ಕಾಸರಗೋಡಿನ ಹಿಂದುಳಿದ ಅವಸ್ಥೆಗೆ ಎಡ-ಬಲ ಒಕ್ಕೂಟಗಳು ಕಾರಣ- ನಳಿನ್ ಕುಮಾರ್ ಕಟೀಲ್

ಪೈವಳಿಕೆ: ಗಡಿ ಜಿಲ್ಲೆಗಳಾದ  ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಮಧ್ಯೆ ಅಭಿವೃದ್ಧಿಯಲ್ಲಿ ಭಾರೀ ಅಂತರವಿದೆ ಎಂದು, ಜಿಲ್ಲೆಯ ಹಿಂದುಳಿದಾವಸ್ಥೆಗೆ ಎಡ-ಐಕ್ಯರಂಗದ ಒಕ್ಕೂಟಗಳು ಕಾರಣ ವೆಂದು ನಳಿನ್ ಕುಮಾರ್ ಕಟೀಲ್ ನುಡಿದರು. ಪೈವಳಿಕೆ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಜಯಕೃಷ್ಣನ್ ಮಾಸ್ತರ್ ಬಲಿದಾನ ದಿನಾಚರಣೆಯನ್ನು ಕಾಯರ್‌ಕಟ್ಟೆ ಕುಲಾಲ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಳೆದ ಆರು ದಶಕಗಳಿಂದ ಪಕ್ಷವನ್ನು ಬೇಟೆಯಾಡುತ್ತಿದ್ದರೂ ಬಿಜೆಪಿ- ಆರ್‌ಎಸ್‌ಎಸ್ ಕಾರ್ಯ ಕರ್ತರ ಉತ್ಸಾಹವನ್ನು ತಗ್ಗಿಸಲು ಸಿಪಿಎಂಗೆ ಸಾಧ್ಯವಾಗಿಲ್ಲವೆಂದು ಕೆ.ಟಿ. ಜಯಕೃಷ್ಣನ್ ಮಾಸ್ತರ್‌ರಂತಹ ಬಲಿದಾನಿಗಳು …

ಡೇಟಿಂಗ್ ಆಪ್ ಮೂಲಕ ಪರಿಚಯ: 16ರ ಬಾಲಕನಿಗೆ ದೌರ್ಜನ್ಯಗೈದ ಘಟನೆಯಲ್ಲಿ ಪೋಕ್ಸೋ ಕೇಸು ದಾಖಲು

ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡು ೧೬ರ ಹರೆಯದ ಬಾಲಕನನ್ನು ದೌರ್ಜನ್ಯಗೈದ ಘಟನೆಯಲ್ಲಿ ಚಂದೇರ ಪೊಲೀಸರು ಪೋಕ್ಸೋ ಕೇಸೊಂದನ್ನು ದಾಖಲಿಸಿ ದ್ದಾರೆ. ಪಯ್ಯನ್ನೂರು ನಿವಾಸಿಯಾದ ಪ್ರಸಾದ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರೊಂದಿಗೆ 16ರ ಹರೆಯದ ಬಾಲಕ ನೀಡಿದ ದೂರಿನಂತೆ ಚಂದೇರ ಪೊಲೀಸರು ನೋಂದಾಯಿಸಿದ ಪೋಕ್ಸೋ ಪ್ರಕರಣಗಳ ಸಂಖ್ಯೆ 15ಕ್ಕೇರಿದೆ. ಈ ಮೊದಲು ನೋಂದಾಯಿಸಿದ ಪ್ರಕರಣಗಳಲ್ಲಿ ಆರೋಪಿಗಳಾದ ಬೇಕಲ ಎಇಒ ಆಗಿದ್ದ ಪಡನ್ನಕ್ಕಾಡ್‌ನ ವಿ.ಕೆ. ಸೈನುದ್ದೀನ್ (52), ಆರ್‌ಪಿಎಫ್ ನೌಕರ …

ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 7.03 ಲಕ್ಷ ರೂ. ಮಂಜೇಶ್ವರದಲ್ಲಿ ವಶ

ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸ್ಪೆಷಲ್ ಡ್ರೈವ್‌ನಂಗವಾಗಿ ವಾಹನ ತಪಾಸಣೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಿಂದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 7.03 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸಿದ್ದಾರೆ.  ಕೋಟಯಂ ಜಿಲ್ಲೆಯ ಪಾಲ ತಾಲೂಕಿನ ಈರಾಟ್ ಪೇಟೆ ವಿಲ್ಲೇಜ್‌ನ ಹಸನ್ ಕುಂಞಿ ಎಂಬವರ ಪುತ್ರ ತಾಹ ಎಂಬಾತನನ್ನು ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಶಿಜಿಲ್ ಕುಮಾರ್ ಹಾಗೂ ತಂಡ ಕಸ್ಟಡಿಗೆ ತೆಗೆದಿದೆ. ತಂಡದಲ್ಲಿ ಇನ್ಸ್‌ಪೆಕ್ಟರ್ ಜಿನು …

