ವ್ಯಾಪಾರಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ವ್ಯಾಪಾರಿಯೊಬ್ಬರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಬಳಾಲ್ ಮಂಕಯ ಎಂಬಲ್ಲಿನ ಬೆನ್ನಿ ಜೇಮ್ಸ್ ಯಾನೆ ಚಾಕೋಚ್ಚನ್ (62) ಮೃತ ವ್ಯಕ್ತಿ. ನಿನ್ನೆ ರಾತ್ರಿ ಇವರು ಸಾವು ಸಂಭವಿಸಿದ ವ್ಯಕ್ತಿಯೊಬ್ಬರ ಮನೆಗೆ ತೆರಳಿದ್ದರು. ಅಲ್ಲಿಂದ ಸ್ನೇಹಿತರೊಂ ದಿಗೆ ಮರಳಿದ ಇವರು ಮನೆಗೆ ತಲುಪಿರಲಿ ಲ್ಲವೆನ್ನಲಾಗಿದೆ.  ಇದರಿಂದ ಹುಡು ಕಾಡು ತ್ತಿದ್ದಾಗ ತನ್ನ ಅಂಗಡಿಯ ಮೇಲ್ಛಾವಣಿ ಯಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಕೂಡಲೇ ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬೆನ್ನಿ ಜೇಮ್ಸ್‌ರ ಪತ್ನಿ ಡೈಸಿ ೧೫ …

ಸ್ವಾತಂತ್ರ್ಯೋತ್ಸವಕ್ಕೆ ಮುಂಜಾಗ್ರತೆ : ಜಿಲ್ಲೆಯಾದ್ಯಂತ ಪೊಲೀಸರಿಂದ ಪರಿಶೀಲನೆ; ಸಮುದ್ರದಲ್ಲಿ ವಿಶೇಷ ಕಣ್ಗಾವಲು

ಕಾಸರಗೋಡು: ಸ್ವಾತಂತ್ರ್ಯೋ ತ್ಸವದಂಗವಾಗಿ ಮುಂಜಾಗ್ರತಾ ಕ್ರಮದಂತೆ  ಪೊಲೀಸರು ಜಿಲ್ಲೆಯಾದ್ಯಂತ ವ್ಯಾಪಕ ತಪಾಸಣೆ ಹಾಗೂ ಪರಿಶೀಲನೆ ಆರಂಭಿಸಿದ್ದಾರೆ. ಇದರಂತೆ ಜಿಲ್ಲೆಯ ಎಲ್ಲಾ ವಸತಿಗಳಿಗೆ ಸಾಗಿ ಪೊಲೀಸರು ಪರಿಶೀಲನೆ ನಡೆಸತೊಡಗಿದ್ದಾರೆ. ವಸತಿಗೃಹಗಳಲ್ಲಿ ಶಂಕಾಸ್ಪದ ರೀತಿಯಲ್ಲಿ ತಂಗಿದ್ದವರನ್ನು ಪೊಲೀಸರು ವಶಕ್ಕೆ ತೆಗೆದು ಪ್ರಶ್ನಿಸುತ್ತಿದ್ದಾರೆ. ಮರ್ಮಪ್ರಧಾನ ಕೇಂದ್ರ ಮತ್ತು ಸರಕಾರಿ ಕಚೇರಿಗಳ ಮೇಲೂ ಪೊಲೀಸರು ನಿಗಾ ಇರಿಸತೊಡಗಿದ್ದಾರೆ. ಇದರ ಹೊರತಾಗಿ ಬಸ್ ನಿಲ್ದಾಣಗಳು, ಜನನಿಬಿಡ ಪ್ರದೇಶ, ರೈಲು ನಿಲ್ದಾಣಗಳನ್ನು ಪೊಲೀಸರು ಪದೇ ಪದೇ ಪರಿಶೀಲನೆ ನಡೆಸುತ್ತಿದ್ದಾರೆ.  ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು …

