ಪ್ರೇಮಿಸಿ ಮತಾಂತರಕ್ಕೆ ಒತ್ತಾಯಿಸಿ ಕಿರುಕುಳ: ಯುವತಿ ಆತ್ಮಹತ್ಯೆ; ಪ್ರಿಯತಮನ ಬಂಧನ

ಕೋದಮಂಗಲ: ಮತಾಂತರಕ್ಕೆ ಒತ್ತಾಯಿಸಿ  ಪ್ರಿಯತಮ ನೀಡಿದ ಕಿರುಕುಳ ಸಹಿಸಲಾಗದೆ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಕೋದಮಂಗಲದಲ್ಲಿ ನಡೆದಿದೆ. ಕೋದಮಂಗಲ ಕರುಕಡಿ ಕಡಿಕುಮ್ಮಲ್‌ನ ದಿ| ಎಲ್ದೋಸ್-ಬಿಂದು ದಂಪತಿ ಪುತ್ರ ಟಿಟಿಸಿ ವಿದ್ಯಾ ರ್ಥಿನಿ ಸೋನಾ (23) ಎಂಬಾಕೆ ಆತ್ಮಹತ್ಯೆಗೈದ ಯುವತಿಯಾಗಿದ್ದಾಳೆ. ಇದಕ್ಕೆ ಸಂಬಂಧಿಸಿ ಆಕೆಯ ಪ್ರಿಯತಮ ಅಲಪ್ಪಿ ಅಲಂಙಾಡ್ ಪದಿನಾಯಿರ ಕುಳಂ ತೋಪಿನ್ ತರಂಬಿಲ್‌ನ ರಮೀಸ್ (24) ಎಂಬಾತನನ್ನು ಪೊಲೀಸರು ಬಂಧಿಸಿ  ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವಾಟುಪುಳದ ಸರಕಾರಿ ಟಿಟಿಸಿ ವಿದ್ಯಾರ್ಥಿನಿಯಾಗಿರುವ ಸೋನಾಳನ್ನು …

ಧನಸಹಾಯ ವಿತರಣೆ ಆನ್ಲೈನ್ ಮೂಲಕ ಶೀಘ್ರ ಜ್ಯಾರಿ- ಸಹಕಾರಿ ಸಚಿವ ವಿ.ಎನ್. ವಾಸವನ್

ಕಾಸರಗೋಡು: ಧನಸಹಾಯ ವಿತರಣೆ ಚಟುವಟಿಕೆಗಳನ್ನು ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆಯ ಮೂಲಕ ಜ್ಯಾರಿಗೊಳಿಸಲಾಗುವುದೆಂದು ಅದರಿಂದಾಗಿ ದೂರು ಕಡಿಮೆ ಮಾಡಲು, ಶೀಘ್ರದಲ್ಲೇ ಧನ ಸಹಾಯವ ವಿತರಿಸಲು ಸಾಧ್ಯವಾಗಲಿದೆ ಎಂದು ಸಹಕಾರಿ ಬಂದರು, ದೇವಸ್ವಂ ಇಲಾಖೆ ಸಚಿವ ವಿ.ಎನ್. ವಾಸವನ್ ನುಡಿದರು. ಕಾಞಂಗಾಡ್ ವ್ಯಾಪಾರ ಭವನದಲ್ಲಿ ಕೇರಳ ಸಹಕಾರಿ ಅಭಿವೃದ್ಧಿ ಕ್ಷೇಮನಿಧಿ ಬೋರ್ಡ್ ಕಡತ ತೀರ್ಪು ಅದಾಲತ್ ಕಾರ್ಯಕ್ರಮದಲ್ಲಿ ಧನ ಸಹಾಯ ವಿತರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಅಧ್ಯ ಯನಕ್ಕಾಗಿ ಮೊಬೈಲ್ ಫೋನ್ಗಳನ್ನು ಖರೀದಿಸಲು ಸಹಾಯ ನೀಡಿದ …

