ವಸತಿಗೃಹಕ್ಕೆ ಪೊಲೀಸ್ ದಾಳಿ: ಎಂಡಿಎಂಎ ಸಹಿತ ಯುವತಿ-ಯುವಕ ಸೆರೆ

ಕಣ್ಣೂರು: ಕಣ್ಣೂರು ತಾವಕ್ಕರ ವಸತಿ ಗೃಹದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಸಹಿತ ಯುವತಿ-ಯುವಕನನ್ನು ಬಂಧಿಸಿದ್ದಾರೆ. ಕಣ್ಣೂರು ತೈಯ್ಯಿಲ್ ಮರಕ್ಕಾರ್‌ಕಂಡಿ ಚೆರಿಯನಾಡಿ ಹೌಸ್‌ನ ಸಿ.ಎಚ್. ಆರಿಫ್ (41), ಮರಕ್ಕಾರ್‌ಕಂಡಿ ಪಡಿಂಞ್ಞಾರ್ ವೀಟಿಲ್ ಕೆ. ಅಪರ್ಣಾ ಅನೀಶ್ (25) ಎಂಬಿವರನ್ನು ಕಣ್ಣೂರು ಟೌನ್ ಎಸ್‌ಐ ವಿವಿ ದೀಪ್ತಿ ಹಾಗೂ ತಂಡ ಸೆರೆಹಿಡಿದಿದೆ.  ತಾವಕ್ಕರ ಸ್ಕೈ ಪ್ಯಾಲೇಸ್ ಹೋಟೆಲ್‌ನ 306ನೇ ನಂಬ್ರ ಕೊಠಡಿಯಲ್ಲಿ ನಿನ್ನೆ ಸಂಜೆ ನಡೆಸಿದ ದಾಳಿಯಲ್ಲಿ ಇವರಿಬ್ಬರನ್ನು ಸೆರೆಹಿಡಿಯಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಎಸ್‌ಐ ಹಾಗೂ …

3 ವರ್ಷದ ಪುತ್ರನೊಂದಿಗೆ ಯುವತಿ ನಾಪತ್ತೆ: ಕೇಸು ದಾಖಲು

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ  ಯುವತಿ ಹಾಗೂ ಪುತ್ರ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಚಟ್ಟಂಚಾಲ್ ತೆಕ್ಕಿಲ್ ನಿವಾಸಿ ಸುವರ್ಣ (35) ಹಾಗೂ ಪುತ್ರ ಅದ್ವೈತ್ ವಿಷ್ಣು (3) ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿರುವುದಾಗಿ ಪತಿ ಪಾದೂರು ಹೌಸ್ ನಿವಾಸಿ ಸೋಮಶೇಖರ ಭಟ್ ದೂರು ನೀಡಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಿ ಮೇಲ್ಪರಂಬ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂಬಂಧಿಕನ ಮನೆಗೆ ತಲುಪಿದ 13ರ ಹರೆಯದ ಬಾಲಕನಿಗೆ 16ರ ಬಾಲಕನಿಂದ ಸಲಿಂಗರತಿ: ಪೋಕ್ಸೋ ಕೇಸು ದಾಖಲು

ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿ ಕರೋರ್ವರ ಮನೆಗೆ ರಜೆಯಲ್ಲಿ ತಲುಪಿದ 13ರ ಹರೆಯದ ಬಾಲಕ ನಿಗೆ ಸಲಿಂಗರತಿ ದೌರ್ಜನ್ಯಗೈದಿ ರುವುದಾಗಿ ದೂರಲಾಗಿದೆ. ಘಟನೆಯಲ್ಲಿ ನಿಕಟ ಸಂಬಂ ಧಿಕನಾದ 16ರ ಬಾಲಕನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. ಕೊಯಿಲಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂಲತಃ ದೂರುದಾರನ ಮನೆಯಿದೆ.  ಕಳೆದ ರಜೆ ಸಮಯದಲ್ಲಿ ಆದೂರಿಗೆ ತಲುಪಿದ ಈತ ಸಂಬಂಧಿಕನಾದ ೧೬ರ ಬಾಲಕನ ಜೊತೆ ನಿದ್ರಿಸಿದ್ದನೆನ್ನ ಲಾಗಿದೆ. ಈ ಸಮ ಯದಲ್ಲಿ ಸಲಿಂಗರ ತಿಗೈದಿರುವುದಾಗಿ 13ರ ಹರೆಯದ …