ಪಾಂಡಿ ಅರಣ್ಯ, ಪೆರಿಯಾದಲ್ಲಿ ಪತ್ತೆಯಾದ ಜ್ಯೋಮಿಕುರಿಂಜೆ ಸಸ್ಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕವಾಗುವ ನಿರೀಕ್ಷೆ

ಕಾಸರಗೋಡು: ಜಿಲ್ಲೆಯ ಅಡೂರು ಪಾಂಡಿ, ಪೆರಿಯ ಅರಣ್ಯ ವಲಯಗಳಲ್ಲಿ ಮಾತ್ರವಾಗಿ ಕಂಡುಬರುವ ಅಪೂರ್ವ ಸಸ್ಯಜಾತಿಗೆ ಸೇರಿದ ಜ್ಯೋಮಿಕುರಿಂಜೆ (Strobilanthes Jomyi) ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕವಾಗಬಹುದೆಂದು ಪತ್ತೆಹಚ್ಚಲಾಗಿದೆ. ಬೆಂಗಳೂರು ಕ್ರೈಸ್ಟ್ ವಿ.ವಿಯ ಲೈಫ್ ಸಯನ್ಸ್ ಇಲಾಖೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಅಭಿರಾಮ್ ಸುರೇಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿ ಡಾ| ಫಾದರ್ ಜೋಬಿ ಸೇವಿಯರ್ ಜೊತೆಯಾಗಿ ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಜ್ಯೋಮಿಕುರಿಂಜೆಯ ಸಕ್ರಿಯ ಘಟಕಗಳು ದೊಡ್ಡ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಎಂಬೀ ಕ್ಯಾನ್ಸರ್ …

ತಾತ್ಕಾಲಿಕ ಉಪಕುಲಪತಿ ನೇಮಕಾತಿ: ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ ಸರಕಾರ

ತಿರುವನಂತಪುರ: ತಾಂತ್ರಿಕ ವಿಶ್ವ ವಿದ್ಯಾಲಯ ಮತ್ತು ಡಿಜಿಟಲ್ ವಿಶ್ವ ವಿದ್ಯಾಲಯಗಳಲ್ಲಿ ತಾತ್ಕಾಲಿಕ ಉಪ ಕುಲಪತಿಗಳನ್ನು ನೇಮಿಸಿದ ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದೆ. ಈ ಎರಡು ವಿಶ್ವವಿದ್ಯಾಲಯಗಳಿಗೆ ತಾತ್ಕಾಲಿಕ ಉಪಕುಲಪತಿಗಳನ್ನು ನೇಮಿಸದಂತೆ ರಾಜ್ಯಸರಕಾರ ರಾಜ ಪಾಲರೊಡನೆ ಈ ಹಿಂದೆ ಕೇಳಿಕೊಂ ಡಿತ್ತು. ಅದನ್ನು ತಳ್ಳಿಹಾಕಿದ ರಾಜ್ಯ ಪಾಲರು ಈ ಎರಡು ವಿಶ್ವವಿದ್ಯಾಲ ಯಗಳಿಗೆ ತಾತ್ಕಾಲಿಕ ಉಪಕುಲಪತಿ ಗಳನ್ನು ನೇಮಿಸಿದ್ದು, ಇದು ರಾಜ್ಯ ಸರಕಾರವನ್ನು ಕೆಣಕಿಸುವಂತೆ ಮಾಡಿದೆ. ಆದ್ದರಿಂದ ಹೀಗೆ …