ಬೀದಿ ಬದಿ ನಾಯಿಗಳ ಗುಂಪು ಆತಂಕಗೊಂಡ ಜನತೆ

ಉಪ್ಪಳ: ಬೀದಿ ನಾಯಿಗಳ ವಿಷಯದಲ್ಲಿ ಸುಪ್ರೀಂಕೋರ್ಟ್ ನಿರ್ಣಾಯಕ ಆದೇಶ ನೀಡಿದ ಹಿನ್ನೆಯಲ್ಲಿ ದೇಶದಾದ್ಯಂತ ಬೀದಿ ನಾಯಿಗಳ ಆಕ್ರಮಣದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಉಪ್ಪಳ, ಉಪ್ಪಳ ಗೇಟ್, ಭಗವತೀ ಗೇಟ್, ವಾಮಂಜೂರು ಚೆಕ್‌ಪೋಸ್ಟ್, ಹೊಸಂಗಡಿ ಮೊದಲಾದ ರಾಷ್ಟಿçÃಯ ಹೆದ್ದಾರಿ ಹಾಗೂ ಒಳ ಪ್ರದೇಶಗಳಲ್ಲಿಯೂ ಬೀದಿ ನಾಯಿಗಳು ವ್ಯಾಪಕಗೊಂಡಿದೆ. ಇದರಿಂದ ಶಾಲಾ ಮಕ್ಕಳು ಸಹಿತ ಜನರ ಸಂಚಾರಕ್ಕೆ ಆತಂಕ ಉಂಟಾಗಿರುವುದಾಗಿ ದೂರಲಾಗಿದೆ. ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಹೆದ್ದಾರಿಯಲ್ಲಿ 10ಕ್ಕಿಂತ ಅಧಿಕ ಬೀದಿ ನಾಯಿಗಳ ಗುಂಪು ಸವಾರಿ …

ಉಳಿಯತ್ತಡ್ಕದಲ್ಲಿ ಮೊಗೇರ ಆಟಿದ ಕೂಟ

ಮಧೂರು: ಮೊಗೇರ ಸರ್ವೀಸ್ ಸೊಸೈಟಿಯ ರಾಜ್ಯಸಮಿತಿ, ಜಿಲ್ಲಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಉಳಿಯತ್ತಡ್ಕದಲ್ಲಿ ಮೊಗೇರ ಆಟಿದ ಕೂಟ ಜರಗಿತು. ಮೊಗೇರ ಸರ್ವೀಸ್ ಸೊಸೈಟಿಯ ಮುಖಂಡರು, ಸಮುದಾಯದ ಹಿರಿಯರು ಮೂಲಸ್ಥಾನ ಪರಿಸರದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಅಟಲ್‌ಜಿ ಸಭಾಂಗಣ ದಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಸಂಘಟನೆಯ ಅಧ್ಯಕ್ಷ ಚಂದ್ರ ಸಿ.ಬಿ. ಅಡೂರು ಅಧ್ಯಕ್ಷತೆ ವಹಿಸಿದ್ದು, ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಉದ್ಘಾಟಿಸಿದರು. ಮಧೂರು ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ ಮಾತನಾಡಿದರು. ರಾಜ್ಯ ಮೊಗೇರ ಸರ್ವೀಸ್ ಸೊಸೈಟಿ …