ತ್ರಿಸ್ತರ ಚುನಾವಣೆ: ಇಲೆಕ್ಟ್ರೋನಿಕ್ ಮತ ಯಂತ್ರಗಳನ್ನು ಭದ್ರತಾ ಕೊಠಡಿಗೆ ಸ್ಥಳಾಂತರಕ್ಕೆ ಚಾಲನೆ

ಕಾಸರಗೋಡು: ಜಿಲ್ಲಾ ಚುನಾ ವಣೆ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟರೇಟ್‌ನಲ್ಲಿ ರಾಜ್ಯ ಚುನಾವಣೆ ಆಯೋಗದ ವೇರ್‌ಹೌಸ್ ತೆರೆದು ಸ್ಥಳೀಯಾ ಡಳಿತ ಸಂಸ್ಥೆಯ ಚುನಾವಣೆಗಿರುವ ಇಲೆಕ್ಟ್ರೋನಿಕ್ ಮತದಾನ ಯಂತ್ರ ಗಳ ಸಹಿತದ ಪೋಲಿಂಗ್ ಸಾಮಗ್ರಿ ಗಳನ್ನು ಭದ್ರತಾ ಕೊಠಡಿಯಲ್ಲಿರಿಸುವ ಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವೇರ್‌ಹೌಸ್ ತೆರೆಯಲಾಗಿದೆ. ಚುನಾವಣಾ ಡೆಪ್ಯುಟಿ ಕಲೆಸ್ಟರ್ ಗೋಪ ಕುಮಾರ್, ಇವಿಎಂ ನೋಡಲ್ ಆಫೀಸರ್ ಲಿಬು ಎಸ್. ಲಾರೆನ್ಸ್, ಜ್ಯೂನಿಯರ್ ಸುಪರಿಂಟೆಂಡೆಂಟ್ ರಾಜೀವ್, ಸ್ಥಳೀಯಾಡಳಿತ …

ಶಾಸಕ ರಾಹುಲ್ ವಿರುದ್ಧ ದೂರು ನೀಡಿದ ಯುವತಿ ಆತ್ಮಹತ್ಯೆಗೆತ್ನ: . ತಲೆಮರೆಸಿಕೊಂಡಿರುವ ಶಾಸಕನಿಗಾಗಿ ಕಾಸರಗೋಡು ಸೇರಿ ರಾಜ್ಯಾದ್ಯಂತ ಶೋಧ

ತಿರುವನಂತಪುರ: ಯೂತ್ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ, ಪಾಲ ಕ್ಕಾಡ್ ಶಾಸಕ ರಾಹುಲ್ ಮಾಂಕೂಟ ತ್ತಿಲ್ ವಿರುದ್ಧ ಲೈಂಗಿಕ ಕಿರುಕುಳ ಆರೋ ಪಿಸಿ ದೂರು ನೀಡಿದ ತಿರುವನಂತಪುರ  ಪರಿಸರ ನಿವಾಸಿಯಾಗಿರುವ  ಸಂತ್ರಸ್ತೆ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಈಗ ಹೊರಬಂದಿದೆ. ಈಕೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿರು ವುದಾ ಗಿಯೂ ಮಾಹಿತಿ ಲಭಿಸಿದೆ.  ಲೈಂಗಿಕ ಕಿರುಕುಳಕ್ಕೊಳಗಾದ ಪರಿಣಾಮ ಗರ್ಭಿಣಿಯಾದ  ಆ ಯುವತಿಯನ್ನು ಬಲವಂತವಾಗಿ ಗರ್ಭಪಾತಕ್ಕೊಳ ಪಡಿಸಿದ ಬೆನ್ನಲ್ಲೇ ಆಕೆ   ಅಮಿತ ಮಾತ್ರೆ ಸೇವಿಸಿ  ಆತ್ಮಹತ್ಯೆಗೆ ಯತ್ನಿಸಿ ನಂತರ ದಿನಗಳ …

