ಕುಂಜತ್ತೂರಿನಲ್ಲಿ ವಾಸಿಸುತ್ತಿದ್ದ ಬಿಹಾರ ನಿವಾಸಿ ನಾಪತ್ತೆ

ಮಂಜೇಶ್ವರ: ಕುಂಜತ್ತೂರು ಪದವುನಲ್ಲಿ ವಾಸಿಸುತ್ತಿದ್ದ ಬಿಹಾರ ನಿವಾಸಿಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬಿಹಾರದ ಮೋತಿಹರಿ ಜಿಲ್ಲೆಯ ಹತ್ವಾಹಿ ತಿಕುಲಿಯ ಚಂಬಾರನ್ ಎಂಬಲ್ಲಿನ ಆಶ್‌ದೇವ್ ಚೌದರಿ ಎಂಬವರ ಪುತ್ರ ರಾಹುಲ್ ಕುಮಾರ್ (17) ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಈತನ ಸಹೋದರ ವಿಶಾಲ್ ಕುಮಾರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕುಂಜತ್ತೂರುಪದವಿನಲ್ಲಿರುವ  ಫರ್ನೀಚರ್ ಸಂಸ್ಥೆಯಲ್ಲಿ ಈತ ಸಹೋದರ ವಿಶಾಲ್ ಕುಮಾರ್ ನ ಜೊತೆ ಕೆಲಸ ನಿರ್ವಹಿ ಸುತ್ತಿದ್ದನು. ನಿನ್ನೆ ಮುಂಜಾನೆ 1.45ರ ಬಳಿಕ ವಾಸಸ್ಥಳದಿಂದ …

ಮೊಬೈಲ್ ಚಾರ್ಜ್ ಮಾಡುತ್ತಿದ್ದ ವೇಳೆ ಪವರ್ ಬ್ಯಾಂಕ್ ಸ್ಫೋಟ: ಮನೆ ಬೆಂಕಿಗಾಹುತಿ

ಮಲಪ್ಪುರಂ: ಮೊಬೈಲ್ ಫೋನ್ ಚಾರ್ಜ್ ಮಾಡುತ್ತಿದ್ದ ವೇಳೆ ಪವರ್ ಬ್ಯಾಂಕ್ ಸ್ಫೋಟಗೊಂಡು ಮನೆ ಬೆಂಕಿಗಾಹುತಿಯಾದ ಘಟನೆ ನಡೆದಿದೆ.  ತಿರೂರು ತೆಕ್ಕನ್ ಕುಟ್ಟೂರುನ ಮೂಕಿಲಪೀಡಿಗ ಅತ್ತಂಬರಂಬ್ ಎಂಬಲ್ಲಿ  ಘಟನೆ ನಡೆದಿದೆ. ಇಲ್ಲಿನ ಅಬೂಬಕರ್ ಸಿದ್ದಿಕ್ ಎಂಬವರ ಮನೆ ಬೆಂಕಿಗಾಹು ತಿಯಾಗಿದೆ.  ದುರ್ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದುದರಿಂದ ಭಾರೀ ದುರಂತ ತಪ್ಪಿದೆ.

ಶಾಂತಿಗುರಿ-ಕುಬಣೂರು ವಿದ್ಯಾನಗರ ರಸ್ತೆ ಶೋಚನೀಯ: ದುರಸ್ತಿಗೆ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್  ವ್ಯಾಪ್ತಿಯ ಶಾಂತಿಗುರಿಯಿಂದ ಕುಬಣೂರು ವಿದ್ಯಾನಗರ ತನಕ  ಮೂರು ಕಿಲೋ ಮೀಟರ್ ಉದ್ದದ ರಸ್ತೆ ಶೋಚನೀಯಾವಸ್ಥೆಗೆ ತಲುಪಿ ಹಲವು ವರ್ಷಗಳು ಕಳೆದರೂ ದುರಸ್ತಿ ನಡೆಸದಿರುವುದು ಸ್ಥಳೀಯರಲ್ಲಿ ರೋಷಕ್ಕೆ ಕಾರಣವಾಗಿದೆ. ಅಲ್ಲಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ರಸ್ತೆ ಮೂಲಕ ಪ್ರತಾಪನಗರ, ತಿಂಬರ, ಶಾಂತಿಗುರಿ ಸಹಿತ ವಿವಿಧ ಪ್ರದೇಶದ ಜನರು ತಮ್ಮ ಅಗತ್ಯಗಳಿಗೆ ಕುಬಣೂರು, ಪಂಜತ್ತೊಟ್ಟಿ, ಪಚ್ಚಂಬಳ ಮೊದಲಾದ ಕಡೆಗಳಿಗೆ ಸಂಚರಿಸುತ್ತಿದ್ದಾರೆ. ಅಲ್ಲದೆ ದಿನನಿತ್ಯ ಶಾಲಾ ಮಕ್ಕಳು,ಶಾಲಾ ವಾಹನಗಳು …

ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸದ ದ್ವೇಷ : ವೃದ್ದೆ ಸಹಿತ ಇಬ್ಬರಿಗೆ ಹಲ್ಲೆ; ಇಬ್ಬರ ವಿರುದ್ಧ ಕೇಸು

ಉಪ್ಪಳ: ಮದುವೆ ಕಾರ್ಯಕ್ರಮ ದಲ್ಲಿ ಭಾಗವಹಿಸದ ದ್ವೇಷದಿಂದ ವೃದ್ದೆಗೆ ಹಲ್ಲೆಗೈದ  ಬಗ್ಗೆ ದೂರಲಾಗಿದೆ. ತಡೆಯಲೆತ್ನಿಸಿದ ವೃದ್ದೆಯ ಸಹೋದರನ ಪುತ್ರನಿಗೂ ಹಲ್ಲೆಗೈಯ್ಯಲಾಗಿದೆ.  ಘಟನೆಗೆ ಸಂಬಂಧಿಸಿ ಸಹೋದರರಾದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿ  ಹೇರೂರು ನೀರಮೂಲೆಯ ಗುಲಾಬಿ (60), ಸಹೋದರನ ಪುತ್ರ ಯತಿರಾಜ್ (30) ಎಂಬಿವರಿಗೆ ಹಲ್ಲೆ ಗೈಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಕುಂಜತ್ತೂರು ಪದವು ನಿವಾಸಿ ಅಶ್ವಿತ್, ಸಹೋದರ ಸೌಬಿತ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಮಂಗಳವಾರ ಮಧ್ಯಾಹ್ನ 2 ಗಂಟೆ ವೇಳೆ ಕುಂಜತ್ತೂರು …

ಮಾದಕ ದ್ರವ್ಯ ಕೈವಶವಿರಿಸಿದ್ದ ಯುವಕ ಸೆರೆ

ಕಾಸರಗೋಡು: ಕಾಸರ ಗೋಡು ಎಕ್ಸೈಸ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿಷ್ಣು ಪ್ರಕಾಶ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯವಾದ 0.43 ಗ್ರಾಮ್ ಮೆಥಾಫಿಟಮಿನ್ ಕೈವಶವಿರಿಸಿಕೊಂಡ ಆರೋ ಪದಂತೆ ನೀರ್ಚಾಲು ಗೋಳಿ ತ್ತಡ್ಕದ ಅಬ್ದುಲ್ ನಾಸರ್ ಜಿ. (31) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಿ ಕೊಂಡಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ನೌಶಾದ್ ಕೆ, ಇತರ ಸಿಬ್ಬಂದಿಗಳಾದ …