ಬೈಕ್ ಕಳವು: ಆರೋಪಿ ಸೆರೆ

ಕಾಸರಗೋಡು: ಬೈಕ್ ಕಳವು ಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೃಕರಿಪುರ ಪೆಡಗಂ ನಿವಾಸಿ ಇಸ್ಮಾಯಿಲ್ (35)ನನ್ನು ಚಂದೇರ  ಬಂಧಿತ ಆರೋಪಿ. ಕಾರಾಮಲೆಯ ಮುಸಿದ್ ಮುಸ್ತಫ ಎಂಬವರ ಬೈಕ್‌ನ್ನು ಚೆರ್ವತ್ತೂರು ರೈಲ್ವೇ ಮೇಲ್ಸೇ ತುವೆ ಪರಿಸರದಿಂದ ಕದ್ದು ಸಾಗಿಸಿದ ಪ್ರಕರಣಕ್ಕೆ ಸಂ ಬಂಧಿಸಿ ಇಸ್ಮಾಯಿಲ್‌ನನ್ನು ಬಂಧಿಸ ಲಾಗಿದೆ.  ಹೀಗೆ ಕದ್ದ ಬೈಕ್‌ನ್ನು ಗುಜರಿ ಅಂಗಡಿ ಯೊಂದರಿಂದ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಚಿರತೆ ದಾಳಿಗೆ ಬಾಲಕ ಬಲಿ

ತೃಶೂರು: ಏಳರ ಹರೆಯದ ಬಾಲಕ ಚಿರತೆಯ ದಾಳಿಗೆ ಬಲಿಯಾದ ದಾರುಣ ಘಟನೆ ತೃಶೂರು ಬಳಿಯ ವಾಲ್ಪಾರ ಎಂಬಲ್ಲಿ ನಡೆದಿದೆ. ಅಸ್ಸಾಂ ನಿವಾಸಿ ದಂಪತಿಯ ಪುತ್ರ ಮೂರ್ ಬುಜಿ ಎಂಬಾತ ಸಾವಿಗೀಡಾದ ಬಾಲಕನಾಗಿದ್ದಾನೆ. ನಿನ್ನೆ ರಾತ್ರಿ 7.30ರ ವೇಳೆ ಘಟನ ನಡೆದಿದೆ. ಹಾಲು ತರಲು ಅಂಗಡಿಗೆ ಹೋದ ಬಾಲಕ ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡುತ್ತಿದ್ದಾಗ ಚಹಾ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದೇಹದಲ್ಲಿ ಚಿರತೆ ದಾಳಿಯ ಗಾಯಗಳು ಕಂಡುಬಂದಿವೆ. ಇದೇ ಪ್ರದೇಶದಲ್ಲಿ ಒಂದು ತಿಂಗಳ ಹಿಂದೆಯೂ ಚಿರತೆ ನಾಲ್ಕರ …

ಕನ್ಯಪ್ಪಾಡಿ ಬಳಿ ಲಾರಿ ಅಪಘಾತ: ತಪ್ಪಿದ ಭಾರೀ ಅಪಾಯ: ಅಗಲಕಿರಿದಾದ, ಇಕ್ಕಟ್ಟಾದ ರಸ್ತೆಯಲ್ಲಿ ಸಂಚಾರ ಭೀತಿ

ಬದಿಯಡ್ಕ: ಕನ್ಯಪ್ಪಾಡಿ ಸಮೀಪ ಪಡಿಪ್ಪುರೆ ಎಂಬಲ್ಲಿನ ತಿರುವಿ ನಲ್ಲಿ ನಿನ್ನೆ ಮಧ್ಯಾಹ್ನ ಲಾರಿಯೊಂದು ಅಪಘಾತ ಕ್ಕೀಡಾಗಿದ್ದು, ಅದರಲ್ಲಿದ್ದ ವರು ಅದೃಷ್ಟವಶಾತ್ ಅಪಾಯ ದಿಂದ ಪಾರಾಗಿದ್ದಾರೆ. ಕುಂಬಳೆ ಭಾಗದಿಂದ  ಬದಿಯಡ್ಕದತ್ತ ಮೊಟ್ಟೆ ಸಾಗಿಸುತ್ತಿದ್ದ ಲಾರಿ ಪಡಿಪ್ಪುರೆ ತಿರುವಿಗೆ ತಲುಪಿದಾಗ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ರಸ್ತೆ ಬದಿ  ವ್ಯಕ್ತಿಯೊಬ್ಬರ ಕಂಪೌಂಡ್‌ಗೆ ಲಾರಿ ಮಗುಚಿ ನಿಂತಿದ್ದು ಇದರಿಂದ ಭಾರೀ ಅಪಾಯ ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿ ದೆ. ಅಪಘಾತದಿಂದಾಗಿ ಅಲ್ಪಹೊತ್ತು ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಯಿತು. ಈ ಹಿಂದೆಯೂ ಇಲ್ಲಿ …