ಕಣ್ಣೂರು ಸೆಂಟ್ರಲ್ ಜೈಲ್‌ನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿ ಆತ್ಮಹತ್ಯೆ

ಕಣ್ಣೂರು: ಸೆಂಟ್ರಲ್ ಜೈಲ್‌ನಲ್ಲಿ ರಿಮಾಂಡ್‌ನಲ್ಲಿದ್ದ ಆರೋಪಿಯನ್ನು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕತ್ತಿಯಿಂದ ಗಂಟಲಿಗೆ ಇರಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಯನಾಡ್ ಕೇನಿಚ್ಚಿರ ನಿವಾಸಿ ಜಿಲ್ಸನ್ ಮೃತಪಟ್ಟ ವ್ಯಕ್ತಿ. ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜಿಲ್ಸನ್ ಜೈಲಿನಲ್ಲಿದ್ದನು. ಈ ಮೊದಲು ಕೂಡಾ ಜಿಲ್ಸನ್ ಆತ್ಮಹತ್ಯಾಯತ್ನ ನಡೆಸಿದ್ದನು.  ಆ ಬಳಿಕ ಕೌನ್ಸಿಲಿಂಗ್ ಕೂಡಾ ನೀಡಲಾಗಿತ್ತು. ಕಳೆದ ಐದು ದಿನದಿಂದ ಈತ ಜೈಲಿನಲ್ಲಿದ್ದು, ಪತ್ನಿಯ ಸಾವಿನ ಬಳಿಕ ಮಾನಸಿಕ ಅಸ್ವಸ್ಥನಾಗಿ ದ್ದನೆನ್ನಲಾಗಿದೆ. ನಿನ್ನೆ ರಾತ್ರಿ ಬೆಡ್‌ಶೀಟನ್ನು ಮೈಮೇಲೆ ಹೊದ್ದುಕೊಂಡು ಕತ್ತಿಯಿಂದ …

ಕರಂದಕ್ಕಾಡು ರೈಲ್ವೇ ನಿಲ್ದಾಣ ರಸ್ತೆ ದುರಸ್ತಿಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ : ಇಂದಿನಿಂದ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದರೂ ಚಾಲನೆ ದೊರೆತಿಲ್ಲ

ಕಾಸರಗೋಡು: ನಗರದ ಶೋಚನೀಯಗೊಂಡ ರಸ್ತೆಗಳನ್ನು ಡಾಮರೀಕರಣ ನಡೆಸಿ ಸಂಚಾರಯೋಗ್ಯ ಗೊಳಿಸದ ಹಿನ್ನೆಲೆಯಲ್ಲಿ ಕಾಸರಗೋಡು ತಾಲೂಕು ಬಸ್ ಆಪರೇಟರ್ಸ್ ಫೆಡರೇಶನ್ ನಿನ್ನೆಯಿಂದ ಆರಂಭಿಸಲಿದ್ದ ಮುಷ್ಕರವನ್ನು ಹಿಂತೆಗೆದಿದ್ದರೂ ಇಂದಿನಿಂದ ರಸ್ತೆ ದುರಸ್ತಿಗೊಳಿಸುವ ಭರವಸೆ ಹುಸಿಯಾಗಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದಿನಿಂದಕರಂದಕ್ಕಾಡು- ರೈಲ್ವೇ ನಿಲ್ದಾಣ ರಸ್ತೆಯನ್ನು ಡಾರೀಕರಣಗೊಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಕಾಸರಗೋಡು ಹಳೆ ಬಸ್ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳ ಸಂಚಾರ ಮೊಟಕುಗೊಳಿಸುವ ಬಗ್ಗೆ ಆರ್‌ಡಿಒಗೆ ಮನವಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ಮಾತುಕತೆಯಲ್ಲಿ …