ಬೀದಿ ವ್ಯಾಪಾರಿಗಳ ಪುನರ್ವಸತಿಗಾಗಿರುವ ಸ್ಟ್ರೀಟ್ ವೆಂಡರ್ಸ್ ಮಾರ್ಕೆಟ್ ಉದ್ಘಾಟನೆ ಇಂದು

ಕಾಸರಗೋಡು: ಬೀದಿ ವ್ಯಾಪಾರಿಗಳ ಪುನರ್ವಸತಿಗಾಗಿ ಕಾಸರಗೋಡು ನಗರ ಸಭೆ 28 ಲಕ್ಷ ರೂ. ವ್ಯಯಿಸಿ ನಗರದ ಹೊಸ ಬಸ್ ನಿಲ್ದಾಣ ಆವರಣದೊಳಗಾಗಿ ‘ಸ್ಟ್ರೀಟ್ ವೆಂಡರ್ಸ್ ಮಾರ್ಕೆಟ್’ ಎಂಬ ಹೆಸರಲ್ಲಿ ನಿರ್ಮಿಸಲಾಗಿರುವ ಕೇಂದ್ರವನ್ನು ಇಂದು ಸಂಜೆ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸುವರು. ನಗರದ ಎಂ.ಜಿ ರಸ್ತೆಯ ಜನರಲ್ ಆಸ್ಪತ್ರೆ ಪರಿಸರದಿಂದ ಆರಂಭಗೊಂಡು ಮಾರ್ಕೆಟ್ ಜಂಕ್ಷನ್ ತನಕದ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸುತ್ತಿರುವ 28 ಬೀದಿ ವ್ಯಾಪಾರಿಗಳು ಹಾಗೂ ಐದು ಲಾಟರಿ …

ಬಿಜೆಪಿಯಿಂದ ವರ್ಕಾಡಿ ಪಂ. ಕಚೇರಿಗೆ ಪ್ರತಿಭಟನಾ ಮಾರ್ಚ್

ವರ್ಕಾಡಿ:  ಪಂಚಾಯತ್ ಆಡಳಿತ ನಡೆಸುವ ಎಡರಂಗದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು, ದಬ್ಬಾಳಿಕೆ ಪ್ರವೃತ್ತಿ ಕೊನೆಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಯೊಂದಿಗೆ ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪಂಚಾಯತ್‌ಗೆ ಪ್ರತಿಭಟನೆ ಮಾರ್ಚ್ ನಡೆಸಲಾಯಿತು. ಮಜೀರ್ಪಳ್ಳ ಪೇಟೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಮಾರ್ಚ್ ಉದ್ಘಾಟಿಸಿದರು.  ಭಾಸ್ಕರ್ ಪೊಯ್ಯೆ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಕಚೇರಿ ಮುಂದೆ ಮಾರ್ಚ್‌ನ್ನು ಪೊಲೀಸರು ತಡೆದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮುರಳೀಧರ ಯಾದವ್, ಮಣಿಕಂಠ ರೈ, ರಮಣಿ, ಸದಾಶಿವ …

ಕನ್ನಡ ಭಾಷೆಗೆ ಇನ್ನೊಂದು ಪೆಟ್ಟು: ಭೂದಾಖಲೆಗಳ ದತ್ತಾಂಶ ಮಲೆಯಾಳ ಭಾಷೆಗೆ ಮಾತ್ರ ಸೀಮಿತ:  ಸರಕಾರದ ಅಧಿಸೂಚನೆ ಹಿಂತೆಗೆಯಲು ಶಾಸಕ ಎಕೆಎಂ ಮನವಿ

ಕಾಸರಗೋಡು:  ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭೂ ದಾಖಲೆಗಳ ದತ್ತಾಂಶ ಇಂಗ್ಲಿಷ್ ಹೊರತುಪಡಿಸಿ ಮಲೆಯಾಳಂ ನಲ್ಲಿ ಮಾತ್ರ ಮಾಡಬೇಕು ಎಂಬ ನೋಂ ದಾವಣೆ ಇಲಾಖೆಯ ಹೊಸ ಅಧಿಸೂ ಚನೆಯು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಕನ್ನಡಿಗರಿಗೆ ಸಮಸ್ಯೆಯಾಗಲಿದೆಯೆಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದು, ಇದನ್ನು ಹಿಂತೆಗೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಮಂಜೇಶ್ವರ, ಬದಿಯಡ್ಕ, ಕಾಸರಗೋಡು ಸಬ್ ರಿಜಿಸ್ಟ್ರಾರ್ ವ್ಯಾಪ್ತಿ ಯಲ್ಲಿರುವ ಹೆಚ್ಚಿನ ಭೂ ದಾಖಲೆಗಳು ಕನ್ನಡ ಭಾಷೆಯಲ್ಲಿದೆ. ಕನ್ನಡ ಅಲ್ಪ ಸಂಖ್ಯಾತರು ತಮ್ಮ ಭೂ ದಾಖಲೆಗಳ ದಸ್ತಾವೇಜು, ದತ್ತಾಂಶವೆಲ್ಲವನ್ನೂ …

