25 ಲಕ್ಷ ರೂ.ಪಡೆದು ವಂಚನೆ: ಅಂಬಲತ್ತರ ಕಳ್ಳನೋಟು ಪ್ರಕರಣದ ಆರೋಪಿಗಳು ಬಂಧನ
ಹೊಸದುರ್ಗ: ಕಳೆದ ಮಾರ್ಚ್ 22ರಂದು 6..96 ಕೋಟಿ ರೂಪಾಯಿ ಗಳ ಕಳ್ಳನೋಟು ವಶಪಡಿಸಿಕೊಂಡ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀ ನಿನಲ್ಲಿ ಬಿಡುಗಡೆಗೊಂಡ ಆರೋ ಪಿಗಳನ್ನು ಅನಿವಾಸಿಯ ೨೫ ಲಕ್ಷರೂಪಾಯಿ ವಂಚನೆಗೈದ ಪ್ರಕರಣದಲ್ಲಿ ಬಂಧಿಸಲಾಗಿದೆ. ಮವ್ವಲ್ ಪರಯಂಗಾನಂ ವೀ ಟಿಲ್ನ ಸುಲೈಮಾನ್ (೫೧), ಪೆರಿಯ ಸಿಎಚ್ಹೌಸ್ನ ಅಬ್ದುಲ್ ರಜಾಕ್ (೫೧) ಎಂಬಿವರು ಸೆರೆ ಗೀಡಾದವರಾಗಿದ್ದಾರೆ.
ಮಂಗಳೂರು ಬಿಜೈ ಭಾರತಿ ನಗರದಲ್ಲಿರುವ ಮಾಜಿ ಗಲ್ಫ್ ಉದ್ಯೋಗಿ ರೋಮಟ್ ಡಿ’ಸೋಜಾ ಎಂಬವರು ನೀಡಿದ ದೂರಿನಂತೆ ಇವರನ್ನು ಬಂಧಿಸಲಾಗಿದೆ. ೨೦೨೨ ನವಂಬರ್ ಕೊನೆಯ ವಾರದಲ್ಲಿ ಆರೋಪಿಗಳು ತನ್ನನ್ನು ಪರಿಚಯಗೊಂಡಿದ್ದರು. ಬಳಿಕ ಮುಂಬೈ ಕೇಂದ್ರೀಕರಿಸಿ ಬೃಹತ್ ಕಂಪೆನಿ ನಡೆಸುತ್ತಿರುವುದಾಗಿಯೂ ಆ ಕಂಪೆನಿಯಲ್ಲಿ ೨೫ ಲಕ್ಷ ರೂಪಾಯಿ ಠೇವಣಿ ಇರಿಸಿದರೆ ೪ ತಿಂಗಳೊಳಗೆ ೧ ಕೋಟಿ ರೂಪಾಯಿ ಬಡ್ಡಿ ಸಹಿತ ಮರಳಿ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಅಲ್ಲದೆ ಈ ಬಗ್ಗೆ ನಂಬಿಕೆ ಮೂಡಿಸಲು ಕಂಪೆನಿಯ ಸ್ಟೋರ್ ರೂಂನ ಬೃಹತ್ ಕೊಠಡಿಯೊಳಗೆ ಎರಡು ಸಾವಿರ ರೂಪಾಯಿಗಳ ಹಲವು ನೋಟು ಕಟ್ಟುಗಳೊಂದಿಗೆ ಆರೋಪಿ ಗಳು ನಿಂತಿರುವ ವೀಡಿಯೋವನ್ನು ತೋರಿಸಲಾಗಿದೆ. ಇಷ್ಟು ಮೊತ್ತ ಕಂಡಾಗ ಆರೋಪಿಗಳು ತಿಳಿಸಿರು ವುದು ಸತ್ಯವೆಂದು ಭಾವಿಸಿ ಆರೋ ಪಿಗಳು ತಿಳಿಸಿದಂತೆ ಅವರ ಬ್ಯಾಂಕ್ ಖಾತೆಗೆ ೫ ಲಕ್ಷ ರೂಪಾಯಿಗಳನ್ನು ಆವಾಗಲೇ ಠೇವಣಿ ಇರಿಸಲಾಗಿದೆ. ಬಾಕಿ ಮೊತ್ತವನ್ನು ೧೦ ದಿನಗಳೊಳಗೆ ಠೇವಣಿ ಇರಿಸುವುದಾಗಿ ತಿಳಿಸಿದ್ದೆನು. ಅನಂತರ ಒಂದನೇ ಆರೋಪಿ ನಿರಂತರ ಕರೆ ಮಾಡಿ ಬಾಕಿ ಮೊತ್ತವನ್ನು ಕೂಡಲೇ ಪಾವತಿಸು ವಂತೆ ಒತ್ತಾಯಿಸತೊಡಗಿದ್ದನು. ಇದರಿಂದ ಸ್ನೇಹಿತರು ಸಹಿತ ಹಲವರಿಂದ ಸಾಲವಾಗಿ ೨೦ ಲಕ್ಷ ರೂಪಾಯಿ ಸಂಗ್ರಹಿಸಿ ಅಂಬಲತ್ತರದ ಅವರ ಕಂಪೆನಿಯ ಕಚೇರಿಯೆಂದು ತಿಳಿಸಿದ ಮನೆಗೆ ತಲುಪಿಸಿರುವು ದಾಗಿ ರೋಮಟ್ ಡಿ’ಸೋಜಾ ತಿಳಿಸಿದ್ದಾರೆ. ಒಂದನೇ ಆರೋ ಪಿಯ ಎಲ್ಲಾ ಚಟು ವಟಿಕೆಗಳಿಗೆ ಎರಡನೇ ಆರೋಪಿ ಸಹಾಯ ವೊದಗಿಸಿದ್ದನು.
ಅನಂತರ ನಾಲ್ಕು ತಿಂಗಳು ಕಳೆದಾಗ ಹಣ ಕೇಳಲು ಆರೋ ಪಿಗೆ ಫೋನ್ ಕರೆ ಮಾಡಿದರೂ ಹಲವು ಕಾರಣಗಳನ್ನು ನೀಡಿ ತಪ್ಪಿಸಿಕೊಂಡಿದ್ದನು. ಈ ಮಧ್ಯೆ ಆರೋಪಿಗಳು ಕೋಟ್ಯಂತರ ರೂಪಾ ಯಿಗಳ ನಕಲಿ ಕರೆನ್ಸಿಯೊಂ ದಿಗೆ ಅಂಬಲತ್ತರದಲ್ಲಿ ಸೆರೆಗೀಡಾಗಿ ದ್ದರು. ಆರೋಪಿಗಳನ್ನು ಅಂಬಲತ್ತರ ಎಸ್ಐ ಕೆ. ಲತೀಶ್ ಬಂಧಿಸಿ ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಅವರಿಗೆ ರಿಮಾಂಡ್ ವಿಧಿಸಲಾಗಿದೆ.