ಖಾಸಗಿ ಮೊಬೈಲ್ ಕಂಪೆನಿಯ ಕೇಬಲ್ ಸ್ಥಾಪಿಸಲು ತೆಗೆದ ಹೊಂಡದಿಂದ ಅಪಾಯ ಆಹ್ವಾನ

ಕಾಸರಗೋಡು: ಕರಂದಕ್ಕಾಡ್‌ನಿಂದ ಆರಂಭಿಸಿ ರೈಲ್ವೇ ನಿಲ್ದಾಣದವರೆಗಿನ ರಸ್ತೆ ಸಂಚಾರ ಅಯೋಗ್ಯಗೊಂಡಿರುವ ಮಧ್ಯೆ ಈ ರಸ್ತೆಯಲ್ಲಿ ಖಾಸಗಿ ಮೊಬೈಲ್ ಸಂಸ್ಥೆಯೊಂದು ತೋಡಿದ ಹೊಂಡ ಅಪಾಯ ಆಹ್ವಾನಿಸುತ್ತಿದೆ. ಕೇಬಲ್ ಸ್ಥಾಪಿಸಲೆಂದು ರಸ್ತೆ ಮಧ್ಯೆ ಹೊಂಡ ತೆಗೆದಿದ್ದು, ಇದನ್ನು ಮುಚ್ಚಲು ಕಳಪೆ ಕಾಮಗಾರಿ ನಡೆಸಿರುವುದೇ ಹೊಂಡ ಬಾಯ್ದೆರೆದು ನಿಂತಿರಲು ಕಾರಣವೆನ್ನಲಾಗಿದೆ. ಈ ರಸ್ತೆಯ ತಾಲೂಕು ಆಫೀಸ್ ಮುಂಭಾಗ ಟ್ರಾಫಿಕ್ ಜಂಕ್ಷನ್ ಸಮೀಪ ಬಾಯ್ದೆರೆದ ಈ ಹೊಂಡವಿದ್ದು, ವಾಹನ ಸವಾರರಿಗೆ ಬೆದರಿಕೆಯೊಡ್ಡುತ್ತಿದೆ.  ದಿನಂಪ್ರತಿ ಶಾಲಾ ಮಕ್ಕಳು ಸಹಿತ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಅಪಾಯಕ್ಕೆ …

ಕುಂಬಳೆಯಲ್ಲಿ ಜಯಕೃಷ್ಣ ಮಾಸ್ತರ್ ಬಲಿದಾನ ದಿನಾಚರಣೆ

ಕುಂಬಳೆ: ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ದಿ| ಜಯಕೃಷ್ಣ ಮಾಸ್ತರ್ ಅವರ ೨೭ನೇ ಬಲಿದಾನ ದಿನವನ್ನು ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಆಚರಿಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿ ಮಾತನಾಡಿದರು. ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು. ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ, ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುತ್ತಿರುವ ಬಿ. ವಿಕ್ರಂ …

ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹೃದಯದಲ್ಲಿ ಪೋಣಿಸಿದಷ್ಟು ಭಾಷೆಯ ಪ್ರೌಢತೆ ಪ್ರಜ್ವಲಿಸುತ್ತದೆ- ಬಿ.ಎಂ. ಹನೀಫ್

ಪೈವಳಿಕೆ: ಕನ್ನಡ ಭಾಷೆ, ಸಂಸ್ಕೃತಿಯ ಪ್ರೀತಿ ಹೃದಯದಲ್ಲಿ ಪೋಣಿಸಿದಷ್ಟು ಭಾಷೆಯ ಪ್ರೌಢತೆ ಪ್ರಜ್ವಲಿಸುತ್ತದೆ. ಹಡಿನಾಡು, ಹೊರ ನಾಡುಗಳಲ್ಲಿ ಇದನ್ನು ಕಾಣಬಹುದು ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಅಭಿಪ್ರಾಯ ವ್ಯಕ್ತಪಡಿಸಿದರು.ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ಪೈವಳಿಕೆ ಕಾಯರ್‌ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾದೇಶಿಕ ಭಾಷಾ ವೈವಿಧ್ಯತೆಯಿಂದ ಕನ್ನಡ ಭಾಷೆ ಉಳಿದಿದೆ. ಈ ನಿಟ್ಟಿನಲ್ಲಿ …