231 ಮಹಲ್ಲ್‌ಗಳ ಖಾಝಿಯಾಗಿ ಕಾಂತಾಪುರಂ ಅಧಿಕಾರ ಸ್ವೀಕಾರ

ಕಾಸರಗೋಡು: ಉಳ್ಳಾಲ ಜಮಾ ಯತ್‌ನ ಅಧೀನದಲ್ಲಿರುವ 231 ಮಹಲ್ಲ್‌ಗಳ ಖಾಝಿಯಾಗಿ ಕಾಂತಾ ಪುರಂ ಎ.ಪಿ. ಅಬೂಬಕರ್ ಮುಸ್ಲಿ ಯಾರ್ ನೇಮಕಗೊಂಡರು. ಕುಂಬಳೆ ಮಂಜೇಶ್ವರ ಬೆಳ್ತಂಗಡಿ, ಮುಡಿಪು, ದೇರಳಕಟ್ಟೆ, ಪುತ್ತೂರು ವಿಟ್ಲ ಎಂಬೀ ಸಂಯುಕ್ತ ಜಮಾಯತ್‌ಗಳ ಹೊಣೆ ಗಾರಿಕೆ ಕಾಂತಾಪುರಂ ಎ.ಪಿ. ಅಬೂ ಬಕರ್ ಮುಸ್ಲಿಯಾರ್‌ಗಾಗಿರುವುದು.

ಉಳ್ಳಾಲದಲ್ಲಿ  ನಡೆದ ಕಾರ್ಯಕ್ರಮ ವನ್ನು ಸಮಸ್ತ ಕರ್ನಾಟಕದ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು. ಸಯ್ಯಿದ್ ಹಮೀದ್ ಇಂಬಿಚ್ಚಿ ಕೋಯ ಅಲ್ ಬುಖಾರಿ ಪ್ರಾರ್ಥನೆ ನಡೆಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಯ್ಯಿದ್ ಅಲಿ ಬಾಫಖಿ ತಂಙಳ್ ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಯ್ಯಿದ್ ಅತ್ತಾವುಲ್ಲಾ ತಂಙಳ್ ಉದ್ಯಾವರ, ಸಯ್ಯಿದ್ ಶಹೀರ್ ಅಲ್ ಬುಖಾರಿ ಪೊಸೋಟ್, ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಙಳ್ ಆದೂರು ಮೊದಲಾದವರು ಉಪಸ್ಥಿತರಿದ್ದರು.

You cannot copy contents of this page