ಹಿರಿಯ ಕೃಷಿಕ ನಿಧನ

ಮಂಗಲ್ಪಾಡಿ: ಪ್ರತಾಪನಗರ ತಿಂಬರ ನಿವಾಸಿ ಹಿರಿಯ ಕೃಷಿಕ ನಾರಾಯಣ ಹೊಳ್ಳ (88) ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ರವಿಶಂಕರ ಹೊಳ್ಳ, ರಾಘವೇಂದ್ರ ಹೊಳ್ಳ, ನಾಗರಾಜ ಹೊಳ್ಳ, ಗುರುಪ್ರಸಾದ್ ಹೊಳ್ಳ, ಸೊಸೆಯಂದಿರಾದ ಗೀತಾ, ದೀಪಿಕಾ, ಸಂಗೀತ, ಸಹೋದರಿಯರಾದ ವಾಗೀಶ್ವರೀ, ಗೌರಿ, ಜಾಹ್ನವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಗುಲಾಬಿ ಹೊಳ್ಳ, ಸಹೋದರ ರಾಮಕೃಷ್ಣ ಹೊಳ್ಳ, ಸಹೋದರಿ ಮಹಾಲಕ್ಷಿ÷್ಮÃ ಈ ಹಿಂದೆ ನಿಧನರಾಗಿದ್ದಾರೆ.

ಬ್ಯಾಂಕ್ ರಸ್ತೆ ಶೋಚನೀಯಾವಸ್ಥೆ: ಬಿಎಂಎಸ್‌ನಿಂದ ನಾಳೆ ದಿಗ್ಬಂಧನ ಮುಷ್ಕರ

ಕಾಸರಗೋಡು: ನಗರದ ಹೃದಯಭಾಗದಲ್ಲಿ ಸಾಗುವ, ಕಾಸರಗೋಡು ನಗರವನ್ನು ರೈಲ್ವೇ ನಿಲ್ದಾಣಕ್ಕೆ ಜೋಡಿಸುವ ಬ್ಯಾಂಕ್ ರಸ್ತೆಯ ಶೋಚನೀಯಾವಸ್ಥೆಗೆ ಪರಿಹಾರ ಕೈಗೊಳ್ಳದ ಅಧಿಕಾರಿಗಳ ಉದಾಸೀನತೆ ವಿರುದ್ಧ  ತೀವ್ರ ಹೋರಾಟ ನಡೆಸಲು ನಿನ್ನೆ ಜರಗಿದ ಬಿಎಂಎಸ್ ಕಾಸರಗೋಡು ವಲಯ ಸಮಿತಿ ಸಭೆ ತೀರ್ಮಾನಿಸಿದೆ. ನಾಳೆ 11 ಗಂಟೆಗೆ ಬ್ಯಾಂಕ್ ರಸ್ತೆಯನ್ನು ದಿಗ್ಬಂಧನಗೊಳಿಸಿ ಮುಷ್ಕರ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಲಯ ಅಧ್ಯಕ್ಷ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಜಿಲ್ಲಾ ಸಮಿತಿ ಸದಸ್ಯ ವಿಶ್ವನಾಥ ಶೆಟ್ಟಿ, ಕಾಸರಗೋಡು …

ಕೂಲಿ ಕಾರ್ಮಿಕ ನಿಧನ

ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ಕೂಲಿ ಕಾರ್ಮಿಕ ಸುಬ್ಬಯ್ಯ ಶೆಟ್ಟಿ (73) ನಿಧನ ಹೊಂದಿದರು. ಮೃತರು ಪತ್ನಿ ಕಮಲ, ಮಕ್ಕಳಾದ ದಿನೇಶ, ಸುರೇಶ, ವೀಣಾ, ವಿಶಾಲಾಕ್ಷಿ, ಸೊಸೆಯಂದಿರಾದ ದಿವ್ಯ, ವಿಶಾಲ, ಅಳಿಯಂದಿರಾದ ದೇವಾನಂದ, ಬಾಲಕೃಷ್ಣ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ನೇತಾರರು, ಕಾರ್ಯಕರ್ತರ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.

