ಮಾಧ್ಯಮ ಕಾರ್ಯಕರ್ತರ ಮೇಲೆ ತಂಡದಿಂದ ಹಲ್ಲೆ: ಕೊಲೆಗೀಡಾದ ಸೌಜನ್ಯರ ಮಾವನ ಕಾರಿಗೆ ಹಾನಿ; ಧರ್ಮಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕೊಲೆಗೀಡಾದ ಸೌಜನ್ಯ ಎಂಬ ಯುವತಿಯ ಮಾವ ವಿಠಲ ಗೌಡರ ವಾಹನವನ್ನು ತಂಡವೊಂದು ತಡೆದು ನಿಲ್ಲಿಸಿ ಹಾನಿಗೊಳಿಸಿದ ಘಟನೆ ನಡೆದಿದೆ. ಧರ್ಮಸ್ಥಳ ಟ್ರಸ್ಟನ್ನು ಬೆಂಬಲಿಸುವ ವ್ಯಕ್ತಿಗಳು ವಾಹನಕ್ಕೆ ಹಾನಿಗೈದಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ ನಾಲ್ವರು ಮಾಧ್ಯಮ ಕಾರ್ಯಕರ್ತರ ಮೇಲೆ ಹಲ್ಲೆಗೈದ ಘಟನೆಯ ಬೆನ್ನಲ್ಲೇ ಉಂಟಾದ ಘರ್ಷಣೆ ವೇಳೆ ವಾಹನಕ್ಕೆ ಹಾನಿಗೈಯ್ಯಲಾಗಿದೆ. ವಾಹನದ ಗಾಜುಗಳನ್ನು ಪುಡಿಗೈದು ಸೀಟುಗಳನ್ನು ಹರಿದು ಹಾಕಿರುವುದಾಗಿ ದೂರಲಾಗಿದೆ. ಬಿಗ್‌ಬಾಸ್ ಸ್ಪರ್ಧಿ ರಜತ್ ಎಂಬವರು ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯರ ಮನೆಗೆ ಭೇಟಿ ನೀಡಿದ್ದರು. …