ಮದ್ ಸಕೀರ್ (50) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತನ ಕೈಯಿಂದ 0.346 ಗ್ರಾಂ ಎಡಿಎಂಎ ವಶಪಡಿಸಲಾಗಿದೆ. ಮೊನ್ನೆ ಸಂಜೆ 4.30ಕ್ಕೆ ಕಂiರು ವಿಲ್ಲೇಜ್‌ನ ಕೊಕ್ಕೆಚ್ಚಾಲ್ ಜಂಕ್ಷನ್‌ಗೆ ತೆರಳುವ ರಸ್ತೆ ಬದಿ ನಿಂತಿದ್ದ ಮುಹಮ್ಮದ್ ಸಕೀರ್‌ನನ್ನು ಸಂಶಯದ ಮೇರೆಗೆ ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ …

ವಿದ್ಯುತ್ ಸಬ್ಸಿಡಿ ರದ್ದು ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ತಿಂಗಳಿಗೆ 240 ಯೂನಿಟ್ಗಿಂತ ಕಡಿಮೆ ವಿದ್ಯುತ್ ಉಪಯೋಗಿಸುವ ಬಳಕೆದಾರರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ರದ್ದುಗೊಳಿಸಲು ಸರಕಾರ ಚಿಂತನೆ ನಡೆಸಿದೆ. ಇದು ಜ್ಯಾರಿಗೊಂಡಲ್ಲಿ ರಾಜ್ಯದಲ್ಲಿ 240 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವ ಬಳಕೆದಾರರಿಗೆ ಪ್ರತೀ ಎರಡು ತಿಂಗಳ ವಿದ್ಯುತ್ ಬಿಲ್ನಲ್ಲಿ ನೀಡಲಾಗುವ ತಲಾ 148 ರೂ. ಸಬ್ಸಿಡಿ ಇಲ್ಲದಾಗಲಿದೆ. 240 ಯೂನಿಟ್ಗಿಂತಲೂ ಕಡಿಮೆ ವಿದ್ಯುತ್ ಉಪಯೋಗಿಸುವ 65 ಲಕ್ಷದಷ್ಟು ಕುಟುಂಬಗಳು ರಾಜ್ಯದಲ್ಲಿದ್ದು ಅವರ ಮೇಲೆ ಇದು ಪರಿಣಾಮ ಬೀರಲಿದೆ. ವಿದ್ಯುತ್ ಬಳಕೆದಾರರಿಂದ ವಸೂಲಿ ಮಾಡಲಾಗುವ ಇಲೆಕ್ಟ್ರಿಸಿಟಿ ಡ್ಯೂಟಿ …

ಮನೆಗೆ ಅತಿಕ್ರಮಿಸಿ ನುಗ್ಗಿ ನಿದ್ರಿಸುತ್ತಿದ್ದ ಯುವತಿಯ ಮಾನಭಂಗಕ್ಕೆತ್ನ : ಆರೋಪಿ ಬಂಧನ

ಕಾಸರಗೋಡು: ಮನೆಗೆ ಅತಿ ಕ್ರಮಿಸಿ ನುಗ್ಗಿ ಯುವತಿಯನ್ನು ಮಾನ ಭಂಗಗೈಯ್ಯಲು ಯುವಕನೋರ್ವ ಯತ್ನಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕೇಸು ದಾಖಲಿ ಸಿಕೊಂಡ ಚಿಟ್ಟಾರಿ ಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಲಿನೇಶ್ (41) ಎಂಬಾತ ಸೆರೆಗೀಡಾದ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ದಿನ ಮುಂಜಾನೆ ೧.೩೦ರ ವೇಳೆ ಚಿಟ್ಟಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮದ್ಯ ದಮಲಿನಲ್ಲಿದ್ದ ಲಿನೇಶ್ ಮನೆಗೆ ಅತಿಕ್ರಮಿಸಿ ನುಗ್ಗಿ ನಿದ್ರಿಸುತ್ತಿದ್ದ ೪೫ರ ಹರೆಯದ ಯುವತಿಯನ್ನು  ಅಪ್ಪಿಕೊಂಡಿದ್ದಾನೆನ್ನಲಾಗಿದೆ. ಈವೇಳೆ ಯುವತಿ ಬೊಬ್ಬೆ ಹಾಕಿದ್ದು …