ಅವ್ಯವಸ್ಥೆಯ ಚರಂಡಿ ನಿರ್ಮಾಣ: ವಾಹನ ಸಂಚಾರಕ್ಕೆ ಸಮಸ್ಯೆ

ಕುಂಬಳೆ: ಅವ್ಯವಸ್ಥೆಯ ಚರಂಡಿ ನಿರ್ಮಾಣದಿಂದಾಗಿ ವಾಹನ ಅಪ ಘಾತಗಳು ಪದೇ ಪದೇ ಸಂಭವಿ ಸುತ್ತಿದೆ.  ಕುಂಬಳೆ ಪೇಟೆಯಿಂದ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ತೆರಳುವ ರಸ್ತೆಯಲ್ಲಿ ಈ ಸಮಸ್ಯೆ ಎದುರಾಗಿದೆ. ರಸ್ತೆ ಬದಿ ಚರಂಡಿ ನಿರ್ಮಿಸಲಾಗಿದ್ದು, ಇನ್ನು ಕೆಲವೆಡೆ ಹಾಗೆಯೇ ಉಳಿದಿದೆ. ಅಲ್ಲದೆ ರಸ್ತೆ ಬದಿ ಹೊಂಡವಾಗಿ ಉಳಿದಿದ್ದು, ಇದರಲ್ಲಿ ವಾಹನಗಳು ಪದೇ ಪದೇ ಸಿಲುಕಿಕೊಳ್ಳುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಾಣಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಮರ ಮುರಿದು ಬಿದ್ದು ಎರಡು ವಾಹನಗಳಿಗೆ ಹಾನಿ

ಉಪ್ಪಳ: ರಸ್ತೆ ಬದಿಯ ಮರ ಮುರಿದು ಬಿದ್ದು ಎರಡು ವಾಹನಗಳು ಹಾನಿಗೀಡಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಹೊಸಂಗಡಿ-ಆನೆಕಲ್ಲು ರಸ್ತೆಯ ಹಲಸಿನಕಟ್ಟೆ ಎಂಬಲ್ಲಿನ ರಸ್ತೆ ಬದಿಯಲ್ಲಿರುವ ಮರದ ರೆಂಬೆ ಮುರಿದು ಬಿದ್ದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಪಿಕಪ್ ಹಾಗೂ ಸ್ಕೂಟರ್‌ನ ಮೇಲೆ ಮರದ ರೆಂಬೆ ಬಿದ್ದಿದ್ದು, ಪ್ರಯಾಣಿಕರು ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಎದುರಾಯಿತು.

ಹಳದಿಕಾಮಾಲೆ ಬಾಧಿಸಿ ಯುವಕ ಮೃತ್ಯು

ಹೊಸದುರ್ಗ: ಹಳದಿಕಾಮಾಲೆ ಬಾಧಿಸಿ ಯುವಕ ಮೃತಪಟ್ಟನು. ಪಾಣತ್ತೂರು ಮೈಲಾಟಿಯ ದಿ| ದಾಸ್ ಎಂಬವರ ಪುತ್ರ ಸುರಾಜ್ (47) ಮೃತಪಟ್ಟ ವ್ಯಕ್ತಿ. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು.  ಮೃತರು ತಾಯಿ ಸುಮತಿ, ಪತ್ನಿ ಸೀಮ, ಮಕ್ಕಳಾದ ಶ್ರೀರಾಜ್, ಶ್ರೀನಂದ, ಸಹೋದರ ಸುರೇಶ್, ಸಹೋದರಿ ಸಿಂಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.