28 ದಿನದ ಹಸುಳೆ ನಿದ್ದೆಯಲ್ಲಿ ಸಾವು
ಕಾಸರಗೋಡು: ೨೮ ದಿನ ಪ್ರಾಯದ ಗಂಡು ಮಗು ನಿದ್ರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎದುರ್ತೋಡಿನ ಬದ್ರುದ್ದೀನ್-ತೆಕ್ಕಿಲ್ ಉಕ್ರಂಪಾಡಿಯ ಖದೀಜತ್ ಅಫ್‌ಸೀನಾ ದಂಪತಿಯ ಮಗು ನಿನ್ನೆ ಬೆಳಿಗ್ಗೆ ಉಕ್ರಂಪಾಡಿಯ ಮನೆಯಲ್ಲಿ ಅಲುಗಾಡದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದನ್ನು ಗಮನಿಸಿದ ಮನೆ ಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರೊಳಗೆ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ಮೇಲ್ಪರಂಬ ಪೊಲೀಸರು ಈ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.
ಮಗು ಆಸ್ಪತ್ರೆಗೆ ತರುವ ಮೂರು ತಾಸುಗಳ ಮೊದಲೇ ಸಾವನ್ನಪ್ಪಿರು ವುದಾಗಿ ವೈದ್ಯರು ಸ್ಪಷ್ಟಪಡಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಂಟಲಲ್ಲಿ ಎದೆಹಾಲು ಸಿಲುಕಿಕೊಂಡಿ ರುವುದೇ ಮಗುವಿನ ಸಾವಿಗೆ ಕಾರಣ ವೆಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಈ ಕುರಿತು ಫೋರೆನ್ಸಿಕ್ ತನಿಖಾ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.