29 ಲೀಟರ್ ಕರ್ನಾಟಕ ಮದ್ಯ ವಶ
ಮಂಜೇಶ್ವರ: ಬಾಯಾರು ಬಳಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 29.92 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಬಾಯಾರು ಕನಿಯಾಲ ಗುತ್ತಿನ ಕ್ರಿಸ್ಟಫರ್ ಕ್ರಾಸ್ತಾ (42) ಎಂಬಾತನ ವಿರುದ್ಧ ಕೇಸು ದಾಖಲಿ ಸಲಾಗಿದೆ. ಮಾಲು ಸಾಗಿಸಲು ಬಳಸಲಾದ ಬೈಕ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.
ಕುಂಬಳೆ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಕೆ.ಡಿ. ಮ್ಯಾಥ್ಯು ನೇತೃತ್ವದಲ್ಲಿ ಎಇಐ (ಗ್ರೇಡ್) ಅನೀಶ್ ಕುಮಾರ್, ಸಿಇಒ ಅಖಿಲೇಶ್, ಚಾಲಕ ಪ್ರವೀಣ್, ಐ.ಬಿ. ಘಟಕದ ಪ್ರಿವೆಂಟೀವ್ ಆಫೀಸರ್ ಜಿ. ಬಿಜೋಯ್, ಇ.ಕೆ. ಶ್ರೀನಿವಾಸನ್ ಪತ್ತಿಲ್, ಸುರೇಶನ್ ಪಿ (ಎಇಐ ಗ್ರೇಡ್) ಎಂಬವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.