ಪ್ಲಾಸ್ಟಿಕ್ ರಾಷ್ಟ್ರಧ್ವಜ ನಿಷೇಧ

ಕಾಸರಗೋಡು: ಸ್ವಾತಂತ್ರ್ಯೋ ತ್ಸವ ಆಚರಣೆಗೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಬಳಸುವುದು ಕಾನೂನು ವಿರುದ್ಧವಾಗಿದೆಯೆಂದು ಜಿಲ್ಲಾ ಶುಚಿತ್ವ ಮಿಷನ್ ತಿಳಿಸಿದೆ. ಆದ್ದರಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಬಳಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್ ಧ್ವಜ ತಯಾರಿ, ಮಾರಾಟ, ವಿತರಣೆ, ಪ್ರದರ್ಶನ ಪತ್ತೆಯಾದಲ್ಲಿ ದಂಡ ಸಹಿತ ಕಾನೂನು ಕ್ರಮ ಕೈಗೊಳ್ಳುವುದಾಗಿ ಶುಚಿತ್ವ ಮಿಷನ್ ಕೋ-ಆರ್ಡಿನೇಟರ್ ಪಿ. ಜಯನ್ ತಿಳಿಸಿದ್ದಾರೆ.

ಸ್ವತಂತ್ರ ಕರ್ಷಕ ಸಂಘದಿಂದ ವರ್ಕಾಡಿ ಕೃಷಿ ಭವನ ಮುಂದೆ ಧರಣಿ

ವರ್ಕಾಡಿ: ಸ್ವತಂತ್ರ ಕರ್ಷಕ ಸಂಘದ ವರ್ಕಾಡಿ ಪಂಚಾಯತ್ ಸಮಿತಿಯಿಂದ ನಿನ್ನೆ ವರ್ಕಾಡಿ ಕೃಷಿಭವನದ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಜರಗಿತು. ಕೃಷಿ ನಾಶ ಮಾಡುತ್ತಿರುವ ಕಾಡು ಪ್ರಾಣಿಗಳ ಉಪಟಳಕ್ಕೆ ಸರಕಾರ ಶಾಶ್ವತ ಪರಿಹಾರ ಮಾಡಬೇಕು. ಈ ವರ್ಷದ ವಿಪರೀತ ಮಳೆಯಿಂದಾಗಿ ನಾಶ ನಷ್ಟ ಸಂಭವಿಸಿದ ಕೃಷಿಕರಿಗೆ ನಷ್ಟ ಪರಿಹಾರ ಒದಗಿಸಬೇಕು. ನಷ್ಟ ಪರಿಹಾರ ಮೊತ್ತವನ್ನು ಸಂದರ್ಭಚಿತವಾಗಿ ಹೆಚ್ಚಿಸಬೇಕು, ಕೃಷಿಕರ ಪಿಂಚಣಿ ೧೦,೦೦೦ರೂ.ಗೆ ಏರಿಸಬೇಕು, ಹೈನುಗಾರಿಕೆ ಕೃಷಿಕರ ಸಂಕಷ್ಟಗಳನ್ನು ಪರಿಹರಿಸಬೇಕು, ರಸಗೊಬ್ಬರ ಕ್ರಯಕಡಿತ ಗೊಳಿಸಬೇಕು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ …

ಮಜೀರ್ಪಳ್ಳದಲ್ಲಿ ಅಗ್ನಿ ಬ್ರಿಗೇಡ್‌ನಿಂದ ರಕ್ತದಾನ ಶಿಬಿರ

ವರ್ಕಾಡಿ: ಮಜೀರ್ಪಳ್ಳ ಅಗ್ನಿ ಬ್ರಿಗೇಡ್, ಮಂಗಳೂರು ಕೆಎಂಸಿ ಬ್ಲಡ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು. ಕೋಳ್ಯೂರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬ್ರಿಗೇಡ್ ಅಧ್ಯಕ್ಷ ಸೋಮಪ್ಪ ಪಿ. ಅಧ್ಯಕ್ಷತೆ ವಹಿಸಿದರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಯಾಗಿದ್ದರು. ನಟ ಅರವಿಂದ ಬೋಳಾರ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಶೆಟ್ಟಿ, ವರ್ಕಾಡಿ ಪಂ. ಅಧ್ಯಕ್ಷೆ ಭಾರತಿ ಎಸ್, ಬಾಬು ಕುಳೂರು, ನಾರಾಯಣ …