ಸ್ವಾತಂತ್ರ್ಯ ದಿನಾಚರಣೆ ಸಚಿವ ಕೆ.ಕೃಷ್ಣನ್ ಕುಟ್ಟಿಯವರಿಂದ ಧ್ವಜವಂದನೆ ಸ್ವೀಕಾರ

ಕಾಸರಗೋಡು:  ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ  ದಿನಾಚರಣೆ ಕಾರ್ಯಕ್ರಮ ದಲ್ಲಿ ಸಚಿವ ಕೆ. ಕೃಷ್ಣನ್ ಕುಟ್ಟಿ ಧ್ವಜ ವಂದನೆ ಸ್ವೀಕರಿಸುವರು. ಪರೇಡ್‌ನಲ್ಲಿ 19 ತುಕಡಿಗಳು ಭಾಗವಹಿಸುವುದು. ಎ.ಆರ್. ಕ್ಯಾಂಪ್‌ನ ಅಸಿಸ್ಟೆಂಟ್ ಕಮಾಂ ಡೆಂಟ್ ಪರೇಡ್ ನಿಯಂತ್ರಿಸುವರು. ಜಿಲ್ಲಾ  ಸಶಸ್ತ್ರ ರಿಸರ್ವ್ ಪೊಲೀಸ್, ಲೋಕಲ್ ಪೊಲೀಸ್, ಮಹಿಳಾ ಪೊಲೀಸ್, ಎಕ್ಸೈಸ್ ಎಂಬೀ ಪ್ಲಾಟೂನ್‌ಗಳು, ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ನಾಯಮ್ಮಾರ್‌ಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ, ಚೆಮ್ನಾಡ್ ಜಮಾ ಯತ್ ಹೈಯರ್ ಸೆಕೆಂಡರಿ …

ಕೊಲೆಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ಮುಖಂಡನಿಗೆ ಫೋಕ್ಲೋರ್ ಅಕಾಡೆಮಿ ಉಪಾಧ್ಯಕ್ಷ ಪದವಿ: ಕಾಂಗ್ರೆಸ್ ಖಂಡನೆ

ಕಾಸರಗೋಡು:  ಕೊಲೆ  ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಿಪಿಎಂ ಮುಖಂಡನನ್ನು ಫೋಕ್ಲೋರ್ ಅಕಾಡೆಮಿ ಉಪಾಧ್ಯಕ್ಷನನ್ನಾಗಿ ಸರಕಾರ ನೇಮಕಗೊಳಿಸಿರುವುದು  ಕಾನೂನಿನೊಂದಿಗಿರುವ ಸವಾಲು ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್  ಆರೋಪಿಸಿದ್ದಾರೆ. ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್, ಕೃಪೇಶ್‌ರ ಕೊಲೆ ಕೃತ್ಯದಲ್ಲಿ ಶಿಕ್ಷೆಗೊಳಗಾದ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್‌ರನ್ನು ಅಕಾಡೆಮಿಯ ಉಪಾಧ್ಯಕ್ಷರನ್ನಾಗಿ ಸರಕಾರ ನೇಮಕಗೊಳಿಸಿರುವ ಕ್ರಮ ನ್ಯಾಯಾಲಯದೊಂದಿಗಿರುವ ಸವಾಲು ಎಂದು ಡಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ. ಕೊಲೆ ಕೃತ್ಯಗಳಿಗೆ ಪ್ರೋತ್ಸಾಹ ನೀಡುವ, ಸಂರಕ್ಷಣೆ ನೀಡುವ ಕ್ರಮವನ್ನು ಎಡರಂಗ ಸರಕಾರ ನಡೆಸುತ್ತಿದೆ ಎಂದೂ, ಇದು …