ಸ್ಥಳೀಯಾಡಳಿತ ಇಲಾಖೆ ಪ್ರೊಜೆಕ್ಟ್ ಡೈರೆಕ್ಟರ್ ಅಮಾನತು

ಕಾಸರಗೋಡು: ಸ್ಥಳೀ ಯಾಡಳಿತ ಇಲಾಖೆಯ ಜಿಲ್ಲಾ ಜೋಯಿಂಟ್ ಡೈರೆಕ್ಟರ್ ಕಚೇರಿಯ ಪ್ರೊಜೆಕ್ಟ್ ಡೈರೆಕ್ಟರ್ ಪಿ.ಐ. ಜಸ್ಟಿನ್‌ರನ್ನು ತನಿಖಾ ವಿದೇಯಗೊಳಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಾಸರಗೋಡು ನಗರಸಭೆಯ ಈ ಹಿಂದಿನ ಕಾರ್ಯದರ್ಶಿಯಾಗಿದ್ದ ವೇಳೆ ಅವರು ಆ ಅವಧಿಯಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲವೆಂದು ಆರೋಪಿಸಿ ನಗರಸಭಾ ಅಧ್ಯಕ್ಷರು ನೀಡಿದ ದೂರಿನಂತೆ ಈ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಪತಿ ಮನೆಯಲ್ಲಿ ಕಿರುಕುಳ ಸಹಿಸಲಾಗದೆ ತಾಯಿ ಮನೆಗೆ ಹೋದ ಯುವತಿಗೆ ತಂದೆಯಿಂದಲೂ ಹಲ್ಲೆ: ಆತ್ಮಹತ್ಯೆಗೈಯ್ಯಲು ನಿರ್ಧರಿಸಿದ ಯುವತಿಯನ್ನು ರಕ್ಷಿಸಿದ ಯುವಕರು

ಕುಂಬಳೆ: ನಾಲ್ಕು ತಿಂಗಳು ಪ್ರಾಯದ  ಮಗುವಿನ ತಾಯಿಯಾದ ಯುವತಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿ  ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಕುಂಬಳೆ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ, ಪೆರುವಾಡ್ ಕಡಪ್ಪುರದ ೨೦ರ ಹರೆಯದ ಯುವತಿ ನೀಡಿದ ದೂರಿ ನಂತೆ  ಕೇಸು ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪತಿ ಪೆರುವಾಡ್ ಕಡಪ್ಪುರದ ಫಿರೋಸ್, ಮನೆಯವರಾದ ಅಬ್ದುಲ್ ರಹ್ಮಾನ್, ನಬೀಸ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ. 2024 ಎಪ್ರಿಲ್ 21ರಂದು ಯುವತಿ ಹಾಗೂ ಒಂದನೇ ಆರೋಪಿಯಾದ ಫಿರೋಸ್  ಮಧ್ಯೆ …

ಅಸೌಖ್ಯ: ನಿವೃತ್ತ ಶಿಕ್ಷಣಾಧಿಕಾರಿ ನಿಧನ

ಉಪ್ಪಳ: ಐಲ ಕ್ಷೇತ್ರ ಸಮೀಪ ನಿವಾಸಿ, ಧರ್ಮತ್ತಡ್ಕ ಶಾಲೆಯ ನಿವೃತ್ತ ಅಧ್ಯಾಪಕ ಅಶೋಕನ್‌ರ ಪತ್ನಿ ನಿವೃತ್ತ ಶಿಕ್ಷಣಾಧಿಕಾರಿ ಲತಾ.ಕೆ (59) ನಿನ್ನೆ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ಕೋದಮಂಗಲದಲ್ಲಿ ಡಿ.ಇ.ಒ ಆಗಿ ನಿವೃತ್ತಿ ಹೊಂದಿದ್ದಾರೆ. ಕಾಸರಗೋಡಿನ ದಿ| ರಾಮಚಂದ್ರ -ದಿ| ರಾಜೀವಿ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ ಪುತ್ರ ಆಶಿತ್‌ಲಾಲ್ (ಯು.ಎಲ್.ಸಿ.ಸಿ ಉದ್ಯೋಗಿ), ಸಹೋದರ ಸಹೋದರಿಯರಾದ ಜಗದೀಶ, ಲಕ್ಷ್ಮೀಕಾಂತ್, ಪುಷ್ಪಾವತಿ, ವಿಜಯ ಹಾಗೂ …

