3.44 ಗ್ರಾಂ ಎಂಡಿಎಂಎ ಸಹಿತ ಮೂವರ ಸೆರೆ
ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯು.ಪಿ. ವಿಪಿನ್ರ ನೇತೃತ್ವದ ಪೊಲೀ ಸರು ಉಳಿಯತ್ತಡ್ಕ ಬಿಲಲಾಲ್ನಗರ ದಲ್ಲಿ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕದ್ರವ್ಯವಾದ 3.4459 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಉಳಿಯತ್ತಡ್ಕದ ಅಬ್ದುಲ್ ಸಮದ್ ಕೆ.ಎ.(3೦), ಉಳಿಯತ್ತಡ್ಕ ನ್ಯಾಶನಲ್ ನಗರ್ ಪಟ್ಲ ಹೌಸ್ನ ಅಬ್ದುಲ್ ಜಾಸರ್ (29), ಮಾಯಿಪ್ಪಾಡಿ ಕುದ್ರೆಪ್ಪಾಡಿಯ ಅಬ್ದುಲ್ ಅಸೀಸ್ ಪಿ. (27) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಎಸ್ಐಗಳಾದ ಅಜೀಶ್, ಬಾಬು, ಎಎಸ್ಐ ಪ್ರಸಾದ್ ಮತ್ತು ಪೊಲೀಸರಾದ ಬೈಜು, ರಜೀಶ್, ಪ್ರಸೀದ, ಮನು, ನಾರಾಯಣನ್ ಎಂಬವರು ಒಳಗೊಂಡಿದ್ದಾರೆ.