ಅನಧಿಕೃತ ಪ್ರಚಾರ ಬ್ಯಾನರ್ ವಶಪಡಿಸಿ ಮುದ್ರಣ ಸಂಸ್ಥೆಗಳಿಗೆ ದಂಡ

ಕಾಸರಗೋಡು: ತ್ರಿಸ್ತರ ಚುನಾವಣೆಗೆ ಸಂಬಂಧಿಸಿ ವಿವಿಧ ಮುದ್ರಣ ಸಂಸ್ಥೆಗಳಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಪ್ರಿಂಟಿಂಗ್ ಮೆಟೀರಿಯಲ್‌ಗಳಲ್ಲಿ ಸರಕಾರ ನಿರ್ದೇಶಿಸಿದಂತಹ ಮೊಹರು ಹಾಕದ ಹಿನ್ನೆಲೆಯಲ್ಲಿ ಮುದ್ರಣ ಸಂಸ್ಥೆಯ ಮಾಲಕರಿಗೆ ದಂಡ ಹೇರಲಾಯಿತು. ಜಿಲ್ಲೆಯ ಎರಡು ಮುದ್ರಣ ಸಂಸ್ಥೆಗಳಿಂದ ಪ್ರಿಂಟ್ ಮಾಡಿದ ಬ್ಯಾನರ್‌ಗಳಲ್ಲಿ ಸಂಸ್ಥೆಯ ಹೆಸರು, ವಿಳಾಸ ಮುದ್ರಿಸದಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 1೦,೦೦೦ ರೂ.ನಂತೆ ದಂಡ ವಿಧಿಸಲಾಯಿತು. ಮುದ್ರಣ ಸಂಸ್ಥೆಗಳ ವಿಳಾಸ ಇಲ್ಲದೆ ನಿಷೇಧಿತ ಉತ್ಪನ್ನಗಳಲ್ಲಿ ಬೋರ್ಡ್‌ಗಳನ್ನು ಮುದ್ರಿಸಿ ಸ್ಥಾಪಿಸಿದ ಅಭ್ಯರ್ಥಿಗಳ ವಿರುದ್ಧವೂ ಕಠಿಣ ಕ್ರಮ ಉಂಟಾಗಲಿದೆ …

‘ಲೋಕ್‌ಭವನ್’ ಆಗಿ ಬದಲಾದ ಕೇರಳದ ‘ರಾಜ್‌ಭವನ್’

ತಿರುವನಂತಪುರ: ತಿರುವನಂ ತಪುರದಲ್ಲಿರುವ ಕೇರಳ ‘ರಾಜ್ ಭವನ್’ನ ಹೆಸರನ್ನು ‘ಲೋಕ್‌ಭವನ್’ ಆಗಿ ಬದಲಾಯಿಸಲಾಗಿದೆ.  ಇದರ ಜತೆಗೆ ಭಾರತದ ಹಲವು ರಾಜ್ಯಗಳ ರಾಜ್‌ಭವನಗಳ ಹೆಸರುಗಳು ಕೂಡಾ ಲೋಕ್‌ಭವನ್ ಆಗಿ ನಿನ್ನೆಯಿಂದ ಮಾರ್ಪಟ್ಟಿದೆ. ಲೆಫ್ಟಿನೆಂಟ್ ಗವರ್ನರ್‌ಗಳ ಔದ್ಯೋಗಿಕ ವಸತಿ ಹಾಗೂ ಕಚೇ ರಿಯೂ ಆಗಿರುವ ರಾಜ್‌ಭವನ್ ಗಳ ಹೆಸರನ್ನು ಲೋಕ್ ಭವನ್ ಆಗಿ ಮರುನಾಮಕರಣಗೊಳಿಸುವಂತೆ ಕೇಂದ್ರ ಗೃಹಖಾತೆ ದೇಶದ ಎಲ್ಲಾ ರಾಜ್ಯಗಳಿಗೂ ನಿರ್ದೇಶ ನೀಡಿದ್ದು, ಅದರ ಪ್ರಕಾರ ಕೇರಳ ರಾಜ್‌ಭವನದ ಹೆಸರನ್ನು ಬದಲಿಸಿ ಲೋಕ್ ಭವನ್ ಎಂದು ಮರುನಾಮಕರಣಗೊಳಿಸಿದ ಫಲಕವನ್ನು …