ಮಧೂರು: ಆರ್ಯ ಮರಾಠ ಸಮಾಜದ 39 ದೇವರ ಮನೆಗಳ ಒಕ್ಕೂಟದಿಂದ ಮಧೂರು ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಿಸಲಾಯಿತು. ಆಕರ್ಷಕ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳು, ವಿವಿಧ ಭಜನಾ ತಂಡಗಳು ಭಾಗವಹಿಸಿವೆ. ಆರ್ಯ ಯಾನೆ ಮರಾಠ ಸಮುದಾಯದ ಗೌರವಾಧ್ಯಕ್ಷೆ ಪ್ರೇಮಲತಾ ರಾವ್, ಅಧ್ಯಕ್ಷರಾದ ಮೋಹನ ರಾವ್ ಬೋಂಸ್ಲೆ, ಸಮುದಾಯ ಸಂಘದ ಅಧ್ಯಕ್ಷ ಗಿರಿಧರ್ ರಾವ್ ಚೊಟ್ಟೆ, ಪದಾಧಿಕಾರಿಗಳು, ದೇವರ ಮನೆಗಳ ಪದಾಧಿಕಾರಿಗಳು, ಒಕ್ಕೂಟದ ಸಂಚಾಲಕ ಪ್ರದೀಪ್‌ಚಂದ್ರ, ಉಪಸಂಚಾಲಕ ಪ್ರಮೋದ್ ಕುಮಾರ್, ಸಮಾಜ ಬಾಂಧವರು ಭಾಗವಹಿಸಿದರು.
