27 ಗ್ರಾಂ ಎಂಡಿಎಂಎ ವಶ: ಇಬ್ಬರು ಯುವತಿಯರ ಸಹಿತ ನಾಲ್ವರ ಸೆರೆ

ಕಲ್ಲಿಕೋಟೆ: ಕಾರಿನಲ್ಲಿ ಸಾಗಿಸುತ್ತಿದ್ದ ೨೭ ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಇಬ್ಬರು ಯುವತಿಯರ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕಣ್ಣೂರು ನಿವಾಸಿಗಳಾದ ಅಮರ್ ಪಿ (32), ವೈಷ್ಣವಿ ಎಂ.ಕೆ (27), ಕುಟ್ಯಾಡಿಯ ಟಿ.ಕೆ. ವಾಹಿದ್ (38), ತಲಶ್ಶೇರಿಯ ವಿ.ಕೆ. ಆದಿರ (30) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಕಲ್ಲಿಕೋಟೆ ಸಿಟಿ ಡೆಪ್ಯುಟಿ ಕಮಿಶನರ್ ಅರುಣ್ ಕೆ ಪವಿತ್ರನ್‌ರಿಗೆ ಲಭಿಸಿದ ಮಾಹಿತಿಯ ಆಧಾರದಲ್ಲಿ ಕಲ್ಲಿಕೋಟೆ ಬೀಚ್ ರೋಡ್‌ನಲ್ಲಿ ಆಕಾಶವಾಣಿ ನಿಲಯದ ಸಮೀಪದಿಂದ ಆಂಟಿ ನಾರ್ಕೋಟಿಕ್ ಅಸಿಸ್ಟೆಂಟ್ ಕಮಿಶನರ್ ಜಿ ಬಾಲಚಂದ್ರನ್‌ರ ನೇತೃತ್ವದ ಡಾನ್ಸಾಪ್ ತಂಡ ಆರೋಪಿಗಳನ್ನು ಬಂಧಿಸಿದೆ. ಕಣ್ಣೂರಿನಿಂದ ಇವರು ಮಾದಕವಸ್ತು ಸಾಗಿಸಿದ್ದಾರೆನ್ನಲಾಗಿದೆ. ಪೊಲೀಸರಿಗೆ ಸಂಶಯ  ಉಂಟಾಗದಿರಲು ಯುವತಿ ಯರನ್ನು ಜತೆಗೆ ಸೇರಿಸಿಕೊಂಡಿರುವುದಾಗಿ  ಹೇಳಲಾಗುತ್ತಿದೆ. ಮಾದಕವಸ್ತು ಮಾರಾಟ ತಂಡದ ರೂವಾರಿಯಾದ ಅಮರ್ ಈ ಹಿಂದೆ  ಪ್ರಮುಖ ಇಲೆಕ್ಟ್ರೋನಿಕ್ ಅಂಗಡಿಯೊಂದರ ಕಲ್ಲಿಕೋಟೆ, ಕಣ್ಣೂರು, ಕುಟ್ಯಾಡಿ ಶಾಖೆಗಳಲ್ಲಿ ಮೆನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಒಂದು ತಿಂಗಳ ಹಿಂದೆ ಆ ಕೆಲಸ ಹೊರತುಪಡಿಸಿ ಮಾದಕವಸ್ತು ಸಾಗಾಟ ಆರಂಭಿಸಿದ್ದ ನೆಂದು ಪೊಲೀಸರು ತಿಳಿಸಿದ್ದಾರೆ. 

You cannot copy contents of this page