100 ಕೋಟಿ ರೂ. ವೆಚ್ಚದಲ್ಲಿ ಸಿನೆಮಾ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು- ಸಚಿವ

ತಿರುವನಂತಪುರ: ನೂರು ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಸಿನೆಮಾ ಕಾಂಪ್ಲೆಕ್ಸ್ ನಿರ್ಮಿಸಲಾ ಗುವುದೆಂದು ವಿತ್ತ ಸಚಿವ ಕೆ.ಎನ್. ಬಾಲಗೋಪಾಲನ್ ಹೇಳಿದ್ದಾರೆ. ರಾಜಧಾನಿಯಾದ ತಿರುವನಂತಪುರ ದಲ್ಲಿ ಇದನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇತಿಹಾಸದಲ್ಲಿ ಸ್ಥಾನ ಪಡೆಯುವ ಹಲವು ಹೊಸತನಗಳನ್ನು ಸೃಷ್ಟಿಸುವ ರಾಜ್ಯವಾಗಿದೆ ಕೇರಳ. ಸಿನೆಮಾದಲ್ಲಿ ಹೆಚ್ಚಿನ ತಾರೆಗಳು ತಮ್ಮ ಸ್ವಂತಿಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಆದರೆ ಅದಕ್ಕೆ ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದನ್ನು ನಿಯಂತ್ರಿಸುವ ಹಾಗಿದ್ದಲ್ಲಿ ಅದಕ್ಕೆ ಸರಕಾರ ಅಗತ್ಯದ ಸಹಾಯ ನೀಡಲಿದೆ ಎಂದೂ ಸಚಿವರು ಹೇಳಿದ್ದಾರೆ.

ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ನೇತೃತ್ವದಲ್ಲಿ ಪ್ರಶಾಂತ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಮೀಯಪದವು: ದಿ| ಅಧ್ಯಾಪಕ ಪ್ರಶಾಂತ್ ರೈ ಅವರ ಸ್ಮರಣಾರ್ಥ ಅಧ್ಯಾಪಕರಿಗಾಗಿ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಉದ್ಘಾಟಿಸಿ ದರು. ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಸಂಜೀವ ಸಿ.ಎಚ್. ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷ ಸದಾಶಿವ ಪೊಯ್ಯೆ ಪ್ರಶಾಂತ್ ರೈಯವರ ಸಂಸ್ಮರಣೆ ನಡೆಸಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬಿ, ಜೊತೆ ಕಾರ್ಯದರ್ಶಿ ರಘುವೀರ್, ಉಪಾಧ್ಯಕ್ಷ ಉದಯ ಸಾರಂಗ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ವಸಂತ ಎ. ಸ್ವಾಗತಿಸಿ, ಅಧ್ಯಾಪಕ ಸುನಿಲ್ ಕುಮಾರ್ ಎಂ. ವಂದಿಸಿದರು. …