ಮತ್ತೆ ದಾಖಲೆ ಸೃಷ್ಟಿಸಿದ ಚಿನ್ನದ ದರ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆಯತ್ತ ನೆಗೆದಿದೆ. ಪವನ್ಗೆ 160 ರೂಪಾಯಿ ಹೆಚ್ಚಳವಾಗುವು ದರೊಂ ದಿಗೆ ಇಂದಿನ ದರ 75,200 ರೂ. ಆಗಿದೆ. ಒಂದು ಗ್ರಾಂ ಚಿನ್ನದ ದರ 9,400ರೂಪಾಯಿ.ಕಳೆದ ತಿಂಗಳ 23ರಂದು 75 ಸಾವಿರ ರೂಪಾಯಿ ದಾಟಿ ದಾಖಲೆ ನಿರ್ಮಿಸಿದ ಚಿನ್ನದ ಬೆಲೆ ಅನಂತರದ ದಿನಗಳಲ್ಲಿ ಕಡಿಮೆ ಯಾಗಿತ್ತು. 74 ಸಾವಿರಕ್ಕಿಂತಲೂ ಕಡಿಮೆಯಾದ ಬೆಲೆ ಮೊನ್ನೆಯಿಂದ ಮತ್ತೆ ಏರತೊಡಗಿದೆ. ಅಗೋಸ್ತ್ 1ರಂದು ಪವನ್ಗೆ 73,200 ರೂ. ಆಗಿತ್ತು.5 ದಿನಗಳ ಮಧ್ಯೆ 1800 ರೂ.ಗಳ ಹೆಚ್ಚಳವಾಗಿದೆ. …

ಬೀಗ ಜಡಿದ ಮನೆಯಿಂದ 15 ಪವನ್ ಚಿನ್ನ, 50,೦೦೦ ರೂ. ಕಳವು

ಕಾಸರಗೋಡು: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ 15 ಪವನ್ ಚಿನ್ನ ಹಾಗೂ 5೦,೦೦೦ ರೂ. ನಗದು ಕಳವುಗೈದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳ ನಾಲ್ಕನೇ ಮೈಲಿನ ಸತ್ತಾರ್ ಕೆ.ಎ. ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಇವರು ನಿನ್ನೆ ಮನೆಗೆ ಬೀಗ ಜಡಿದು ಸೂರ್ಲಿನಲ್ಲಿರುವ ತಮ್ಮನ ಮನೆಗೆ ಹೋಗಿದ್ದರು. ಸಂಜೆ ವೇಳೆ ಹಿಂದಿರುಗಿದಾಗಲಷ್ಟೇ ಮನೆಯಲ್ಲಿ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಮನೆಯ ಎದುರಿನ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ಎಲ್ಲಾ ಕಪಾಟುಗಳನ್ನು …

ಮನೆ ಅಂಗಳದಲ್ಲಿ ಮಗುವಿಗೆ ಊಟ ನೀಡುತ್ತಿದ್ದಾಗ ತೆಂಗಿನ ಮರಬಿದ್ದು ಯುವತಿ ಮೃತ್ಯು

ಕಲ್ಲಿಕೋಟೆ: ಮನೆ ಅಂಗಳದಲ್ಲಿ ನಿಂತುಕೊಂಡು ಮಗುವಿಗೆ ಊಟ ನೀಡುತ್ತಿದ್ದ ವೇಳೆ ತೆಂಗಿನ ಮರ ಮಗುಚಿಬಿದ್ದು  ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುನಿಯಿಲ್ ಪೀಡಿಗ ಎಂಬಲ್ಲಿಗೆ ಸಮೀಪದ ಪರಂಬತ್ತ್ ಜಂಶೀದ್ ಎಂಬವರ ಪತ್ನಿ ಫಹೀಮ (30) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ  ಮನೆ ಹಿತ್ತಿಲಲ್ಲಿರುವ ತೆಂಗಿನ ಮರ ಬುಡ ಸಹಿತ ಮಗುಚಿ ಅಂಗಳಕ್ಕೆ ಬಿದ್ದಿದೆ. ಘಟನೆ ವೇಳೆ ಅಂಗಳದಲ್ಲಿ ಫಹೀಮ ಮಗುವಿಗೆ  ಊಟ ನೀಡುತ್ತಿದ್ದರು.  ಈ ವೇಳೆ ಮಗುಚಿದ ತೆಂಗಿನ ಮರ ಇವರ ಮೇಲೆ ಬಿದ್ದಿದೆ. ಈ …